Gen-Z: ಈ ಜನರೇಷನ್‌ಗೆ ಕೆಲಸ ಖಾಲಿ ಇಲ್ಲ ಎನ್ನುತ್ತಿರುವ ಕಂಪನಿಗಳು, ಕಾರಣವೇನು ?
Gen-Z: Z ಜನರೇಷನ್‌ನಲ್ಲಿ ಕೆಲಸದ ಜಾಗದಲ್ಲಿ ವಿಚಿತ್ರ ಸಮಸ್ಯೆಗಳಾಗುತ್ತಿವೆ ಎನ್ನುವ ವಿಷಯ ಬೆಳಕಿಗೆ ಬಂದಿದೆ. 1995ರ ನಂತರ ಹಾಗೂ 2012ರ ನಡುವೆ ಜನಿಸಿದವರನ್ನು Gen-Z ಅಥವಾ Z ಜನರೇಷನ್ ಅಂತ ಕರೆಯಲಾಗುತ್ತದೆ. ಈ ವಯಸ್ಸಿನ ಯುವಕ ಹಾಗೂ ಯುವತಿಯರು ಇದೀಗ ಹೊಸ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೆಲವು ಪ್ರಮುಖ ಹಾಗೂ ಪ್ರತಿಷ್ಠಿತ ಕಂಪನಿಗಳು ಈ ಜನರೇಷನ್ ಯುವಕ ಹಾಗೂ ಯುವತಿಯರನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದಕ್ಕೆ ಹಿಂದೆ ಮುಂದೆ ನೋಡುತ್ತಿದೆ.
ಅಷ್ಟೇ ಅಲ್ಲ ಈ ಜನರೇಷನ್‌ನಲ್ಲಿ ಇರುವವರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಗಳನ್ನು ಬದಲಾಯಿಸುತ್ತಿರುವುದು ಸಹ ಅವರ ಉದ್ಯೋಗಾವಕಾಶಗಳ ಮೇಲೆ ಪರಿಣಾಮ ಬೀರುತ್ತಿದೆ ಎನ್ನುತ್ತಿದೆ ಅಧ್ಯಯನ ವರದಿಗಳು. ಯಾಕೆ ಹೊಸ ತಲೆಮಾರಿಗೆ ಕೆಲಸ ಹುಡುಕುವುದ ಕಷ್ಟವಾಗುತ್ತಿದೆ. ಈ ಜನರೇಷನ್ ಎದುರಿಸುತ್ತಿರುವ ಸವಾಲುಗಳೇನು ಎನ್ನುವ ವಿವರ ಇಲ್ಲಿದೆ.

Gen-Z ಹೊಸ ಸಮಸ್ಯೆಯೊಂದನ್ನು ಎದುರಿಸುತ್ತಿದೆ. 1997 ಮತ್ತು 2012ರ ನಡುವೆ ಜನಿಸಿದವರು ಉದ್ಯೋಗ ಹುಡುಕುವುದಕ್ಕೆ ತಮ್ಮ ಸ್ಕಿಲ್ಸ್‌ಗಳನ್ನು ಬೆಳೆಸಿಕೊಂಡರೆ ಸಾಲದು. ಕೆಲಸದ ಸ್ಥಳದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಅಥವಾ ಕಂಪನಿಗಳಿಗೆ ಯಾವ ರೀತಿ ಹೊಂದಿಕೊಳ್ಳಬೇಕು ಎನ್ನುವ ನಿರೀಕ್ಷೆಗಳನ್ನು ಕಂಪನಿಗಳು ಮಾಡುತ್ತಿವೆ. ಆಘಾತಕಾರಿ ಅಂಶವೆಂದರೆ ಕೆಲವು ಸಂಸ್ಥೆಗಳು ಈ ತಲೆಮಾರಿನ ಯುವಕ ಹಾಗೂ ಯುವತಿಯರನ್ನು ದುಃಸ್ವಪ್ನದಂತೆ ಕಾಣುತ್ತಿದ್ದಾರೆ ಎನ್ನಲಾಗಿದೆ. ಆರು ಕಂಪನಿಗಳಲ್ಲಿ ಒಂದು ಕಂಪನಿ ಈ ತಲೆಮಾರಿನ ಉದ್ಯೋಗಿಗಳು ನಮ್ಮಲ್ಲಿ ಕೆಲಸಕ್ಕೆ ಬೇಡ ಎಂದು ಹೇಳುತ್ತಿದೆ.
ಪದೇ ಪದೇ ಕೆಲಸ ಬದಲಾಯಿಸುವುದು: Gen-Z ಯುವಕ ಮತ್ತು ಯುವತಿಯರನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಂಸ್ಥೆಗಳನ್ನು ಬದಲಾಯಿಸುತ್ತಿದ್ದಾರೆ. ಒಂದೊಂದು ಕಂಪನಿಗಳಲ್ಲಿ ಕನಿಷ್ಠ 1 ವರ್ಷದಿಂದ 18 ತಿಂಗಳು ಮಾತ್ರ ಕೆಲಸ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಈ ಜನರೇಷನ್‌ನ ಮೇಲಿದೆ. ಅಲ್ಲದೆ ಕೆಲಸ ವಾತಾವರಣಕ್ಕೆ ಹೊಂದಿಕೊಳ್ಳುವುದಿಲ್ಲ. ಅವರ ಡಿಮ್ಯಾಂಡ್‌ಗಳು ಜಾಸ್ತಿ ಎನ್ನುವ ಆರೋಪವೂ ಇದೆ. ಮಾಸಿಕ ಆರೋಗ್ಯ, ಪರ್ಸನಲ್ ಲೈಫ್ ವರ್ಕ್‌ಬ್ಯಾನ್ಸ್‌ಗೆ ಈ ಜನರೇಷನ್ ಹೆಚ್ಚು ಒತ್ತು ನೀಡುತ್ತದೆ. ಅದೇ ಬದ್ಧತೆ ಕೆಲಸದಲ್ಲೂ ಬೇಕು ಎಂದು ಸಂಸ್ಥೆಗಳು ಅಭಿಪ್ರಾಯಪಟ್ಟಿವೆ ಎನ್ನಲಾಗಿದೆ.

Gen-Z ಯುವಕ ಮತ್ತು ಯುವತಿಯರನ್ನು ಕೆಲಸಕ್ಕೆ ನೇಮಿಸಿಕೊಳ್ಳದೆ ಇರುವುದಕ್ಕೆ ಕಾರಣ: ಇನ್ನು Gen-Z ಯುವಕ ಮತ್ತು ಯುವತಿಯರನ್ನು ಕೆಲಸಕ್ಕೆ ನೇಮಿಸಿಕೊಳ್ಳದೆ ಇರುವುದಕ್ಕೆ ಸಂಸ್ಥೆಗಳು ಹಲವು ಕಾರಣಗಳನ್ನು ನೀಡುತ್ತಿದೆ. ಅದರಲ್ಲಿ ಕೆಲವೊಂದು ಪ್ರಮುಖ ಕಾರಣಗಳು ಈ ರೀತಿ ಇವೆ. ಮುಖ್ಯವಾಗಿ ಹೊಸದಾಗಿ ಕೆಲಸಕ್ಕೆ ಬರುವವರಲ್ಲಿ ಕೌಶಲ್ಯ ಕೊರತೆ ಇರುತ್ತದೆ.
ಅಲ್ಲದೆ ಈ ಜನರೇಷನ್‌ನ ಹಲವು ಯುವಕ ಮತ್ತು ಯುವತಿಯರು ಸುಲಭವಾಗಿ ನೊಂದುಕೊಳ್ಳುತ್ತಾರೆ. ಅಥವಾ ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳುವುದಿಲ್ಲ. ವೃತ್ತಿಪರತೆ, ಕಮ್ಯೂನಿಕೇಷನ್ ಹಾಗೂ ಕೆಲಸದ ಬದ್ಧತೆ ಸೇರಿದಂತೆ ಹಲವು ಕೊರತೆಗಳು ಈ ಜನರೇಷನ್‌ನ ಕೆಲವು ಯುವಕ ಹಾಗೂ ಯುವತಿಯರಲ್ಲಿ ಎಂದು ಕೆಲವು ಕಂಪನಿಗಳು ಅಭಿಪ್ರಾಯಪಟ್ಟಿವೆ ಎನ್ನಲಾಗಿದೆ.












Click it and Unblock the Notifications