ಬಿಬಿಎಂಪಿ ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಿವೆ
ಬೆಂಗಳೂರು, ಮೇ 7 : ಬೆಂಗಳೂರು ನಗರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ರಿ), ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮೇ 15, 2015.
ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಯಾವುದೇ ಕಾರಣಕ್ಕೂ ಹುದ್ದೆಗಳನ್ನು ಖಾಯಂಗೊಳಿಸಲಾಗುವುದಿಲ್ಲ. ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಯೋಜನೆ ಮುಕ್ತಾಯಗೊಂಡ ಬಳಿಕ ಸದರಿ ಹುದ್ದೆಗಳನ್ನು ರದ್ದುಪಡಿಸಲಾಗುತ್ತದೆ. [ನೇಮಕಾತಿ ಆದೇಶ ಕನ್ನಡದಲ್ಲಿ ಓದಿ]

ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ಮತ್ತು ಅಗತ್ಯ ದಾಖಲೆಗಳನ್ನು ನಗರ ಯೋಜನಾ ನಿರ್ವಹಣಾಧಿಕಾರಿಗಳು, ನಗರ ಯೋಜನಾ ನಿರ್ವಹಣಾಧಿಕಾರಿಗಳ ಕಚೇರಿ, ಐ.ಐ.ಪಿ. ತರಬೇತಿ ಕೇಂದ್ರ, ಕೊದಂಡರಾಮಪುರ, ಮಲ್ಲೇಶ್ವರಂ, ಬೆಂಗಳೂರು 560003 ವಿಳಾಸಕ್ಕೆ ಮೇ 15 ಸಂಜೆ 5 ಗಂಟೆಯೊಳಗೆ ತಲುಪುವಂತೆ ಅಂಚೆ ಅಥವ ಕೋರಿಯರ್ ಮೂಲಕ ಸಲ್ಲಿಕೆ ಮಾಡಬಹುದಾಗಿದೆ. [ಅರ್ಜಿಗಾಗಿ ಇಲ್ಲಿ ಕ್ಲಿಕ್ ಮಾಡಿ]
ಹುದ್ದೆಗಳ ವಿವರ : ವೈದ್ಯಾಧಿಕಾರಿಗಳು - 10, ಶುಶ್ರೂಷಕಿಯರು 73, ಪ್ರಯೋಗ ಶಾಲಾ ತಂತ್ರಜ್ಞರು 62, ಫಾರ್ಮಾಸಿಸ್ಟ್ 57, ಎ.ಎನ್.ಎಂ 273 ಹುದ್ದೆಗಳು ಖಾಲಿ ಇವೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನ್ನಡ ಜ್ಞಾನ ಕಡ್ಡಾಯವಾಗಿದೆ. [ವಿಜಯಪುರ ಕಂದಾಯ ಇಲಾಖೆಯಲ್ಲಿ 38 ಹುದ್ದೆ ಖಾಲಿ ಇದೆ]
ವಯೋಮಿತಿ : ಅರ್ಜಿಸಲ್ಲಿಸಲು ನಿಗದಿ ಪಡಿಸಿರುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ 18 ವರ್ಷ ತುಂಬಿರಬೇಕು. ಸಾಮಾನ್ಯ ವರ್ಗಕ್ಕೆ 35, 2ಎ/2ಬಿ/3ಎ/3ಬಿ ವರ್ಗಕ್ಕೆ 38 ವರ್ಷ, ಪ.ಜಾ./ಪ.ಪಂ/ಪ್ರವರ್ಗ 1ರ ಅಭ್ಯರ್ಥಿಗಳಿಗೆ 40 ವರ್ಷಗಳು.
ಅರ್ಜಿಯನ್ನು http://www.bbmp.gov.in/ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅಂಚೆ ಅಥವ ಕೋರಿಯರ್ ಮೂಲಕ ಸಲ್ಲಿಕೆ ಮಾಡುವ ಅರ್ಜಿಯು ತಡವಾಗಿ ತಲುಪಿದರೆ ಅದನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.












Click it and Unblock the Notifications