3.5 work Days: ಮುಂದಿನ ದಿನಗಳಲ್ಲಿ ಕೆಲಸದ ಅವಧಿ ವಾರಕ್ಕೆ 3.5 ದಿನ ಮಾತ್ರ, ಹೇಗೆ & ಯಾಕೆ ಗೊತ್ತಾ!
ಭಾರತದಲ್ಲಿ ಇದೀಗ ಎಷ್ಟು ಗಂಟೆ ಕೆಲಸ ಮಾಡಬೇಕು ಎನ್ನುವುದು ಭಾರೀ ಚರ್ಚೆಯಾಗುತ್ತಿರುವ ವಿಷಯ. ಅದರಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಅನ್ನೋದು. ಯುಎಸ್‌ನ ಶ್ರೀಮಂತ ಸಂಸ್ಥೆಗಳು ಒಡೆಯರು ವಾರಕ್ಕೆ 80 ಗಂಟೆ ಕೆಲಸ ಮಾಡಬೇಕು ಅಂತ ಹೇಳೋದು ವರದಿ ಆಗುತ್ತಲ್ಲೇ ಇದೆ. ಇದು ಸಾಮಾನ್ಯ ಜನರಿಗೆ ಶಾಕಿಂಗ್. ಪರಿಶ್ರಮ ಹಾಕಿ ಕೆಲಸ ಮಾಡುವವರಿಗೆ ಹಾಗೂ ಟ್ರಾಫಿಕ್‌ನಲ್ಲಿ ಗುದ್ದಾಡುವವರಿಗೆ ಸ್ವಲ್ಪ ಫ್ಯಾಮಿಲಿಗೂ ಟೈಮ್ ಕೊಡ್ಬೇಕು ಅನ್ನುವವರಿಗೆ ಇದು ಡಬಲ್ ಟಾಸ್ಕ್ ಇದೇ ಕಾರಣಕ್ಕೆ ನಾರಾಯಣ ಮೂರ್ತಿ ಹೇಳಿಕೆಯನ್ನ ತುಂಬಾ ಜನ ವಿರೋಧಿಸಿದ್ದರು. ಇದೀಗ ಮೊದಲ ಬಾರಿ ಕೆಲಸದ ವಿಚಾರದಲ್ಲಿ ಸಂತೋಷದ ಸುದ್ದಿ ಬಂದಿದೆ. ಅದೇ ಮುಂದಿನ ದಿನಗಳಲ್ಲಿ ಕೆಲಸದ ಅವಧಿ ವಾರಕ್ಕೆ 3.5 ದಿನ ಮಾತ್ರ ಅನ್ನೋದು.
ಕೇಳುವುದಕ್ಕೆ ಖುಷಿ ಅನಿಸುತ್ತಿರಬಹುದು. ಹೌದು ವಾರಕ್ಕೆ 70 ಗಂಟೆ ಇಲ್ಲ 80 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಶ್ರೀಮಂತ ಉದ್ಯಮಿಗಳು ಹೇಳಿದ್ದನ್ನು ಕೇಳಿ ಜನ ಕಂಗಾಲಾಗಿದ್ದರು. ಈ ರೀತಿ 70 ರಿಂದ 80 ಗಂಟೆ ಕೆಲಸ ಮಾಡಿದರೆ ನಮ್ಮ ಆರೋಗ್ಯ ಹಾಗೂ ಕುಟುಂಬದವರ ಕಥೆ ಏನಾಗಬೇಕು ಅಂತ ಆತಂಕ ವ್ಯಕ್ತಪಡಿಸಿದ್ದರು. ಕೆಲಸ ಜೀವನದ ಭಾಗವಾಗಬೇಕು, ಕೆಲಸವೇ ಜೀವನವಲ್ಲ ಎನ್ನುವ ಅಭಿಪ್ರಾಯ ಕೇಳಿ ಬಂದಿತ್ತು. ಪರ್ಸನಲ್ ಲೈಫ್ & ವರ್ಕ್ ಲೈಫ್‌ನ ಬಗ್ಗೆ ನಾನೆಲ್ಲ ನಂಬಲ್ಲ ಕಣ್ರಿ, ನಮ್ಮ ದೇಶ ಉದ್ಧಾರ ಆಗಬೇಕಂದರೆ ಯುವಕರು ಕನಿಷ್ಠ 70 ಗಂಟೆನಾದರೂ ಕೆಲಸ ಮಾಡಬೇಕು ಅಂತ ನಾರಾಯಣ ಮೂರ್ತಿ ಅವರು ಹೇಳಿದ್ದರು. ಅಷ್ಟೇ ಅಲ್ಲ ನಾನು ಸತ್ತರೂ ನನ್ನ ಅಭಿಪ್ರಾಯ ಅಥವಾ ದೃಷ್ಟಿಕೋನ ಬದಲಾಯಿಸಿಕೊಳ್ಳಲ್ಲ ಅಂದಿದ್ದರು.

ಇದೀಗ ಈ ಎಲ್ಲಾ ಅಭಿಪ್ರಾಯಗಳಿಗೆ ವಿರುದ್ಧವಾಗಿ ಒಂದು ಬೆಳವಣಿಗೆ ನಡೆದಿದೆ. ನೀವು ಈ ವಿಷಯವನ್ನು ಕೇಳಿದರೆ ಸಂತೋಷದಲ್ಲಿ ಕುಣಿದಾಡುವುದು ಗ್ಯಾರಂಟಿ. ಹೌದು ಮುಂದಿನ ದಿನಗಳಲ್ಲಿ ಕೆಲಸದ ಅವಧಿ ಕೇವಲ ವಾರಕ್ಕೆ 3.5 ದಿನಗಳಿಗೆ ಇಳಿಯಲಿದೆ. ಅಂದರೆ ಈಗ ಕೆಲಸ ಮಾಡುತ್ತಿರುವ ಸಮಯಕ್ಕಿಂತ ಅರ್ಧಕ್ಕೆ ಕೆಲಸದ ಸಮಯ ಇಳಿಯಲಿದೆ. ಇದನ್ನು ಅಮೆರಿಕದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾಗಿರುವ ಜೆಪಿ ಮೋರ್ಗಾನ್ ಸಿಇಒ ಜೇಮೀ ಡಿಮನ್ ಅವರೇ ಹೇಳಿದ್ದಾರೆ. ಇದಕ್ಕೆ ಅವರು ನೀಡಿರುವ ಕಾರಣವೂ ಸೊಗಸಾಗಿದೆ.
ಈಗೆಲ್ಲ ಜನ ಮೊದಲ ರೀತಿ ಕೆಲಸ ಮಾಡುವುದಕ್ಕೆ ಇಷ್ಟಪಡಲ್ಲ. ಎಲ್ಲರೂ ಫ್ಯಾಮಿಲಿಗೂ ಸ್ವಲ್ಪ ಟೈಮ್ ಕೊಡ್ಬೇಕು ಅಂತ ನೋಡ್ತಾರೆ. ಕೆಲಸ ಮಾಡುವುದು, ದುಡಿಯುವುದು ಹಾಗೂ ಹಣ ಮಾಡುವುದೆಲ್ಲ ಫ್ಯಾಮಿಲಿಗೆ ಟೈಮ್ ಕೊಡ್ಬೇಕು ನಾವೆಲ್ಲ ಚೆನ್ನಾಗಿ ಇರಬೇಕು ಅಂತಲೇ. ದಿನದ 24 ಗಂಟೆನೂ ಯಾರು ಕೆಲ್ಸ ಮಾಡ್ತಾರೆ ಎನ್ನುವ ಅಭಿಪ್ರಾಯ ಈಗಿನ ಜನರೇಷನ್‌ನಲ್ಲಿ ಇದೆ.

ವಾರಕ್ಕೆ ಕೇವಲ 3.5 ದಿನ ಮಾತ್ರ ಕೆಲಸ!
ಮುಂದಿನ ದಿನಗಳಲ್ಲಿ ಜನ ವಾರಕ್ಕೆ 3.5 ದಿನ ಮಾತ್ರ ಕೆಲಸ ಮಾಡುವ ದಿನಗಳು ಬರಲಿವೆ. ಇದೆಲ್ಲ ಎಐ (AI) ತಂತ್ರಜ್ಞಾನದಿಂದ ಸಾಧ್ಯವಾಗಲಿದೆ ಎಂದು ಜೇಮೀ ಡಿಮನ್ ಹೇಳಿದ್ದಾರೆ. ಎಐ ಬಂದರೆ ನಾವು ಕೆಲಸ ಕಳೆದುಕೊಳ್ಳುತ್ತೀವಿ. ನಮ್ಮ ಕೆಲಸಗಳೆಲ್ಲ ಹೋಗುತ್ತೆ ಎನ್ನುವ ಆತಂಕಗಳ ನಡುವೆ ಡಿಮನ್ ಅವರು ಈ ರೀತಿ ಹೇಳಿದ್ದಾರೆ. ಎಐನಿಂದ ಒಳ್ಳೆಯದೇ ಆಗಲಿದೆ. ಈಗ ಮಾಡುತ್ತಿರುವ ಕೆಲಸಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಸರಳವಾಗಲಿದೆ. ಆಗ ನಿಮ್ಮ ಕೆಲಸದ ಅವಧಿ ವಾರಕ್ಕೆ ಕೇವಲ 3.5 ದಿನಗಳು ಮಾತ್ರ ಇರಲಿದೆ ಎಂದಿದ್ದಾರೆ.
ಅವರು ಇನ್ನೊಂದು ಅಚ್ಚರಿಯ ಸಂಗತಿಯನ್ನೂ ಹೇಳಿದ್ದಾರೆ. ಈ ರೀತಿ ಕಡಿಮೆ ಅವಧಿ ಕೆಲಸದಿಂದ ನೀವು ಒತ್ತಡ ರಹಿತ ಕೆಲಸ ಮಾಡಬಹುದು. ನಿಮ್ಮ ಮಕ್ಕಳು ಮುಂದಿನ ದಿನಗಳಲ್ಲಿ 100 ವರ್ಷ ಬದುಕಲಿದ್ದಾರೆ. ಆರೋಗ್ಯ ಹಾಗೂ ವೈಯಕ್ತಿಕ ಜೀವನಕ್ಕೆ ಟೈಮ್ ಕೊಡೋಕೆ ಇದು ಸಹಕಾರಿ ಅಂತ ಹೇಳಿದ್ದಾರೆ.












Click it and Unblock the Notifications