ರಾಜರಾಜೇಶ್ವರಿ ನಗರದ ಚುನಾವಣೆ : ಯಾರಿಗೆ ಎಷ್ಟು, ಮತ?
ಬೆಂಗಳೂರು, ಮೇ 31 : ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ನಾಯ್ಡು ಅವರು 108064 ಮತಗಳನ್ನು ಪಡೆದು ಜಯಗಳಿಸಿದ್ದಾರೆ. 2ನೇ ಬಾರಿಗೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಮೇ 28ರಂದು ನಡೆದಿದ್ದ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ಫಲಿತಾಂಶ ಗುರುವಾರ ಪ್ರಕಟವಾಗಿದೆ. ಬಿಜೆಪಿಯ ಮುನಿರಾಜು ಗೌಡ 82,572 ಮತಗಳನ್ನು ಪಡೆದು 2ನೇ ಸ್ಥಾನ, ಜೆಡಿಎಸ್‌ನ ಜಿ.ಎಚ್.ರಾಮಚಂದ್ರ ಅವರು 60360 ಮತಗಳನ್ನು ಪಡೆದು 3ನೇ ಸ್ಥಾನ ಪಡೆದಿದ್ದಾರೆ.
ಕ್ಷೇತ್ರದ ಚುನಾವಣೆಯಲ್ಲಿ ಕುತೂಹಲ ಹುಟ್ಟಿಸಿದ್ದ ಅಭ್ಯರ್ಥಿ ನಟ, ನಿರ್ದೇಶಕ ಹುಚ್ಚ ವೆಂಕಟ್. ಚುನಾವಣೆಯಲ್ಲಿ ಅವರು 764 ಮತಗಳನ್ನು ಪಡೆದಿದ್ದಾರೆ. 2724 ನೋಟಾ ಮತಗಳು ಚಲಾವಣೆಯಾಗಿವೆ.
ಯಾವ ಅಭ್ಯರ್ಥಿಗೆ ಎಷ್ಟು ಮತ ಸಿಕ್ಕಿದೆ ನೋಡಿ...













Click it and Unblock the Notifications