Infographics: ನ.13ರಂದು ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ
ಬೆಂಗಳೂರು, ನವೆಂಬರ್ 12: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನವೆಂಬರ್ 13 ರಂದು ಶನಿವಾರ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರವಾಗಿದೆ.
ಶನಿವಾರ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದೆ. ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಪ್ರತಿ ಲೀಟರ್ ಗೆ 100.58 ರೂ. ಮತ್ತೆ ಡೀಸೆಲ್ ಪ್ರತಿ ಲೀಟರ್‌ಗೆ 85.01 ರೂ. ಇದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 103.97 ರೂ., ಡೀಸೆಲ್ ದರ 86.67 ರೂ. ಮುಂಬೈನಲ್ಲಿ, ಪೆಟ್ರೋಲ್ ಅನ್ನು ಲೀಟರ್‌ಗೆ 109.98 ರೂ.ಗೆ ಖರೀದಿಸಬಹುದು ಮತ್ತು ಡೀಸೆಲ್ ಬೆಲೆ ಒಂದು ಲೀಟರ್‌ಗೆ 94.14 ರೂ.
ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿದ ಬೆನ್ನಿಗೆ ರಾಜ್ಯ ಸರಕಾರವೂ ಇಂಧನದ ಬೆಲೆ ಇಳಿಕೆ ಮಾಡಲು ತೀರ್ಮಾನಿಸಿರೋದು ವಾಹನ ಸವಾರರಿಗಂತೂ ದೀಪಾವಳಿ ಸಮಯದಲ್ಲಿ ಸ್ವಲ್ಪ ಮಟ್ಟಿಗೆ ಖುಷಿ ಸಿಕ್ಕಂತಾಗಿದೆ. ಕೇಂದ್ರ ಸರಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 5 ರೂ., ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 10 ರೂ. ಇಳಿಕೆ ಮಾಡಿದ್ರೆ, ಇದರ ಬೆನ್ನಿಗೆ ರಾಜ್ಯ ಸರಕಾರವೂ ಡೀಸೆಲ್ ಮತ್ತು ಪೆಟ್ರೋಲ್ ದರವನ್ನು ತಲಾ 7 ರೂ. ಕಡಿತಗೊಳಿಸಿತ್ತು.

ಇಂದು ಶನಿವಾರ ದೇಶದ ಪ್ರಮುಖ ನಗರಗಳಲ್ಲಿನ ತೈಲ ಬೆಲೆಯ ಬಗ್ಗೆ ನೋಡೋದಾದ್ರೆ ಬೆಂಗಳೂರಿನಲ್ಲಿ ನಿನ್ನೆ ಬೆಳಗ್ಗೆ 100.58 ರೂ. ಇದ್ದ ಪೆಟ್ರೋಲ್ ದರ ಇಂದು ಬೆಳಗ್ಗಿನ ವೇಳೆ ಅದೇ ದರ ಮುಂದುವರಿದಿದೆ. ಅಂತೆಯೇ ಡೀಸೆಲ್ ದರ ಕೂಡ ನಿನ್ನೆ ಬೆಳಗ್ಗೆ 85.01 ರೂ. ಇತ್ತು. ಇಂದು ಕೂಡ ಅದೇ ದರ ತಟಸ್ಥವಾಗಿದೆ. ಅಂದ ಹಾಗೆ ತೈಲದ ಮೇಲಿನ ತೆರಿಗೆ ಇಳಿಸಿದ ನಂತರ ಬೆಂಗಳೂರಿನಲ್ಲಿ ಪೈಸೆಗಳ ಲೆಕ್ಕಾಚಾರದಲ್ಲಿ ತೈಲ ಬೆಲೆ ಏರಿಳಿಕೆಯಾಗುತ್ತಿದೆ. ಉಳಿದಂತೆ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಡೀಸೆಲ್ ದರ ತಟಸ್ಥವಾಗಿದೆ.
ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 101.40 ರೂ. ಶುಕ್ರವಾರ ಪ್ರತಿ ಲೀಟರ್ ಡೀಸೆಲ್ ಬೆಲೆ 91.43 ರೂ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 104.67 ರೂ., ಡೀಸೆಲ್ ಬೆಲೆ ಲೀಟರ್‌ಗೆ 101.56 ರೂ., ಭೋಪಾಲ್‌ನಲ್ಲಿ 107.23 ರೂ.ಗೆ ಪೆಟ್ರೋಲ್ ಖರೀದಿಸಬಹುದು, ಅಂದರೆ 6.27 ರೂ. ಇಳಿಕೆಯಾಗಿದೆ, ಡೀಸೆಲ್ ಬೆಲೆ(Diesel price) ಲೀಟರ್‌ಗೆ 90.87 ರೂ.
ಕೇಂದ್ರದ ಅಬಕಾರಿ ಸುಂಕ ಕಡಿತ ಮತ್ತು 20ಕ್ಕೂ ಹೆಚ್ಚು ರಾಜ್ಯಗಳು ಕಡಿತಗೊಳಿಸಿರುವ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮಧ್ಯೆ ದೇಶದಾದ್ಯಂತ ಸತತ 7ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ವಾರ ಕೇಂದ್ರ ಸರ್ಕಾರ ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು.
ಪ್ರತಿ ಲೀಟರ್ ಪೆಟ್ರೋಲ್ ಮೇಲೆ 5 ರೂ. ಮತ್ತು ಡೀಸೆಲ್ ಮೇಲೆ 10 ರೂ.ನಷ್ಟು ಕಡಿಮೆ ಮಾಡಿತ್ತು. ಬೆಲೆ ಕಡಿತದ ನಂತರ ಪೆಟ್ರೋಲ್ ಬೆಲೆ ಬಹುತೇಕ ಭಾಗದಲ್ಲಿ ಲೀಟರ್‌ಗೆ ರೂ 100 ರೂ.ಗಿಂತ ಕಡಿಮೆಯಾಗಿದೆ. ಆಡಳಿತಾರೂಢ ಬಿಜೆಪಿ ಸೇರಿದಂತೆ ಕೆಲವು ರಾಜ್ಯಗಳು ಇಂಧನ ದರದ ಮೇಲಿನ ವ್ಯಾಟ್ ಅನ್ನು ಕಡಿತಗೊಳಿಸಿವೆ.

ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳಲ್ಲಿ ರೂಪಾಯಿಗಳಿಂದ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನದ ಬೇಡಿಕೆ ಇತ್ಯಾದಿಗಳು ಸೇರಿವೆ. ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಗಳು ಹೆಚ್ಚಾದಾಗ ಭಾರತದಲ್ಲೂ ಸಾಮಾನ್ಯವಾಗಿ ಬೆಲೆ ಏರಿಕೆಯಾಗುವುದು ವಾಡಿಕೆಯಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ನಿತ್ಯ ನಿರಂತರವಾಗಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಬಂದಿತ್ತು. ಪ್ರತಿದಿನ ಬೆಲೆ ಏರಿಕೆಯಿಂದ ರೋಸಿ ಹೋಗಿದ್ದ ವಾಹನ ಸವಾರರು ಸೋಷಿಯಲ್ ಮೀಡಿಯಾಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಬಳಿಕ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ದೀಪಾವಳಿ ಹಬ್ಬದ ಸಮಯದಲ್ಲಿ ತೈಲ ಬೆಲೆ ಇಳಿಕೆ ಮಾಡಿತ್ತು. ಹಾಗೆ ನೋಡಿದ್ರೆ ಏರಿಕೆಯಾದ ಬೆಲೆಯನ್ನೇ ಸ್ವಲ್ಪ ಮಟ್ಟಿಗೆ ಇಳಿಕೆ ಮಾಡಿದಂತಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ಬದಲಾಗುತ್ತವೆ. ಸಂಜೆ 6 ರಿಂದ ಹೊಸ ಶುಲ್ಕಗಳು ಅನ್ವಯವಾಗುತ್ತವೆ. ಅಬಕಾರಿ ತೆರಿಗೆ, ಡೀಲರ್ ಕಮಿಷನ್ ಮತ್ತು ಹೀಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸೇರಿಸಿದ ನಂತರ, ಅದರ ಬೆಲೆ ಬಹುತೇಕ ದ್ವಿಗುಣಗೊಳ್ಳುತ್ತದೆ.
ವಿದೇಶಿ ವಿನಿಮಯ ದರಗಳೊಂದಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆ ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿದಿನ ಬದಲಾಗುತ್ತವೆ.
ವಿವಿಧ ಜಿಲ್ಲೆಗಳ ಪೆಟ್ರೋಲ್ ದರ
ಬಾಗಲಕೋಟೆ - 101.08ರೂ.
ಬೆಂಗಳೂರು - 100.58 ರೂ.
ಬೆಂಗಳೂರು ಗ್ರಾಮಾಂತರ -100.22
ಬೆಳಗಾವಿ - 100.44 ರೂ.
ಬಳ್ಳಾರಿ - 101.85ರೂ.
ಬೀದರ್ - 101.89
ವಿಜಯಪುರ-100.28 ರೂ.
ಚಾಮರಾಜನಗರ - 100.46ರೂ.
ಚಿಕ್ಕಬಳ್ಳಾಪುರ - 100.32ರೂ.
ಚಿಕ್ಕಮಗಳೂರು - 101.32ರೂ.
ಚಿತ್ರದುರ್ಗ - 102.25 ರೂ.
ದಕ್ಷಿಣ ಕನ್ನಡ - 99.76
ದಾವಣಗೆರೆ - 102.79 ರೂ.
ಧಾರವಾಡ - 100.60ರೂ.
ಗದಗ - 100.76 ರೂ.
ಕಲಬುರಗಿ - 100.28ರೂ.
ಹಾಸನ - 100.92 ರೂ.
ಹಾವೇರಿ - 101. ರೂ.
ಕೊಡಗು - 101.92 ರೂ.
ಕೋಲಾರ - 100.96 ರೂ.
ಕೊಪ್ಪಳ- 101.69 ರೂ.
ಮಂಡ್ಯ - 100.79 ರೂ.
ಮೈಸೂರು - 100.22 ರೂ.
ರಾಯಚೂರು - 101.19ರೂ.
ರಾಮನಗರ - 101.16 ರೂ.
ಶಿವಮೊಗ್ಗ - 102.11 ರೂ.
ತುಮಕೂರು - 101.15 ರೂ.
ಉಡುಪಿ - 101.26ರೂ.
ಉತ್ತರಕನ್ನಡ - 101.63ರೂ
ಯಾದಗಿರಿ - 101.87ರೂ.
ಡೀಸೆಲ್ ದರ
ಬಾಗಲಕೋಟೆ - 85.49
ಬೆಂಗಳೂರು - 85.01
ಬೆಂಗಳೂರು ಗ್ರಾಮಾಂತರ - 84.68
ಬೆಳಗಾವಿ - 84.91
ಬಳ್ಳಾರಿ - 86.18
ಬೀದರ್ - 85.45
ಬಿಜಾಪುರ - 86.22
ಚಾಮರಾಜನಗರ - 84.90
ಚಿಕ್ಕಬಳ್ಳಾಪುರ - 84.78
ಚಿಕ್ಕಮಗಳೂರು - 85.58
ಚಿತ್ರದುರ್ಗ - 86.39
ದಕ್ಷಿಣ ಕನ್ನಡ - 86.24
ದಾವಣಗೆರೆ - 86.88
ಧಾರವಾಡ - 85.05
ಗದಗ - 85.20
ಕಲಬುರಗಿ - 84.77
ಹಾಸನ - 85.19
ಹಾವೇರಿ - 85.41
ಕೊಡಗು - 86.09
ಕೋಲಾರ - 85.36
ಕೊಪ್ಪಳ- 86.04
ಮಂಡ್ಯ - 84.90
ಮೈಸೂರು -84.56
ರಾಯಚೂರು - 85.60
ರಾಮನಗರ - 85.54
ಶಿವಮೊಗ್ಗ - 86.31
ತುಮಕೂರು - 85.63
ಉಡುಪಿ - 84.70
ಉತ್ತರಕನ್ನಡ - 85.93
ಯಾದಗಿರಿ - 86.20












Click it and Unblock the Notifications