Infographics: ನವೆಂಬರ್ 08 ರಂದು ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ
ಬೆಂಗಳೂರು, ನವೆಂಬರ್ 08: ಸತತ ನಾಲ್ಕನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿಲ್ಲ.
ಪ್ರಸ್ತುತ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 103.97 ರೂ. ಮತ್ತು ಡೀಸೆಲ್‌ನ ಬೆಲೆ ಲೀಟರ್‌ಗೆ 86.67 ರೂ. ಆಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕ್ರಮವಾಗಿ 109.98 ರೂ. ಮತ್ತು 94.14 ರೂ. ಇದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 100.58 ರೂ. ಇದ್ದರೆ ಮತ್ತು ಡೀಸೆಲ್ ಬೆಲೆ 85.01 ರೂ. ಇದೆ.
ರಾಷ್ಟ್ರ ರಾಜಧಾನಿ ದೆಹಲಿ, ಬೆಂಗಳೂರು, ಮುಂಬೈ, ಕೋಲ್ಕತ್ತಾ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಸೋಮವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಕೋಲ್ಕತ್ತಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ 104.67 ರೂ. ಮತ್ತು ₹89.79 ರೂ. ಇದೆ. ಚೆನ್ನೈನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 101.40 ರೂ. ಇದ್ದರೆ, ಡೀಸೆಲ್ 91.43 ರೂ. ಇದೆ. ಹೈದರಾಬಾದ್‌ನಲ್ಲಿ 1 ಲೀಟರ್ ಪೆಟ್ರೋಲ್ 108.20 ರೂ. ಮತ್ತು 1 ಲೀಟರ್ ಡೀಸೆಲ್‌ಗೆ 94.62 ರೂ. ಇದೆ. ಸ್ಥಳೀಯ ತೆರಿಗೆಗಳು ಮತ್ತು ಸಾರಿಗೆ ವೆಚ್ಚವನ್ನು ಅವಲಂಬಿಸಿ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ.
ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ದೇಶದ ಜನರಿಗೆ ಕೊಂಚ ರಿಲೀಫ್ ನೀಡಿದ್ದ ಕೇಂದ್ರ ಸರಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 5 ರೂ. ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 10 ರೂ. ಇಳಿಕೆ ಮಾಡಿತ್ತು. ಇದಾದ ಬೆನ್ನಿಗೆ ರಾಜ್ಯ ಸರ್ಕಾರವೂ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ತಲಾ 7 ರೂ. ಕಡಿತಗೊಳಿಸಿತ್ತು. ಇದರಿಂದ ಜನಸಾಮಾನ್ಯರಿಗೆ ತುಸು ನೆಮ್ಮದಿ ಸಿಕ್ಕಂತಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಳು ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ಬದಲಾಗುತ್ತವೆ. ಸಂಜೆ 6 ರಿಂದ ಹೊಸ ಶುಲ್ಕಗಳು ಅನ್ವಯವಾಗುತ್ತವೆ. ಅಬಕಾರಿ ತೆರಿಗೆ, ಡೀಲರ್ ಕಮಿಷನ್ ಮತ್ತು ಹೀಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸೇರಿಸಿದ ನಂತರ, ಅದರ ಬೆಲೆ ಬಹುತೇಕ ದ್ವಿಗುಣಗೊಳ್ಳುತ್ತದೆ.

ವಿದೇಶಿ ವಿನಿಮಯ ದರಗಳೊಂದಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆ ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿದಿನ ಬದಲಾಗುತ್ತವೆ.
ಉಳಿದ ಎಲ್ಲಾ ರಾಜ್ಯಗಳಲ್ಲಿನ ಸೆಸ್, ವ್ಯಾಟ್ ಅಧಿಕವಾಗಿರುವುದರಿಂದ ಯಾವ ರಾಜ್ಯದಲ್ಲೂ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಮೇಲೆ 101 ರು ಗಿಂತ ತಗ್ಗಿರಲಿಲ್ಲ. ಈಗ 23 ರಾಜ್ಯಗಳಲ್ಲಿ ಈಗ ಬೆಲೆ ಇಳಿಕೆಯಾಗಿದೆ. ಚಂಡೀಗಢ, ನೋಯ್ಡಾದಲ್ಲಿ ಬೆಲೆ 100 ರು ಗಿಂತ ಕೆಳಗಿದೆ.
ಮೇ 4ರಿಂದ ಇಂದಿನ ತನಕ ಪೆಟ್ರೋಲ್ ಒಟ್ಟು 56 ಬಾರಿ ಹಾಗೂ ಡೀಸೆಲ್ 51 ಬಾರಿ ಏರಿಕೆಯಾಗಿದೆ. ಮೇ 4ರಿಂದ ಪೆಟ್ರೋಲ್ 13 ರು ಪ್ರತಿ ಲೀಟರ್ ಹಾಗೂ ಡೀಸೆಲ್ 11 ರು ಪ್ರತಿ ಲೀಟರ್ ಆಗಿದೆ.
ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ, ಉತ್ತರಪ್ರದೇಶ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ಲಡಾಕ್, ಬಿಹಾರ, ಕೇರಳ, ಪಂಜಾಬ್, ಸಿಕ್ಕಿಂ ಹಾಗೂ ನಾಗಾಲ್ಯಾಂಡ್ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 110 ರು ಪ್ಲಸ್ ದಾಟಿದೆ. ಈ ಪೈಕಿ ಅನೇಕ ರಾಜ್ಯಗಳಲ್ಲಿ ವ್ಯಾಟ್, ಸೆಸ್ ದರ ಅಧಿಕವಾಗಿವೆ.
ತೈಲ ಕಂಪನಿಗಳು ಅಳವಡಿಸಿಕೊಂಡ ಬೆಲೆ ಸೂತ್ರದ ಪ್ರಕಾರ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ( HPCL)ಅಂತಾರಾಷ್ಟ್ರೀಯ ಬೆಲೆ ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಇಂಧನ ಬೆಲೆಯನ್ನು ಪ್ರತಿದಿನ ಪರಿಷ್ಕರಿಸುತ್ತವೆ. ಪ್ರಸ್ತುತ ದೇಶದ 4 ಮೆಟ್ರೋ ನಗರಗಳಲ್ಲಿ ಇಂಧನ ದರ ಅತ್ಯಧಿಕವಾಗಿದೆ.
ವಿವಿಧ ಜಿಲ್ಲೆಗಳ ಪೆಟ್ರೋಲ್ ದರ
ಬಾಗಲಕೋಟೆ - 101.08 ರೂ.
ಬೆಂಗಳೂರು - 100.58 ರೂ.
ಬೆಂಗಳೂರು ಗ್ರಾಮಾಂತರ -100.65
ಬೆಳಗಾವಿ - 101.63 ರೂ.
ಬಳ್ಳಾರಿ - 102.23 ರೂ.
ಬೀದರ್ - 101.12
ವಿಜಯಪುರ-100.74 ರೂ.
ಚಾಮರಾಜನಗರ - 100.60 ರೂ.
ಚಿಕ್ಕಬಳ್ಳಾಪುರ - 100.32 ರೂ.
ಚಿಕ್ಕಮಗಳೂರು - 101.96 ರೂ.
ಚಿತ್ರದುರ್ಗ - 102.41 ರೂ.
ದಕ್ಷಿಣ ಕನ್ನಡ - 99.76
ದಾವಣಗೆರೆ - 102.63 ರೂ.
ಧಾರವಾಡ - 100.52 ರೂ.
ಗದಗ - 100.90 ರೂ.
ಕಲಬುರಗಿ - 100.28 ರೂ.
ಹಾಸನ - 100.39 ರೂ.
ಹಾವೇರಿ - 101.21 ರೂ.
ಕೊಡಗು - 101.86 ರೂ.
ಕೋಲಾರ - 100.64 ರೂ.
ಕೊಪ್ಪಳ- 101.80 ರೂ.
ಮಂಡ್ಯ - 100.46 ರೂ.
ಮೈಸೂರು - 100.08 ರೂ.
ರಾಯಚೂರು - 101.24 ರೂ.
ರಾಮನಗರ - 101.06 ರೂ.
ಶಿವಮೊಗ್ಗ - 101.85 ರೂ.
ತುಮಕೂರು - 101.11 ರೂ.
ಉಡುಪಿ - 100.08 ರೂ.
ಉತ್ತರಕನ್ನಡ - 101.48 ರೂ
ಯಾದಗಿರಿ - 101.40ರೂ.











Click it and Unblock the Notifications