ಮಾಹಿತಿ ಚಿತ್ರ : ಚುನಾವಣೆ 2013-2018 ಅಂಕಿ ಅಂಶ ಹೋಲಿಕೆ

ಕರ್ನಾಟಕ ವಿಧಾನಸಭೆ ಚುನಾವಣೆಯ ದಿನಾಂಕ ಪ್ರಕಟವಾಗಿದೆ. ಚುನಾವಣೆ ಆಯೋಗ ಪ್ರಕಟಿಸಿರುವ ಮಾಹಿತಿ ಆಧಾರಿಸಿ 2013 ಹಾಗೂ 2018ರ ಅಂಕಿ ಅಂಶಗಳ ಹೋಲಿಕೆ ವಿವರ ಇಲ್ಲಿದೆ.

ರಾಜ್ಯದ ಎಲ್ಲಾ 224ಕ್ಷೇತ್ರಗಳಿಗೆ ಮೇ 12ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 15ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

* ಪ್ರಸ್ತುತ 2018 ನೇ ಸಾಲಿನಲ್ಲಿ ಒಟ್ಟು 4,96,82,351 ಮತದಾರರಿದ್ದು ಇದರಲ್ಲಿ 2,52,05,820 ಪುರುಷರು ಹಾಗೂ 2,44,71,979 ಮಹಿಳೆಯರು ಮತ್ತು 4,552 ತೃತೀಯ ಲಿಂಗಿಗಳು ಒಳಗೊಂಡಿರುತ್ತಾರೆ.

* 2013 ನೇ ಸಾಲಿನ ವಿಧಾನಸಭೆ ಚುನಾವಣೆ ಸಮಯದಲ್ಲಿ ಒಟ್ಟು 4,36,85,739 ಮತದಾರರಿದ್ದರು. ಇದರಲ್ಲಿ 2,23,15,727 ಪುರುಷರು ಹಾಗೂ 2,13,67,912 ಮಹಿಳೆಯರು ಮತ್ತು 2,100 ತೃತೀಯ ಲಿಂಗೀಯ ಮತದಾರರಿದ್ದರು.

ಕಳೆದ ರಾಜ್ಯ ವಿಧಾನಸಭೆ ಚುನಾವಣೆಗೆ ಹೋಲಿಸಿದ್ದಲ್ಲಿ ಶೇ.9 ರಷ್ಟು ಮತದಾರರು ಹೆಚ್ಚಾಗಿದ್ದಾರೆ.

* 2018 ರ ಚುನಾವಣೆಗಾಗಿ 15,42,000 ಹೊಸ ಯುವ ಮತದಾರರು ನೋಂದಾಣಿಯಾಗಿದ್ದಾರೆ.

* 2013ರ ಚುನಾವಣೆಯಲ್ಲಿ 7,18,000 ಹೊಸ ಯುವ ಮತದಾರರು ಮತ ಚಲಾಯಿಸುವ ಹಕ್ಕನ್ನು ಪಡೆದಿದ್ದರು.

ಕಳೆದ ಚುನಾವಣೆ ಹೋಲಿಸಿಕೊಂಡಲ್ಲಿ ಶೇ. 1.16 ರಿಂದ 2.20 ಏರಿಕೆ ಕಂಡು ಬಂದಿದೆ.

ಇದರಲ್ಲಿ ಲಿಂಗಾನುಪಾತ ಸಹ ಸಾವಿರ ಪುರುಷರಿಗೆ 958 ರಿಂದ 972 ಏರಿಕೆ ಕಂಡು ಬಂದಿದೆ.

Karnataka Elections 2018 info-graphics : Voters data comparison with 2013 polls
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+