ಮಂಡ್ಯ: ಮೇಲುಕೋಟೆಯಲ್ಲಿ ಕನಿಷ್ಠ, ಮಳವಳ್ಳಿಯಲ್ಲಿ ಗರಿಷ್ಠ ಮತದಾರರು
ಮಂಡ್ಯ, ಮೇ 11: ಕರ್ನಾಟಕ ವಿಧಾನಸಭೆ ಚುನಾವಣೆಗೆ ಉಳಿದಿರುವುದು ಒಂದು ದಿನ ಮಾತ್ರ. ಚುನಾವಣೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮುಗಿಸಿರುವ ಚುನಾವಣಾ ಆಯೋಗ ಮತದಾರರ ಅಂತಿಮ ಪಟ್ಟಿಯನ್ನೂ ಈಗಾಗಲೇ ಬಿಡುಗಡೆ ಮಾಡಿದೆ.
ರಂಗು ರಂಗಿನ ರಾಜಕಾರಣವನ್ನು ಹೊದ್ದು ಮಲಗಿರುವ ಮಂಡ್ಯದಲ್ಲಿ 14,88,000 ಮತದಾರರಿದ್ದಾರೆ. ಆಯೋಗ ನೀಡಿರುವ ಮಾಹಿತಿಗಳ ಇವರಲ್ಲಿ 7,44,970 ಪುರುಷ ಮತದಾರರು ಮತ್ತು 7,42,900 ಮಹಿಳಾ ಮತದಾರರಿದ್ದಾರೆ. 130 ತೃತೀಯ ಲಿಂಗಿಗಳೂ ಮಂಡ್ಯದಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ.
ರಾಜ್ಯದಲ್ಲೇ ಕುತೂಹಲದ ಕಣವಾಗಿ ಗುರುತಿಸಿಕೊಂಡಿರುವ, ಸ್ವರಾಜ್ ಇಂಡಿಯಾದ ದರ್ಶನ್ ಪುಟ್ಟಣ್ಣಯ್ಯ ಸ್ಪರ್ಧಿಸಿರುವ ಮೇಲುಕೋಟೆಯಲ್ಲಿ ಕನಿಷ್ಠ ಅಂದರೆ 1,95,440 ಜನರು ಮತ ಚಲಾವಣೆಯ ಹಕ್ಕು ಹೊಂದಿದ್ದಾರೆ. ಇನ್ನು ಮಳವಳ್ಳಿ ಕ್ಷೇತ್ರದಲ್ಲಿ ಗರಿಷ್ಠ 2,38,716 ಮತದಾರರಿದ್ದಾರೆ.
ಇಲ್ಲಿನ ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.













Click it and Unblock the Notifications