ಕೋಲಾರ: ಮಾಲೂರಿನಲ್ಲಿ ಕನಿಷ್ಠ, ಕೋಲಾರದಲ್ಲಿ ಗರಿಷ್ಠ ಮತದಾರರು
ಕೋಲಾರ, ಮೇ 11: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇನ್ನು ಉಳಿದಿರುವುದು ಕೆಲವೇ ಗಂಟೆಗಳು ಮಾತ್ರ. ಚುನಾವಣೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮುಗಿಸಿರುವ ಚುನಾವಣಾ ಆಯೋಗ ಮತದಾರರ ಅಂತಿಮ ಪಟ್ಟಿಯನ್ನೂ ಈಗಾಗಲೇ ಬಿಡುಗಡೆ ಮಾಡಿದೆ.
ಕೋಲಾರದಲ್ಲಿ ಈ ಬಾರಿ 11,98,973 ಮತದಾರರಿದ್ದಾರೆ. ಆಯೋಗ ನೀಡಿರುವ ಮಾಹಿತಿಗಳ ಪ್ರಕಾರ ಇವರಲ್ಲಿ 6,02,371 ಪುರುಷ ಮತದಾರರು ಮತ್ತು 5,96,494 ಮಹಿಳಾ ಮತದಾರರಿದ್ದಾರೆ. 108 ತೃತೀಯ ಲಿಂಗಿಗರೂ ಕೋಲಾರದಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ.
ಇಲ್ಲಿನ ಮಾಲೂರು ಕ್ಷೇತ್ರದಲ್ಲಿ ಕನಿಷ್ಠ ಅಂದರೆ 1,81,079 ಜನರು ಮತ ಚಲಾವಣೆಯ ಹಕ್ಕು ಹೊಂದಿದ್ದಾರೆ. ಇನ್ನು ಕೋಲಾರ ಕ್ಷೇತ್ರದಲ್ಲಿ ಗರಿಷ್ಠ 2,25,129 ಮತದಾರರಿದ್ದಾರೆ.
ಸಚಿವ ಕೆ.ಆರ್. ರಮೇಶ್ ಕುಮಾರ್ ಸ್ಪರ್ಧಿಸುತ್ತಿರುವ ಶ್ರೀನಿವಾಸಪುರ ಕ್ಷೇತ್ರದಲ್ಲಿ 2,05,932 ಜನರು ಮತ ಚಲಾಯಿಸುವ ಅಧಿಕಾರ ಹೊಂದಿದ್ದಾರೆ.













Click it and Unblock the Notifications