ಹಾವೇರಿ ಜಿಲ್ಲೆಯ ಕ್ಷೇತ್ರವಾರು ಮತದಾರರ ಅಂತಿಮ ಸಂಖ್ಯೆ
ಹಾವೇರಿ, ಮೇ 9: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವು ದಿನಗಳಷ್ಟೇ ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಮತದಾನಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುವ ಚುನಾವಣಾ ಆಯೋಗವು ಮತದಾರರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಆಯೋಗ ನೀಡಿರುವ ಮಾಹಿತಿಗಳ ಹಾವೇರಿ ಜಿಲ್ಲೆಯಲ್ಲಿ 12,39,289 ಮತದಾರರಿದ್ದಾರೆ. ಇವರಲ್ಲಿ 6,41,969 ಪುರುಷ ಮತದಾರರು ಮತ್ತು 5,59,282 ಮಹಿಳಾ ಮತದಾರರಿದ್ದಾರೆ. 38 ತೃತೀಯ ಲಿಂಗಿಗಳೂ ಹಾವೇರಿಯಲ್ಲಿ ಜಿಲ್ಲೆಯಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ.
ಇಲ್ಲಿನ ರಾಣಿಬೆನ್ನೂರು ಕ್ಷೇತ್ರದಲ್ಲಿ ಗರಿಷ್ಠ ಮತದಾರರಿದ್ದು, 2,30,208 ಜನರು ಮತ ಚಲಾವಣೆಯ ಹಕ್ಕು ಹೊಂದಿದ್ದಾರೆ. ಇನ್ನು ಹಿರೇಕೆರೂರಿನಲ್ಲಿ ಕನಿಷ್ಠ 1,79,278 ಮತದಾರರಿದ್ದಾರೆ.
ಹಾವೇರಿಯ ಎಲ್ಲಾ ಕ್ಷೇತ್ರಗಳಲ್ಲಿ ಪುರುಷ ಮತದಾರರು ಮತ್ತು ಮಹಿಳಾ ಮತದಾರರ ನಡುವಿನ ಅನುಪಾತದಲ್ಲಿ ಭಾರೀ ವ್ಯತ್ಯಾಸ ಇರುವುದನ್ನು ಗಮನಿಸಬಹುದು.













Click it and Unblock the Notifications