ಹಾಸನ: ಅರಕಲಗೂಡಲ್ಲಿ ಗರಿಷ್ಠ, ಬೇಲೂರಿನಲ್ಲಿ ಕನಿಷ್ಠ ಮತದಾರರು

ಹಾಸನ, ಮೇ 9: ಕರ್ನಾಟಕ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ಸಕಲ ರೀತಿಯಲ್ಲೂ ಸಜ್ಜಾಗಿದೆ. ಎಲ್ಲಾ ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿಯನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ. ಇದರ ಪ್ರಕಾರ ಹಾಸನ ಜಿಲ್ಲೆಯಲ್ಲಿ 14,33,025 ಮತದಾರರಿದ್ದಾರೆ.

ಆಯೋಗ ನೀಡಿರುವ ಮಾಹಿತಿಗಳ ಹಾಸನದಲ್ಲಿ 7,23,451 ಪುರುಷ ಮತದಾರರು ಮತ್ತು 7,09,547 ಮಹಿಳಾ ಮತದಾರರಿದ್ದಾರೆ. 47 ತೃತೀಯ ಲಿಂಗಿಗಳೂ ಹಾಸನದಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ.

ಸಚಿವ ಎ. ಮಂಜು ಸ್ಪರ್ಧಿಸುತ್ತಿರುವ ಅರಕಲಗೂಡುಕ್ಷೇತ್ರದಲ್ಲಿ ಗರಿಷ್ಠ ಮತದಾರರಿದ್ದು, 2,15,423 ಜನರು ಮತ ಚಲಾವಣೆಯ ಹಕ್ಕು ಹೊಂದಿದ್ದಾರೆ. ಬೇಲೂರು ಕ್ಷೇತ್ರದಲ್ಲಿ ಕನಿಷ್ಠ 1,90,465 ಮತದಾರರಿದ್ದಾರೆ.

ಜೆಡಿಎಸ್ ನಿಂದ ಮಾಜಿ ಸಚಿವ ಎಚ್.ಡಿ.ರೇವಣ್ಣ ಮತ್ತು ಸಿಎಂ ಆಪ್ತ, ರಾಜ್ಯ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಮಂಜೇಗೌಡ ಸ್ಪರ್ಧಿಸುತ್ತಿರುವ ಹೊಳೆನರಸೀಪುರ ಕ್ಷೇತ್ರದಲ್ಲಿ 2,08,968 ಜನರು ಮತ ಚಲಾಯಿಸುವ ಅಧಿಕಾರ ಪಡೆದಿದ್ದಾರೆ.

Karnataka Assembly Elections 2018: Constituency wise voters in Hassan district
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+