ದಾವಣಗೆರೆ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿರುವ ಮತದಾರರ ಅಂತಿಮ ಚಿತ್ರಣ

ದಾವಣಗೆರೆ, ಮೇ 7: ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಅಂತಿಮ ಪಟ್ಟಿಯನ್ನು ಸಿದ್ದಪಡಿಸಿದೆ. ಆಯೋಗ ನೀಡಿರುವ ಮಾಹಿತಿಗಳ ಪ್ರಕಾರ ದಾವಣಗೆರೆಯಲ್ಲಿ 19,11,342 ಮತದಾರರಿದ್ದಾರೆ. ಇವರಲ್ಲಿ 8,24,774 ಪುರುಷ ಮತದಾರರು, 8,08,058 ಮಹಿಳಾ ಮತದಾರರು ಮತ್ತು 117 ತೃತೀಯ ಲಿಂಗಿ ಮತದಾರರಿದ್ದಾರೆ.

ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಅತೀ ಹೆಚ್ಚಿನ 2,40,368 ಮತದಾರರಿದ್ದರೆ, ಜಗಳೂರಿನಲ್ಲಿ ಕನಿಷ್ಠ 1,90,053 ಪ್ರಜೆಗಳು ಮತದಾನದ ಹಕ್ಕು ಹೊಂದಿದ್ದಾರೆ.

ಇಲ್ಲಿನ ಹರಿಹರ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿದ್ದಾರೆ. ದಾವಣಗೆರೆ ದಕ್ಷಿಣದಲ್ಲಿ ಗರಿಷ್ಠ 36 ಜನ ತೃತೀಯ ಲಿಂಗಿ ಮತದಾರರನ್ನು ಕಾಣಬಹುದಾಗಿದೆ.

ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸ್ಪರ್ಧಿಸುವ ದಾವಣಗೆರೆ ಉತ್ತರದಲ್ಲಿ 2,40,368 ಮತದಾರರಿದ್ದರೆ, ಅವರ ತಂದೆ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಸ್ಪರ್ಧಿಸುತ್ತಿರುವ ದಾವಣಗೆರೆ ದಕ್ಷಿಣದಲ್ಲಿ 2,06,734 ಮತದಾರರಿದ್ದಾರೆ.

Karnataka Assembly Elections 2018: Constituency wise voters in Davanagere district
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+