ಕೊಪ್ಪಳ ಜಿಲ್ಲೆ: ಗಂಗಾವತಿಯಲ್ಲಿ ಕನಿಷ್ಠ, ಕೊಪ್ಪಳದಲ್ಲಿ ಗರಿಷ್ಠ ಮತದಾರರು
ಕೊಪ್ಪಳ, ಮೇ 3: ಚುನಾವಣಾ ಆಯೋಗ ಮತದಾರರ ಅಂತಿಮ ಪಟ್ಟಿಯನ್ನು ಸಿದ್ದಪಡಿಸಿದೆ. ಆಯೋಗದ ನೀಡಿರುವ ಮಾಹಿತಿಗಳ ಪ್ರಕಾರ ಕೊಪ್ಪಳ ಜಿಲ್ಲೆಯಲ್ಲಿ 10,78,364 ಮತದಾರರಿದ್ದಾರೆ. ಇವರಲ್ಲಿ 5,39,758 ಪುರುಷ ಮತದಾರರು, 5,38,570 ಮಹಿಳಾ ಮತದಾರರು ಮತ್ತು 36 ತೃತೀಯ ಲಿಂಗಿ ಮತದಾರರಿದ್ದಾರೆ.
ವಿಶೇಷವೆಂದರೆ ಕೊಪ್ಪಳ ಹಲವು ಕ್ಷೇತ್ರಗಳಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿನ ಕನಕಗಿರಿ, ಕೊಪ್ಪಳ, ಗಂಗಾವತಿಯಲ್ಲಿ ಮಹಿಳಾ ಮತದಾರರು ಪುರುಷರ ವಿರುದ್ಧ ಪಾರುಪತ್ಯ ಸ್ಥಾಪಿಸಿದ್ದಾರೆ.
ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚಿನ 2,40,965 ಮತದಾರರಿದ್ದರೆ, ಜೆಡಿಎಸ್ ನಿಂದ ಕಾಂಗ್ರೆಸಿಗೆ ಬಂದು ಸ್ಪರ್ಧಿಸಿರುವ ಇಕ್ಬಾಲ್ ಅನ್ಸಾರಿಯ ಗಂಗಾವತಿ ಕ್ಷೇತ್ರದಲ್ಲಿ ಅತೀ ಕಡಿಮೆ 1,94,057ಜನರು ಮತ ಚಲಾವಣೆಯ ಹಕ್ಕು ಹೊಂದಿದ್ದಾರೆ.












Click it and Unblock the Notifications