ಬಾಗಲಕೋಟೆ ಜಿಲ್ಲೆ: ಕ್ಷೇತ್ರವಾರು ಮತದಾರರ ಅಂತಿಮ ಪಟ್ಟಿ
ಬೆಳಗಾವಿ, ಮೇ 2: ಮತದಾರರ ಅಂತಿಮ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಆಯೋಗದ ಮಾಹಿತಿಗಳ ಪ್ರಕಾರ ಬಾಗಲಕೋಟೆಯಲ್ಲಿ 15,01,020 ಮತದಾರರಿದ್ದಾರೆ. ಇವರಲ್ಲಿ 7,50,688 ಪುರುಷ ಮತದಾರರು, 7,50,243 ಮಹಿಳಾ ಮತದಾರರು ಮತ್ತು 89 ತೃತೀಯ ಲಿಂಗಿ ಮತದಾರರಿದ್ದಾರೆ.
ಮುಧೋಳ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ 1,96,094 ಮತದಾರರಿದ್ದರೆ, ಬಾಗಲಕೋಟೆಯಲ್ಲಿ 2,30,825 ಜನರು ಮತ ಚಲಾವಣೆಯ ಹಕ್ಕು ಹೊಂದಿದ್ದಾರೆ. ಬೀಳಗಿಯಲ್ಲಿ ಅತೀ ಹೆಚ್ಚಿನ 27 ತೃತೀಯ ಲಿಂಗಿ ಮತದಾರರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆಯಿಂದ ರಾಜ್ಯದಾದ್ಯಂತ ಕುತೂಹಲ ಹುಟ್ಟಿಸಿರುವ ಬಾದಾಮಿಯಲ್ಲಿ 2,17,721 ಜನರು ಈ ಬಾರಿ ತಮ್ಮ ಮತ ಚಲಾಯಿಸಲು ಅರ್ಹತೆ ಪಡೆದುಕೊಂಡಿದ್ದಾರೆ.













Click it and Unblock the Notifications