Infographics: ಏ.4; ದೇಶದಲ್ಲಿ ಇಳಿಮುಖದತ್ತ ಚಿನ್ನದ ದರ

ನವದೆಹಲಿ, ಏಪ್ರಿಲ್‌ 04: ದೇಶದಲ್ಲಿ ಚಿನ್ನದ ಬೆಲೆಯು ಹಲವಾರು ದಿನಗಳಿಂದ ಏರಿಳಿತ ಕಾಣುತ್ತಿದೆ. ಏಪ್ರಿಲ್‌ 4ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 150 ರೂಪಾಯಿ ಇಳಿಕೆ ಕಂಡಿದ್ದು , ಪ್ರಸ್ತುತ 47,800 ರೂ ಆಗಿದೆ. ಈ ಸಂದರ್ಭದಲ್ಲೇ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಇಳಿದಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 320 ರೂ ಇಳಿಕೆ ಕಂಡಿದ್ದು, ಪ್ರಸ್ತುತ ಬೆಲೆಯು 52,140 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯೂ ಇಳಿದಿದೆ. ಬೆಳ್ಳಿ ದರವು ಕೆಜಿಗೆ ಪ್ರಸ್ತುತ 200 ರೂ ಇಳಿದಿದ್ದು 66,600 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,800 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,140 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,800 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,140 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,800 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,140 ರೂ. ಇದೆ. ಚೆನ್ನೈನಲ್ಲಿ 48,030 ರೂ. ಹಾಗೂ ಅಪರಂಜಿ 52,400 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,800 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,140 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 48 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 52 ಸಾವಿರಕ್ಕಿಂತ ಹೆಚ್ಚಾಗಿದೆ.

Gold And Silver Rate Reduced In Indias Major Cities On April 4, 2022

ರಷ್ಯಾ ಹಾಗೂ ಉಕ್ರೇನ್‌ ಯುದ್ಧದ ನಡುವೆ ಎಂಸಿಕ್ಸ್ ನಲ್ಲಿ ಏಪ್ರಿಲ್‌ 4ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 51228.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.21ರಷ್ಟು ಹಿಗ್ಗಿ 1,928.78 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.73ರಷ್ಟು ಏರಿಕೆಯಾಗಿ 24.8 ಯುಎಸ್ ಡಾಲರ್ ಆಗಿದೆ. ಕಳೆದ ಒಂದು ವಾರದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂಬುದರ ಪಟ್ಟಿ ಮುಂದಿದೆ ಓದಿ.

ಬೆಂಗಳೂರಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ.ಗಳಲ್ಲಿ)
ಏಪ್ರಿಲ್ 4: 47,800 ರೂ, 52,140 ರೂ
ಏಪ್ರಿಲ್ 3: 47,950 ರೂ, 52,460 ರೂ
ಏಪ್ರಿಲ್ 2: 47,950 ರೂ, 52,480 ರೂ
ಏಪ್ರಿಲ್ 1: 48,100 ರೂ, 52,470 ರೂ
ಮಾರ್ಚ್ 31: 47,650 ರೂ, 51,980 ರೂ
ಮಾರ್ಚ್ 30: 47,650 ರೂ, 51,980 ರೂ
ಮಾರ್ಚ್ 29: 47,750 ರೂ, 52,100 ರೂ
ಮಾರ್ಚ್ 28: 47,950 ರೂ, 52,310 ರೂ
ಮಾರ್ಚ್ 27: 48,200 ರೂ, 52,590 ರೂ
ಬೆಳ್ಳಿ ಬೆಲೆ ಕೆ.ಜಿಗೆ 71,100 ರೂಪಾಯಿ ಇದೆ.

Gold And Silver Rate Reduced In Indias Major Cities On April 4, 2022

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+