ಅಂತಿಮವಾಗಿ ಕರ್ನಾಟಕದಲ್ಲಿ 70.91 % ಮತದಾನ, ಬೆಂಗಳೂರು ಕನಿಷ್ಠ
ಬೆಂಗಳೂರು, ಮೇ 12: ಕರ್ನಾಟಕದಲ್ಲಿ ಶನಿವಾರ ಮತದಾನ ಬಿರುಸಿನಿಂದ ಸಾಗಿದರೂ 2013ಕ್ಕಿಂತ ಕಡಿಮೆ ಮತದಾನ ದಾಖಲಾಗಿದೆ. 2013ರಲ್ಲಿ ಕರ್ನಾಟಕದಲ್ಲಿ ಶೇಕಡಾ 71.45 ಮತದಾನ ದಾಖಲಾಗಿತ್ತು. ಈ ಬಾರಿ ಶೇಕಡಾ 70.91 ಮತದಾನವಾಗಿದೆ.
ರಾಮನಗರ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚಿನ ಮತದಾನವಾಗಿದೆ. ಇಲ್ಲಿ ಶೇಕಡಾ 79.11 ಜನರು ಮತ ಚಲಾಯಿಸಿದ್ದಾರೆ.
ಬೆಂಗಳೂರು ನಗರ ಮತದಾನದಲ್ಲಿ ಭಾರೀ ಹಿಂದುಳಿದಿದ್ದು ಮತದಾನ ಪ್ರಮಾಣ ಅರ್ಧಶತಕವನ್ನೂ ದಾಟಿಲ್ಲ. ಬೆಂಗಳೂರು ದಕ್ಷಿಣದಲ್ಲಿ ಕನಿಷ್ಠ ಮತದಾನವಾಗಿದ್ದು ಶೇಕಡಾ 47.45 ಜನರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದಾರೆ.













Click it and Unblock the Notifications