ಸಮೀಕ್ಷೆ: 'ಮತ್ತೊಮ್ಮೆ ಕಾಂಗ್ರೆಸ್' 126 ಸೀಟುಗಳೊಂದಿಗೆ ಅಧಿಕಾರಕ್ಕೆ
ಬೆಂಗಳೂರು, ಮಾರ್ಚ್ 26: ಮೇನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಸಿ-ಫೋರ್ ಸಂಸ್ಥೆ ಮಾರ್ಚ್ ನಲ್ಲಿ ನಡೆಸಿದ ಚುನಾವಣಾ ಸಮೀಕ್ಷೆಯನ್ನು ಬಿಡುಗಡೆ ಮಾಡಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಈ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಅಷ್ಟೆ ಅಲ್ಲ 2013ರಲ್ಲಿ ಗೆದ್ದಿದ್ದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ.
2018ರ ಮಾರ್ಚ್ 1 ರಿಂದ 25ರ ನಡುವೆ ಈ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಗಾಗಿ 154 ವಿಧಾನಸಭಾ ಕ್ಷೇತ್ರಗಳ 22,357 ಮತದಾರರನ್ನು ಸಂದರ್ಶಿಸಲಾಗಿದೆ. ಮತದಾರರು ರಾಜ್ಯದ 2,368 ಮತಗಟ್ಟೆಗಳಿಗೆ ಸೇರಿದ್ದಾರೆ ಎಂದು ಸಂಸ್ಥೆ ತನ್ನ ಸಮೀಕ್ಷೆಯ ಬಗ್ಗೆ ವಿವರ ನೀಡಿದೆ.
326 ನಗರ ಮತ್ತು 977 ಗ್ರಾಮೀಣ ಪ್ರದೇಶಗಳನ್ನು ಸಮೀಕ್ಷೆಯು ಒಳಗೊಂಡಿದೆ ಎಂದು ಸಿ-ಫೋರ್ ಸಂಸ್ಥೆ ಹೇಳಿದ್ದು, ಶೇಕಡಾ 1ರಷ್ಟು ಇದು ತಪ್ಪುಗಳನ್ನು ಒಳಗೊಂಡಿರಬಹುದು ಎಂದು ಹೇಳಿದೆ.
ಸಮೀಕ್ಷೆಯ ವಿವರಗಳು ಈ ಕೆಳಗಿನ ಇನ್ಫೋಗ್ರಾಫಿಕ್ ನಲ್ಲಿದೆ.













Click it and Unblock the Notifications