'ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಮೋದಿ'
ನವದೆಹಲಿ, ಸೆ.11: ಭಾರತೀಯ ಜನತಾ ಪಕ್ಷ ತನ್ನ ಪ್ರಧಾನಿ ಅಭ್ಯರ್ಥಿಯಾಗಿ ಪ್ರಚಾರ ಸಮಿತಿ ಅಧ್ಯಕ್ಷ ನರೇಂದ್ರ ಮೋದಿ ಅವರನ್ನು ಘೋಷಿಸಲು ಮುಹೂರ್ತ ಫಿಕ್ಸ್ ಮಾಡಿದೆ. ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರನ್ನು ಭೇಟಿ ಮಾಡಿ ದಿನ ನಿಗದಿ ಮಾಡಲಿದ್ದಾರೆ.
ರಾಜನಾಥ್ ಸಿಂಗ್ ಅವರು ಸೆಪ್ಟೆಂಬರ್ 19ಕ್ಕೂ ಮೊದಲೇ ಮೋದಿ ಹೆಸರನ್ನು ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಲು ಸಿದ್ಧತೆ ನಡೆಸಿದ್ದಾರೆ. ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಗಳಿಸುತ್ತಿರುವ ಜನಪ್ರಿಯತೆ, ಬಿಜೆಪಿಯತ್ತ ಮೂಡುತ್ತಿರುವ ಆಕರ್ಷಣೆ ಕಂಡು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೂಡಾ ಮೋದಿ ಅಭ್ಯರ್ಥಿಯಾಗಲು ಸೂಕ್ತ ಎಂದು ಸೂಚಿಸಿದೆ.
ಇನ್ನೂ ಮುಹೂರ್ತ ಸರಿಯಾಗಿ ಫಿಕ್ಸ್ ಮಾಡಲಾಗಿಲ್ಲ. ಸೆ.13 ಅಥವಾ 16ರಂದು ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಒಂದು ಮೂಲಗಳು ಹೇಳಿವೆ.
ಪಿತೃಪಕ್ಷ ಆರಂಭದಿನ ಲೆಕ್ಕಾಚಾರದಲ್ಲಿ ಬಿಜೆಪಿ ಪಂಡಿತರು ತೊಡಗಿದ್ದಾರೆ. ಈಗ ಆರೆಸ್ಸೆಸ್ ಒಪ್ಪಿಗೆ ನೀಡಿದ ಮೇಲ್ ಬಿಜೆಪಿಯಲ್ಲಿ ಬಹುತೇಕ ಮೋದಿ ಪರ ನಿಂತಿದ್ದಾರೆ. ಎಲ್ ಕೆ ಅಡ್ವಾಣಿ, ಸುಷ್ಮಾ ಸ್ವರಾಜ್ ಮಾತ್ರ ಭಿನ್ನರಾಗ ಹಾಡಿದ್ದಾರೆ.

ಕೆಲ ಬಿಜೆಪಿ ನಾಯಕರು ಅಸೆಂಬ್ಲಿ ಚುನಾವಣೆಗಳು ಮುಗಿದ ನಂತರ ಘೋಷಣೆ ಮಾಡುವುದು ಸರಿ ಎಂದಿದ್ದಾರೆ. ಅದರೆ, ಮೋದಿ ಪರ ನಾಯಕರು ಶುಭಸ್ಯ ಶೀಘ್ರಂ ಎಂದು ಮಂತ್ರ ಜಪಿಸುತ್ತಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿ ಯಾರು ಎಂಬುದರ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿ ಚರ್ಚೆ ನಡೆದಿರುವ ಬೆನ್ನಲ್ಲೇ ಅನೇಕ ಸಮೀಕ್ಷೆಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮೀಕ್ಷೆಯಂತೆ ರಾಹುಲ್ ಗಿಂತ ಮೋದಿ ಬಹುಮತ ಪಡೆದಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಲಿ ಎಂದು ದೇಶದ ಉನ್ನತ ಸ್ತರದ ನಾಲ್ಕನೇ ಮೂರರಷ್ಟು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ)ಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ದೇಶದ ಮುಂದಿನ ಪ್ರಧಾನ ಮಂತ್ರಿಯಾಗುವ ಆಸೆಯೂ ಇಲ್ಲ, ದರ್ದೂ ಇಲ್ಲ. ಅಂತಹ ಕನಸನ್ನೂ ಕಾಣುವುದಿಲ್ಲ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ. ಇದರಿಂದ ಬಿಜೆಪಿ ಪಕ್ಷದಲ್ಲಿ ತಳಮಳ/ಸಂಚಲನವುಂಟು ಮಾಡಿದ್ದರು.
ರಾಜಸ್ಥಾನ, ಛತ್ತೀಸ್ ಗಢ, ಮಧ್ಯಪ್ರದೇಶ, ದೆಹಲಿಯಲ್ಲಿನ ವಿಧಾನಸಭೆ ಚುನಾವಣೆಗೆ ನರೇಂದ್ರಮೋದಿ ಅವರನ್ನು ಚುನಾವಣಾ ಪ್ರಚಾರಕ್ಕೆ ಹೆಚ್ಚು ಬಳಸಿಕೊಳ್ಳಬೇಕು. ಚುನಾವಣಾ ಪ್ರಚಾರದ ಸಂಪೂರ್ಣ ಸಾರಥ್ಯ ಮೋದಿ ಅವರಿಗೆ ನೀಡಬೇಕು ಎಂಬ ಅಭಿಪ್ರಾಯಗಳು ಬಿಜೆಪಿಯಲ್ಲಿ ಕೇಳಿ ಬಂದಿದೆ. [ಪ್ರಧಾನಿ ಅಭ್ಯರ್ಥಿಯಾಗಲು ಮೋದಿ ಸೂಕ್ತ ಏಕೆ? ಇಲ್ಲಿ ಓದಿ]












Click it and Unblock the Notifications