ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದುಳಿದ ಅಮೆರಿಕಾ ಮುಂದುವರೆದದ್ದು ಹೇಗೆ?

By ಶ್ರೀವತ್ಸ ಜೋಶಿ
|
Google Oneindia Kannada News

ಅಮೆರಿಕವು ಭಾರತಕ್ಕಿಂತ ಹಿಂದುಳಿದ ಪ್ರದೇಶ, ಸಮಯದ ಗಣನೆಯಲ್ಲಿ. ಕರಾರುವಾಕ್ಕಾಗಿ ಹೇಳುವುದಾದರೆ, ಇಲ್ಲಿ ಅಮೆರಿಕದ ಪೂರ್ವಕರಾವಳಿಯ ಸಮಯವು ಈಗ ಭಾರತದ ಸಮಯಕ್ಕಿಂತ ಒಂಬತ್ತೂವರೆ ಗಂಟೆ ಹಿಂದೆ. ಅಮೆರಿಕದ ಪಶ್ಚಿಮಕರಾವಳಿಯ ಸಮಯವು ಭಾರತದ ಸಮಯಕ್ಕಿಂತ ಹನ್ನೆರಡೂವರೆ ಗಂಟೆ ಹಿಂದೆ.

ಆದರೆ, ಈ ಸರ್ತಿ ಯುಗಾದಿ ಆಚರಣೆಯಲ್ಲಿ ಅಮೆರಿಕದಲ್ಲಿರುವ ಕನ್ನಡಿಗರು, ಕರ್ನಾಟಕದಲ್ಲಿರುವ ಕನ್ನಡಿಗರಿಗಿಂತ ಮುಂದೆ! ಹೌದು. ಅಮೆರಿಕದಲ್ಲಿ ಯುಗಾದಿ ಹಬ್ಬ ಏಪ್ರಿಲ್ 10ರಂದು ಬುಧವಾರ. ಕರ್ನಾಟಕದಲ್ಲಿ ಯುಗಾದಿ ಹಬ್ಬ ಏಪ್ರಿಲ್ 11ರಂದು ಗುರುವಾರ. ಇದು ಹೇಗೆ ಸಾಧ್ಯ ಅಂತೀರಾ? ಖಗೋಳಶಾಸ್ತ್ರ ಆಧಾರಿತ ಈ ವಿವರಣೆಯನ್ನು ಓದುವಂಥವರಾಗಿ.

ಜನವರಿ 1ರಂದು ಶುರುವಾಗುವ ಇಂಗ್ಲಿಷ್ ಹೊಸವರ್ಷ ಸಂಪೂರ್ಣವಾಗಿ ಸೌರಮಾನವಾದ್ದರಿಂದ ಭೂಮಿಯಲ್ಲಿ ಪೂರ್ವದ ಭಾಗದಲ್ಲಿ (ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಜಪಾನ್ ಇತ್ಯಾದಿ) ಮೊದಲು ಆಚರಣೆ. ಆಮೇಲೆ ಪಶ್ಚಿಮದ ದೇಶಗಳಲ್ಲಿ. ಇದಕ್ಕೆ ಕಾರಣವೇನೆಂದರೆ ದಿನಾಂಕ ಕ್ರಮದ ಕಾಲಗಣನೆಯಲ್ಲಿ ಒಂದು ತಾರೀಕು ಭೂಮಿಯ ಎಲ್ಲ ಭಾಗದಲ್ಲಿ ಏಕಕಾಲಕ್ಕೆ ಶುರುವಾಗುವುದಿಲ್ಲ. ಅಂತಾರಾಷ್ಟ್ರೀಯ ದಿನಾಂಕ ರೇಖೆ ಎಂಬ ಒಂದು ರೇಖಾಂಶವನ್ನು ಗುರುತಿಸಿರುವುದರಿಂದ ಅಲ್ಲಿ ಶುರುವಾಗಿ ಪಶ್ಚಿಮಕ್ಕೆ ಸಾಗುತ್ತದೆ.

America clock hindu new year 2013 bell

ಆದರೆ ತಿಥಿಯ (ಚಂದ್ರನ ಚಲನೆಯನ್ನಾಧರಿಸಿದ ಕಾಲಗಣನೆ) ವಿಚಾರ ಹಾಗಲ್ಲ. ತಿಥಿ geocentric. ಅಂದರೆ ಭೂಮಿಯಲ್ಲಿ ಎಲ್ಲ ಕಡೆಗೂ ಒಂದೇಕಾಲಕ್ಕೆ ಶುರುವಾಗಿ ಒಂದೇ ಕಾಲಕ್ಕೆ ಕೊನೆಯಾಗುತ್ತದೆ. ಆ ಪ್ರಕಾರ 'ವಿಜಯ' ನಾಮ ಸಂವತ್ಸರದ ಚೈತ್ರ ಶುಕ್ಲ ಪಕ್ಷದ ಪಾಡ್ಯ ತಿಥಿಯು ಭಾರತೀಯ ಕಾಲಮಾನ ಪ್ರಕಾರ ಏಪ್ರಿಲ್ 10ರ ಬುಧವಾರ ಅಪರಾಹ್ನ 3:05ಕ್ಕೆ ಆರಂಭವಾಗುತ್ತದೆ.

ಆದರೆ ಹಬ್ಬದಾಚರಣೆ ಮಾರನೇದಿನ. ಏಕೆಂದರೆ ಹಬ್ಬದಾಚರಣೆಗೆ ಆಯಾಯ ತಿಥಿಯು ಸೂರ್ಯೋದಯದ ವೇಳೆಯಲ್ಲೇ ಇರಬೇಕಾಗುತ್ತದೆ. ಏಪ್ರಿಲ್ 10ರ ಬುಧವಾರ ಭಾರತದಲ್ಲಿ ಸೂರ್ಯೋದಯದ ವೇಳೆ ಇನ್ನೂ ಅಮಾವಾಸ್ಯೆ ಇರುವುದರಿಂದ ಅವತ್ತು ಯುಗಾದಿ ಹಬ್ಬದ ಆಚರಣೆಯಾಗುವುದಿಲ್ಲ.

ಅಮೆರಿಕದಲ್ಲಿ ಏಪ್ರಿಲ್ 10ರಂದು ಸೂರ್ಯೋದಯದ ವೇಳೆಗೇ ಪಾಡ್ಯ ತಿಥಿ ಇರುವುದರಿಂದ ಅವತ್ತೇ ಯುಗಾದಿ ಆಚರಣೆ! [ಅಮೆರಿಕದಲ್ಲಿ ಭಾರತೀಯ ಹಬ್ಬಗಳು ವಾರದನಡುವೆ ಬಂದರೆ ವಾರಾಂತ್ಯಕ್ಕೆ ಮುಂದೂಡಲಾಗುತ್ತದೆ ಎಂಬ ಮಾತು ಬೇರೆ :-)] 'ವಿಜಯ' ಸಂವತ್ಸರ ಎಲ್ಲರನ್ನೂ ವಿಜಯಶಾಲಿಯಾಗಿಸಲಿ. (ವರದಿ : ಶ್ರೀವತ್ಸ ಜೋಶಿ, ವರ್ಜೀನಿಯ, ಯುಎಸ್ಎ - [email protected])

English summary
America is backward to India in terms of calculation of time. But, this year USA Hindus will be celebrating Ugadi, Hindu new year, ahead of India. Do you want to how? Read the article written by Srivathsa Joshi, Virginia, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X