ರಂಜಾನ್ 2026: ಉಪವಾಸ, ಇಫ್ತಾರ್ ಸಂಪ್ರದಾಯಗಳು, ರಂಜಾನ್ ಮಾಸದ ಶುಭಾಶಯ ಸಾಲುಗಳು ಇಲ್ಲಿವೆ
ಮುಸ್ಲಿಮ್ ಬಾಂಧವರ ಪವಿತ್ರ ರಂಜಾನ್ ತಿಂಗಳು ಸಮೀಪಿಸುತ್ತಿದೆ. ಈ ಸಮಯದಲ್ಲಿ ಪ್ರಪಂಚದಾದ್ಯಂತದ ಮುಸ್ಲಿಮರು ತಮ್ಮ ಆಧ್ಯಾತ್ಮಿಕ ಶಕ್ತಿ ಹಾಗೂ ಭಕ್ತಿಯನ್ನು ಪರೀಕ್ಷಿಸಲು ಸಾಂಪ್ರದಾಯಿಕ ಉಪವಾಸ ಕೈಗೊಳ್ಳುತ್ತಾರೆ. ಈ ಪವಿತ್ರ ಸಮಯದಲ್ಲಿ ಅನುಯಾಯಿಗಳು ಪ್ರಾರ್ಥನೆ, ಕುರಾನ್ ಪಠಣೆ ಮತ್ತು ದೇವರ ಆರಾಧನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಪವಿತ್ರ ರಂಜಾನ್ ಮಾಸದ ಪ್ರಯುಕ್ತ ನಿಮ್ಮ ಆತ್ಮೀಯರಿಗೆ ಶುಭಕೋರುವುದು ಹೇಗೆ ಎನ್ನುವ ವಿವರ ಇಲ್ಲಿದೆ.
ರಂಜಾನ್ ಆಗಮನವು ಪ್ರಪಂಚದಾದ್ಯಂತ ವೈವಿಧ್ಯಮಯ ಆಚರಣೆಗಳಿಂದ ಗುರುತಿಸಲ್ಪಟ್ಟಿದೆ. ಸಾಮುದಾಯಿಕ ಇಫ್ತಾರ್ ಕೂಟಗಳು, ಉಪವಾಸ ಮುರಿಯುವ ಸಂಭ್ರಮ, ಮನೆ ಅಲಂಕಾರಗಳು ಮತ್ತು ಸಾಂಪ್ರದಾಯಿಕ ಅಡುಗೆಗಳನ್ನು ಮಾಡುವುದು ಈ ರೀತಿ ರಂಜಾನ್ ಸಂಭ್ರಮಾಚರಣೆ ಮನೆ ಮಾಡಿರುತ್ತದೆ. ದೈನಂದಿನ ಉಪವಾಸವು ಬೆಳಗಿನ ಜಾವಕ್ಕೆ ಸ್ವಲ್ಪ ಮೊದಲು "ಸುಹೂರ್" ಎಂದು ಕರೆಯಲ್ಪಡುವ ಸಾಧಾರಣ ಉಪವಾಸದ ಪೂರ್ವದ ಊಟದೊಂದಿಗೆ ಪ್ರಾರಂಭವಾಗುತ್ತದೆ. ಸೂರ್ಯಾಸ್ತವಾದ ಮೇಲೆ ಇಫ್ತಾರ್ ಕೂಟದೊಂದಿಗೆ ಕೊನೆಗೊಳ್ಳುತ್ತದೆ. ಈ ಎರಡು ಊಟಗಳ ನಡುವೆ, ಉಪವಾಸವನ್ನು ಆಚರಿಸುವವರು. ಆಗ ಆಹಾರ ಮತ್ತು ನೀರನ್ನು ಸೇವಿಸದೆ ಉಪವಾಸ ಆಚರಣೆ ಮಾಡುತ್ತಾರೆ.

ರಂಜಾನ್ ಶುಭಾಶಯಕೋರುವುದು ಹೇಗೆ
ಜಗತ್ತಿನಾದ್ಯಂತ ಅನೇಕ ಮುಸ್ಲಿಮರಿಗೆ ಪರಿಚಿತವಾಗಿರುವ ಮಾತೆಂದರೆ ರಂಜಾನ್ ಮುಬಾರಕ್ ಇದರ ಅರ್ಥ 'ಪೂಜ್ಯ ರಂಜಾನ್'. ಮತ್ತೊಂದು ಸಾಮಾನ್ಯವಾಗಿ ಬಳಕೆಯಲ್ಲಿರುವ ಪದವೆಂದರೆ ರಂಜಾನ್ ಕರೀಮ್ ಎನ್ನುವುದು. ಇದು ಉದಾರ ರಂಜಾನ್ ಎನ್ನುವ ಅನುವಾದವಾಗಿದೆ. ಇನ್ನು ಈ ಎರಡೂ ಪದಗಳು ಅರೇಬಿಕ್ ಮೂಲದಿಂದ ಬಂದಿವೆ. ನೀವು ಮುಸ್ಲಿಂ ಸಹೋದ್ಯೋಗಿಗಳು, ಸ್ನೇಹಿತರು ಅಥವಾ ನೆರೆಹೊರೆಯವರನ್ನು ಹೊಂದಿದ್ದರೆ, ಅವರಿಗೆ ರಂಜಾನ್ ಶುಭಾಶಯಗಳು ಎಂದೂ ಹೇಳಬಹುದು. ರಂಜಾನ್ ಮುಬಾರಕ್ ಅಥವಾ ರಂಜಾನ್ ಕರೀಮ್ ಎನ್ನುವ ಶುಭಾಶಯವನ್ನೂ ಕೋರಬಹುದಾಗಿದೆ.
ರಂಜಾನ್ ಮಾಸದ ಶುಭಾಶಯಗಳು
1. ಅಲ್ಲಾಹನು ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸಲಿ ರಂಜಾನ್ ಮಾಸದ ಶುಭಾಶಯಗಳು.
2. ಈ ರಂಜಾನ್‌ನಲ್ಲಿ ನಿಮ್ಮ ಕಷ್ಟಗಳು ಕಳೆಯಲಿ, ಎಲ್ಲವೂ ಒಳ್ಳೆಯದ್ದೇ ಆಗಲಿ ರಂಜಾನ್ ಮಾಸದ ಶುಭಾಶಯ.
3. ರಂಜಾನ್ ಮುಬಾರಕ್
4. ನಮ್ಮ ಕುಟುಂಬದಿಂದ ನಿಮ್ಮ ಕುಟುಂಬಕ್ಕೆ ರಂಜಾನ್ ಮಾಸದ ಶುಭಾಶಯಗಳು, ಶುಭವಾಗಲಿ.
5. ಈ ಪವಿತ್ರ ಮಾಸದ ದೈವತ್ವವು ನಿಮ್ಮ ಮನಸ್ಸಿನಿಂದ ಎಲ್ಲಾ ಪಾಪ ಆಲೋಚನೆಗಳನ್ನು ಕಳೆಯಲಿ.
6. ನಂಬಿಕೆ, ಪ್ರೀತಿ ಮತ್ತು ಕ್ಷಮೆಯಿಂದ ತುಂಬಿದ ಸಂತೋಷದಾಯಕ ರಂಜಾನ್ ಮಾಸದ ಶುಭಾಶಯಗಳು.
7. ರಂಜಾನ್ ಕರೀಮ್ ನಿಮ್ಮ ಉಪವಾಸ ಸುಲಭವಾಗಲಿ.
8. ರಂಜಾನ್ ಒಳ್ಳೆಯ ಕಾರ್ಯಗಳು ಹೆಚ್ಚಿನ ಪ್ರತಿಫಲವನ್ನು ನೀಡುವ ಸಮಯವಾಗಿದೆ. ಅದನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಿ.
9. ರಂಜಾನ್ ಉದ್ದಕ್ಕೂ ಶಕ್ತಿ, ತಾಳ್ಮೆ ಮತ್ತು ನಂಬಿಕೆ ನಿಮ್ಮದಾಗಲಿ, ರಂಜಾನ್ ಶುಭಾಶಯಗಳು.
10. ರಂಜಾನ್ ಮುಬಾರಕ್. ರಂಜಾನ್ ಮಾಸದರಲ್ಲಿ ನಿಮ್ಮ ಜೀವನ ಸಂತೋಷದಿಂದ ಕೂಡಿರಲಿ.
11. ಅಲ್ಲಾಹನು ನಿಮ್ಮ ದುವಾ ಸ್ವೀಕರಿಸಲಿ ಮತ್ತು ನಿಮ್ಮ ಪಾಪಗಳನ್ನು ಈ ರಂಜಾನ್‌ನಲ್ಲಿ ಕ್ಷಮಿಸಲಿ
12. ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಪವಿತ್ರ ರಂಜಾನ್ ತಿಂಗಳ ಹೃತ್ಪೂರ್ವಕ ಶುಭಾಶಯಗಳು.
13. ರಂಜಾನ್ ಹಬ್ಬದ ಇಫ್ತಾರ್ ಕೂಟಗಳಿಂದ ಎಲ್ಲ ಸಂಭ್ರಮವೂ ಮನೆ ಮಾಡಲಿ.
14. ನಿಮ್ಮ ಕನಸುಗಳೆಲ್ಲವೂ ನನಸಾಗುವಂತೆ ದೇವರು ಕರುಣಿಸಲಿ ರಂಜಾನ್ ಶುಭಾಶಯಗಳು.
15. ರಂಜಾನ್ ಮಾಸದಲ್ಲಿ ಉಪವಾಸ ಮಾಡುವ ಶಕ್ತಿಯನ್ನು ದೇವರು ಕರುಣಿಸಲಿ, ರಂಜಾನ್ ಹಬ್ಬದ ಶುಭಾಶಯಗಳು.













Click it and Unblock the Notifications