ಕನ್ನಡ ನಾಡಗೀತೆ ಹೊಸ ಆವೃತ್ತಿಯ ಸಂಗೀತದಲ್ಲಿ ಕೇಳಿ ಆನಂದಿಸಿ

Posted By:
Subscribe to Oneindia Kannada

ರಾಷ್ಟ್ರಕವಿ ಕೆ.ವಿ ಪುಟ್ಟಪ್ಪ(ಕುವೆಂಪು) ಅವರು 1924 ರಲ್ಲಿ 'ಕಿಶೋರಚಂದ್ರವಾಣಿ' ಎಂಬ ಕಾವ್ಯನಾಮದಡಿ ಬರೆದ ಪದ್ಯ ನಮ್ಮ ನಾಡಗೀತೆಯಾಗಿ ಎಲ್ಲರ ಬಾಯಲ್ಲಿ ನಲಿಯುತ್ತಿದೆ. 2004ರಲ್ಲಿ ಕುವೆಂಪು ಜನ್ಮ ಶತಮಾನೋತ್ಸವದ ಸಮಯದಲ್ಲಿ ಕರ್ನಾಟಕ ಸರ್ಕಾರ ಈ ಗೀತೆಯನ್ನು ಅಧಿಕೃತ ನಾಡ ಗೀತೆಯನ್ನಾಗಿ ಘೋಷಿಸಿತು.

ಕುವೆಂಪು ವಿರಚಿತ ಗೀತೆಗೆ ಮೊಟ್ಟ ಮೊದಲ ಬಾರಿಗೆ ಮೈಸೂರು ಅನಂತ ಸ್ವಾಮಿ ಅವರು ರಾಗ ಸಂಯೋಜನೆ ಮಾಡಿದರು. ನಂತರದ ದಿನಗಳಲ್ಲಿ ಸಿ. ಅಶ್ವಥ್ ಅವರ ಸಂಯೋಜನೆ ಜನಪ್ರಿಯತೆ ಗಳಿಸಿತು. [ನಾಡಗೀತೆ ವಿವಾದವೇನು?]

Karnataka State Anthem Kannada Naada Geethe Latest Version

ನಾಡಗೀತೆಯಲ್ಲಿ ಬಳಸಲಾದ ಮಹನೀಯರ ಹೆಸರುಗಳ ವಿವಾದದ ಜತೆಗೆ, ಹಾಡಿನ ಸ್ವರ ಸಂಯೋಜನೆ ಬಗ್ಗೆ ಕೂಡಾ ವಿವಾದ ಉಂಟಾಗಿತ್ತು. ಪ್ರೊ ಶಿವರುದ್ರಪ್ಪ ಅವರ ಸಮಿತಿ ಮೈಸೂರು ಅನಂತ ಸ್ವಾಮಿ ಅವರ ಸ್ವರ ಸಂಯೋಜನೆಗೆ ಒಪ್ಪಿಗೆ ಸೂಚಿಸಿದರು.

ಈಗ ಯುವ ಪೀಳಿಗೆಯ ಸಂಗೀತಗಾರ ಶರತ್ ಅರೋಹಣ ಅವರ ಸ್ವರ ಸಂಯೋಜನೆಯಲ್ಲಿ ಹೊಸ ಆವೃತ್ತಿಯಲ್ಲಿ ನಾಡಗೀತೆಯನ್ನು ಚಿತ್ರಿಸಲಾಗಿದೆ. ಸಂತೋಶ್ ಕುಮಾರ್ ವಿ ಅವರ ಸಿನಿಮಾಟೋಗ್ರಾಫಿ, ಸಂಕಲನ ಹಾಗೂ ನಿರ್ದೇಶನ ವಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. [ರಾಜ್ಯದ ರೈತರ ನಾಡ ಗೀತೆ ಇಲ್ಲಿದೆ ಓದಿ]

ಸ್ವರೂಪ್ ರಮೇಶ್, ರಾಮನಾಥ್ ಶಾನುಭೋಗ, ಪ್ರಿಯಾಂಕಾ ಆಚಾರ್, ಎಂಆರ್ ಶ್ರೀಹರ್ಷ, ಹೇಮಂತ್ ಕುಮಾರ್ ಎಚ್ ಎಸ್, ಪ್ರಿಯಾಂಕಾ ಸೂರ್ಯನಾರಾಯಣ, ರಾಘವೇಂದ್ರ ರಾಮದುರ್ಗ, ಪ್ರವೀಣ್ ರಾಜ್ ಎನ್ ಆರ್, ವಿಜೇತಾ ವಿಶ್ವನಾಥ್, ಸಂಗೀತಾ ಬಿಜೆ, ಅಶೋಕ ಎಸ್ ಕಂಜೂರ್, ಶರತ್ ಅರೋಹಣ ಅವರು ನಾಡಗೀತೆಗೆ ದನಿಗೂಡಿಸಿದ್ದಾರೆ.

ಈ ಸ್ವರ ಸಂಯೋಜನೆಯಲ್ಲಿ ಕೀಬೋರ್ಡ್ -ಅನಿಕೇತನ ಶರ್ಮ ಅವರದ್ದು, ಕೊಳಲು-ನೀತು ನಿನಾದ್,ಯತೀಶ್ ಅವರ ಧ್ವನಿ ಸಂಯೋಜನೆ ಸಹಕಾರ, ರೋಹಿತ್ ಅವರ ಮಿಕ್ಸಿಂಗ್, ರಾಘವೇಂದ್ರ ದೇಸಾಯಿ, ಅಜಯ್ ಅವರ ತಾಂತ್ರಿಕ ನೆರವು ಇದೆ. ಈ ಹೊಸ ಬಗೆಯ ಸಂಯೋಜನೆಯನ್ನು ನೀವು ನೋಡಿ ಆನಂದಿಸಿ ಹಂಚಿಕೊಳ್ಳಿ(ಒನ್ಇಂಡಿಯಾ ಕನ್ನಡ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
'Jaya Bharata Jananiya Tanujate' penned by Rashtrakavi Kuvempu is official state anthem of the Indian state of Karnataka.Late musician Mysore Ananthaswamy composed tune is most popular one. Here is the unplugged version with a new tune Santhosh Kumar V and team.
Please Wait while comments are loading...