Navaratri Fasting Rules: ನವರಾತ್ರಿ ಉಪವಾಸದಲ್ಲಿ ಸೇವಿಸಬಹುದಾದ, ಸೇವಿಸಲೇಬಾರದ ಆಹಾರಗಳು ಯಾವುವು..?
ಹಿಂದೂ ಧರ್ಮದ ಮಹತ್ವ ಹಬ್ಬ ಶರವನ್ನರಾತ್ರಿ ಮಹೋತ್ಸವ ಅಂದರೆ ನವರಾತ್ರಿಗೆ ಇನ್ನೇನು ಸಮಯಗಳ ಗಣನೆ ಆರಂಭವಾಗಿದೆ. ನವರಾತ್ರಿಯಲ್ಲಿ ದುರ್ಗಾದೇವಿಗೆ ವಿವಿಧ ಪೂಜಾ ಕೈ ಕಾರ್ಯಗಳ ಜೊತೆ ಉಪವಾಸ ವ್ರತ ಸಹ ಕೈಗೊಳ್ಳಲಾಗುತ್ತದೆ. ದೇವರನ್ನು ಮೆಚ್ಚಿಸಿ ತಮ್ಮ ಪ್ರಾರ್ಥನೆ ಸಲ್ಲಿಸಲು ಭಕ್ತರ ವಿಶೇಷ ಮಾರ್ಗವೇ ಉಪವಾಸ.
ಉಪವಾಸ ಮಾಡಿ ದೇವರನ್ನು ಪೂಜಿಸಿದೆ ಇಷ್ಟಾರ್ಥಗಳು ಬೇಗ ನೆರವೇರುತ್ತದೆ ಎನ್ನುವುದು ಜನರ ನಂಬಿಕೆಯಾಗಿದೆ. ಹೀಗಾಗಿ ಸಂಕಷ್ಟಿ, ಶಿವರಾತ್ರಿಯಂತೆ ನವರಾತ್ರಿಯಲ್ಲೂ ಹಲವರು ಉಪವಾಸ ಕೈಗೊಳ್ಳುತ್ತಾರೆ. ನವರಾತ್ರಿಯ 9 ದಿನಗಳ ಕಾಲವೂ ಉಪವಾಸ ಮಾಡುವವರಿದ್ದಾರೆ. ಹೀಗಾಗಿ ನವರಾತ್ರಿಯ ಉಪವಾಸದಲ್ಲಿ ಯಾವ ವಸ್ತುಗಳನ್ನು ಸೇವಿಸಬಹುದು, ಯಾವುದನ್ನು ಸೇವಿಸಬಾರದು ಎನ್ನುವ ಮಾಹಿತಿ ಇಲ್ಲಿದೆ.

ಹಾಲಿನ ಉತ್ಪನ್ನಗಳನ್ನು ಸೇವಿಸಿ
ನವರಾತ್ರಿಯಲ್ಲಿ ಉಪವಾಸ ಮಾಡುವವರು ಮುಖ್ಯವಾಗಿ ಹಾಲಿನ ಉತ್ಪನ್ನಗಳನ್ನು ಸೇವಿಸಬಹುದು. ಹಾಲು ಹಾಗೂ ಹಾಲಿನ ಉತ್ಪನ್ನಗಳಾದ ಬೆಣ್ಣೆ ಹಾಲು, ಸಿಹಿ ಲಸ್ಸಿ, ಮೊಸರು, ಖೀರ್‌ಗಳನ್ನು ಸೇವಿಸಬಹುದು. ಹಾಲನ್ನು ಸೇವಿಸುವುದರಿಂದ ಶಕ್ತಿ ಜೊತೆಗೆ ಹೊಟ್ಟೆ ಉರಿ ಹಾಗೂ ಇತರ ಸಮಸ್ಯೆಗಳು ಬರುವುದಿಲ್ಲ. ಹಾಲಿನ ಉತ್ಪನ್ನಗಳನ್ನು ಸೇವಿಸುವುದರಿಂದ ಉಪವಾಸ ಮಾಡುವವರಿಗೆ ಹಸಿವು ಅನಿಸುವುದಿಲ್ಲ.
ಹಣ್ಣುಗಳನ್ನು ಸೇವಿಸಿ
ನವರಾತ್ರಿಯಲ್ಲಿ ಉಪವಾಸ ಮಾಡುವವರು ಹಣ್ಣುಗಳನ್ನು ಸೇವಿಸಬಹುದು. ಹಣ್ಣುಗಳು ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ. ಹಣ್ಣಿನ ಜೊತೆಗೆ ಹಣ್ಣಿನ ರಸ, ಜ್ಯೂಸ್‌ಗಳನ್ನು ಸಹ ಸೇವಿಸಬಹುದು. ದೇಹಕ್ಕೆ ಬೇರೆ ಆಹಾರ ಹೋಗದ ಕಾರಣ ದೇಹ ಡಿಹೈಡ್ರೇಟ್ ಆಗಬಹುದು. ಈ ಸಮಯದಲ್ಲಿ ಹಣ್ಣುಗಳನ್ನು ಸೇವಿಸುವುದರಿಂದ ದೇಹ ಆರೋಗ್ಯವಾಗಿರಬಹುದು.
ಧಾನ್ಯಗಳ ಆಹಾರವನ್ನು ಸೇವಿಸಹುದು
ಸಿರಿ ಧಾನ್ಯಗಳು ದೇಹಕ್ಕೆ ಅತ್ಯಂತ ಉಪಯುಕ್ತ. ಇವುಗಳನ್ನು ಸೇವಿಸುವುದರಿಂದ ಆರೋಗ್ಯವಾಗಿರಬಹುದು. ಇದರಲ್ಲಿ ಆಯ್ದಾ ಧಾನ್ಯಗಳನ್ನು ಅವರವರ ಸಾಂಪ್ರಾದಾಯಕ್ಕೆ ಅನುಗುಣವಾಗಿ ಧಾನ್ಯಗಳಿಂದ ಮಾಡಿದ ಖಿಚಿಡಿ ಆಹಾರವನ್ನು ಸೇವಿಸಬಹುದು. ಇನ್ನು ಕೆಲವರು ಉಪವಾಸದಲ್ಲಿ ಧಾನ್ಯದ ಪದಾರ್ಥಗಳನ್ನು ಸೇವಿಸುವುದಿಲ್ಲ. ಅಂತವರು ಹಾಲು ಹಾಗೂ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ.

ಹೆಚ್ಚು ನೀರು ಸೇವಿಸಿ
ಉಪವಾಸ ಮಾಡುವಾಗ ನಿಮ್ಮನ್ನು ಹೈಡ್ರೀಕರಿಸಿಟ್ಟುಕೊಳ್ಳುವುದು ಮುಖ್ಯವಾಗಿದೆ. ನೀರು ಕುಡಿಯುವುದರಿಂದ ಆಯಾಸ ಕಡಿಮೆಯಾಗುತ್ತದೆ. ಜೊತೆಗೆ ಹಸಿವು ಕೂಡ ನಿವಾರಣೆಯಾಗುತ್ತದೆ. ಹೀಗಾಗಿ ಉಪವಾಸದ ಸಮಯದಲ್ಲಿ ಆಗಾಗ ನೀರನ್ನು ಕುಡಿಯುತ್ತಿರಿ.
ಅವಲಕ್ಕಿ ಹಾಗೂ ಹೆಸರು ಕಾಳು
ಕೆಲವು ಭಾಗಗಳಲ್ಲಿ ಉಪವಾಸದ ಸಮಯದಲ್ಲಿ ಅವಲಕ್ಕಿ ಹಾಗೂ ಹೆಸರು ಕಾಳುಗಳಿಂದ ಮಾಡಿದ ಪದಾರ್ಥಗಳನ್ನು ಸೇವಿಸುತ್ತಾರೆ. ಇದರಿಂದ ಹೊಟ್ಟೆ ಹಸಿವು ಕಮ್ಮಿಯಾಗುವುದರ ಜೊತೆಗೆ ದೇಹಕ್ಕೆ ಶಕ್ತಿಯನ್ನು ಸಹ ನೀಡುತ್ತದೆ. ಇನ್ನು ಕೆಲವರು ಕಟ್ಟು ನಿಟ್ಟಾಗಿ ವೃತ ಆಚರಿಸಿ ಕೇವಲ ಹಾಲು ಸೇವಿಸಿ ಸಹ ಉಪವಾಸ ಪೂರ್ತಿಗೊಳಿಸುತ್ತಾರೆ.
ನವರಾತ್ರಿ ಉಪವಾಸದಲ್ಲಿ ಇವುಗಳನ್ನು ಮಾಡಬೇಡಿ
ಪುಡಿ ಉಪ್ಪನ್ನು ಬಳಸಬೇಡಿ
ನವರಾತ್ರಿ ಉಪವಾಸ ಮಾಡುವವರು ಪುಡಿ ಉಪ್ಪನ್ನು ಯಾವ ಆಹಾರ ಪದಾರ್ಥಕ್ಕೂ ಬಳಸಬಾರದು ಎನ್ನುವ ನಂಬಿಕೆ ಇದೆ. ಹೀಗಾಗಿ ನವರಾತ್ರಿ ಸಮಯದಲ್ಲಿ ಆಹಾರವನ್ನು ತಯಾರಿಸುವಾಗ ಕಲ್ಲು ಉಪ್ಪನ್ನು ಮಾತ್ರ ಬಳಸಬಹುದಾಗಿದೆ.

ಮಾಂಸಹಾರ ಸೇವನೆಯಿಂದ ದೂರವಿರಿ
ನಿಮ್ಮ ಮನೆಯಲ್ಲಿ ನವರಾತ್ರಿ ಉಪವಾಸ ಮಾಡುತ್ತಿದ್ದರೆ ನೀವು ಕೂಡ ಮಾಂಸಹಾರ ಸೇವನೆಯಿಂದ ದೂರವಿರಿ. ನವರಾತ್ರಿ ದಿನಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಮೊಟ್ಟೆ ಮತ್ತು ಮಾಂಸವನ್ನು ತಿನ್ನಬಾರದು ಎನ್ನುವ ನಂಬಿಕೆ ಇದೆ. ಈ ಸಮಯದಲ್ಲಿ ಬದಲಿ ಆಹಾರಗಳನ್ನು ಸೇವಿಸಿ. ಇನ್ನು ನವರಾತ್ರಿ ಸಮಯದಲ್ಲಿ ಮದ್ಯಪಾನ ಮಾಡಬೇಡಿ.
ಗೋಧಿ ಹಾಗೂ ಅನ್ನದ ಪದಾರ್ಥಗಳ ಸೇವನೆ ಬೇಡ
ನವರಾತ್ರಿ ದಿನಗಳಲ್ಲಿ ಉಪವಾಸ ಇರುವವರು ಅನ್ನ ತಿನ್ನಬಾರದು. ದಿನದ ಒಂದು ಹೊತ್ತು ಅನ್ನ ಸೇವಿಸಬಹುದಾಗಿದ್ದು, ಕೆಲವರು ಅದನ್ನು ಸಹ ನಿರಾಕರಿಸುತ್ತಾರೆ. ಭಕ್ತರು ಗೋಧಿ ಹಿಟ್ಟಿನಿಂದ ಮಾಡಿದ ಯಾವುದನ್ನೂ ತಿನ್ನಬಾರದು.
(ಸೂಚನೆ-ಈ ಮೇಲಿನ ವಿಷಯಗಳನ್ನು ಅಂತರ್ಜಾಲದ ಮಾಹಿತಿ ಆಧಾರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಹೆಚ್ಚಿನ ಮಾಹಿತಿಗಾಗಿ ಪರಿಣಿತರಾದವರನ್ನು ಸಂಪರ್ಕಿಸುವುದು ಉತ್ತಮ)












Click it and Unblock the Notifications