ಮೊದಲ ದೀಪಾವಳಿಗೆ ಅತ್ತೆ ಚೊಂಬು ಕೊಟ್ಟ ಕಥೆ

ಮದುವೆಯನ್ನು ತಕ್ಕಮಟ್ಟಿಗೆ ಸುಮಾರಾಗಿಯಲ್ಲದಿದ್ದರೂ ಚೆನ್ನಾಗಿಯೇ ಮಾಡಿಕೊಟ್ಟಿದ್ದರು. ಹತ್ತರಲ್ಲಿ ಆರು ಮಾರ್ಕ್ಸ್. ಲಾಭವೂ ಇಲ್ಲ ನಷ್ಟವೂ ಇಲ್ಲ ಎನ್ನುವಂತಹ ಮದುವೆ ನಮ್ಮದು. ಅವರು ಕೊಟ್ಟಂತಹ ಸೋಕಾಲ್ಡ್ ವರದಕ್ಷಿಣೆಗಿಂದ ನಾವು ಕೊಟ್ಟ ಸೀರೆ, ಬಂಗಾರದ ರೇಟೇ ಜಾಸ್ತಿಯಾಗಿದ್ದರಿಂದ 'ವರದಕ್ಷಿಣೆ' ಇಲ್ಲದೆ ಮದುವೆಯಾದ ಅಂತ ಧೈರ್ಯವಾಗಿ ಹೇಳಬಲ್ಲೆ.
ನನ್ ಮಾವ ಎಂಟು ಲಕ್ಷ ರು. ವರದಕ್ಷಿಣೆ ಕೊಟ್ಟ, ನನ್ ಅತ್ತೆ 1 ಕೋಟಿ ರು. ಬೆಲೆಬಾಳುವ ಜಮೀನು ಗಿಫ್ಟಾಗಿ ಕೊಟ್ಟಳು ಅಂತೆಲ್ಲ ನನ್ನ ಕೆಲ ಸ್ನೇಹಿತರು ಮಾತನಾಡುವಾಗ, ಥತ್ ನನ್ನದೂ ಒಂದು ಮದುವೆಯಾ ಅಂತ ಬೇಜಾರೂ ಆಗಿದ್ದುಂಟು. ಎಲ್ಲಾ ಲೆಕ್ಕಾಚಾರ ಹಾಕಿದರೆ ಕೊಟ್ಟಿದ್ದು ಮೂವತ್ತು ಸಾವಿರಕ್ಕೂ ದಾಟಿರಲಿಲ್ಲ. ಹೋಗಿಲಿಬಡಿ ಅತ್ಲಾಗೆ.
ಲೆಟ್ ಮಿ ಕಮ್ ಬ್ಯಾಕ್ ಟು ದಿ ಪಾಯಿಂಟ್. ಮದುವೆಯಾಗಿದ್ದು ದೀಪಾವಳಿಗೆ ಕೆಲ ದಿನಗಳ ಹಿಂದೆ. ಹಾಗಾಗಿ, ನನ್ನ ಮೊದಲ ಅಳಿಯತನವೂ ಮದುವೆ ಮಾಡಿ ಸುಸ್ತಾಗಿದ್ದ ಹುಡುಗಿ ಮನೆಯವರೆಲ್ಲ ಸುಧಾರಿಸಿಕೊಳ್ಳುವ ಮೊದಲೇ ಬಂದಿತ್ತು. ಆದರೂ ಏನೋ ಉತ್ಸಾಹ. ಅಳಿಯತನ ಅಂದ ಮೇಲೆ ಏನೋ ಸಿಗುತ್ತಲ್ಲ ಎಂದು ಕಣ್ಣರಳಿದ್ದವು. [ಆಹಾ... ಮೊದಲ ರಾತ್ರಿ!]












Click it and Unblock the Notifications