ಅತ್ತೆ ಮನೆಯಲ್ಲಿ ನಮ್ಮಿಬ್ಬರ 'ಮೊದಲ ರಾತ್ರಿ'!
ದೀಪಾವಳಿಗೆ
ಆಹ್ವಾನವೂ ಬಂದಿತು. ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡು ಎರಡು ದಿನಗಳ ಮಟ್ಟಿಗೆ ಇರೋಣವೆಂದು ತಂದೆತಾಯಿಯೊಂದಿಗೆ ಹೆಂಡತಿಯ ಜೊತೆ ಬೆಂಗಳೂರಿನಲ್ಲೇ ಇದ್ದ ಅವರ ಮನೆಗೆ ಹಿಂದಿನ ದಿನವೇ ಹೋದೆ. ಮೊದಲೇ ತುಂಬಿತುಳುಕುವ ಕುಟುಂಬ. ಈಗ ನಾವೊಂದಿಷ್ಟು ಎಕ್ಸಟ್ರಾ. ನಗುಮೊಗದಿಂದಲೇ ಬರಮಾಡಿಕೊಂಡು, ಎರಡನೇ ಮಗನ ಸಂಸಾರವಿದ್ದ ಕೋಣೆಯನ್ನು ನಮ್ಮಿಬ್ಬರಿಗಾಗಿ ಬಿಟ್ಟುಕೊಟ್ಟರು. id="toptextpromo">ಊಟಗೀಟ
ಮುಗಿಸಿ ಮಲಗಲೆಂದು ಹೆಂಡತಿಯೊಂದಿಗೆ ಹೋಗಿ ಕೋಣೆ ಬಾಗಿಲು ಹಾಕಿಕೊಂಡೆ. ಅತ್ತೆ ಮನೆಯಲ್ಲಿ ನಮ್ಮಿಬ್ಬರ 'ಮೊದಲ ರಾತ್ರಿ'! ಶುರುವಾಯಿತು ನೋಡಿ ನನ್ನ ಜಾಗರಣೆಯ ಎಪಿಸೋಡು. ದಯವಿಟ್ಟು ಅಪಾರ್ಥ ಮಾಡಿಕೊಳ್ಳಬೇಡಿ. ಡಿಟೇಲಾಗಿ ಹೇಳಿಬಿಡುತ್ತೇನೆ. ಹೆಂಡತಿಯ ಎರಡನೇ ಅಣ್ಣನಿಗೆ ಮೂರು ಮಕ್ಕಳು, ಎಲ್ಲ ಐದರೊಳಗೆ. ಹಾಸಿದ ಹಾಸಿಗೆ, ದಿಂಬು, ಚಾದರು, ಕೋಣೆಯ ಮೂಲೆಮೂಲೆಯೂ ಉಚ್ಚೆಯ ವಾಸನೆಯಿಂದ ಘಮಘಮಿಸುತ್ತಿತ್ತು. ಈಗ ಗೊತ್ತಾಯ್ತಲ್ಲ! id='are-slot-1' class='oiad oi-axt oiadv'> id='top-searched-articles'>ಅಂತೂ
ಸೂರ್ಯನನ್ನು ಬಡಿದೆಬ್ಬಿಸುವಷ್ಟರಲ್ಲಿ ಸಾಕೋಸಾಕಾಯಿತು. ಸೂರ್ಯನಿಗೆ ಚೆಲ್ಲಾಟ ನನಗೆ ಪ್ರಾಣ ಸಂಕಟ. ಬೆಳಗಾಗಿ ಎಣ್ಣೆನೀರಾಗಿ, ಆರತಿಗೆ ಬಂದು ಕುಳಿತೆ. ಹೊಸಬಟ್ಟೆ ತೊಟ್ಟು ಆರತಿಗೆ ಎಲ್ಲರೊಂದಿಗೆ ಕುಳಿತೆ. ಎಲ್ಲರಿಗೂ ನನ್ನತ್ತಲೇ ದೃಷ್ಟಿ, ಆರತಿ ತಟ್ಟೆಯಲ್ಲಿ ಎಷ್ಟು ಹಾಕುತ್ತಾನೆಂದು. ಅಂತೂ ಮೊದಲ ಪಾಳಿ ಬಂದಿದ್ದೇ ನನ್ನದು. href="/festivals/diwali/2011/1019-my-first-deepavali-and-silver-chombu-gift-aid0038.html">ಬಲೇ ಚಾಲಾಕಿ ನನ್ನ ಅತ್ತೆ!











Click it and Unblock the Notifications