ಹಬ್ಬಕ್ಕೆ ಸ್ಪೆಷಲ್ ಆಲೂ ಮಸಾಲಾ ಪಲ್ಯ

ಆಲೂಗಡ್ಡೆ ಮಸಾಲಾಗೆ ಬೇಕಾಗುವ ಸಾಮಗ್ರಿ : 4-6 ಚಿಕ್ಕ ಗಾತ್ರದ ಬೇಯಿಸಿ ಸಿಪ್ಪೆ ತೆಗೆದ ಆಲೂಗಡ್ಡೆ, ಜೀರಿಗೆ, ಸಾಸಿವೆ, ಹಸಿ ಮೆಣಸಿನಕಾಯಿ, ಕರಿಬೇವು, ಉಪ್ಪು, ಅರಿಶಿಣ, ಧನಿಯಾ ಪುಡಿ, ಮೆಣಸಿನ ಪುಡಿ, ಎಣ್ಣೆ, ಕೊತ್ತಂಬರಿ ಸೊಪ್ಪು.
ಮಾಡುವ ವಿಧಾನ : ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಬೇಯಿಸಿ ಸ್ವಲ್ಪ ಹಿಸುಕಿದ ಆಲೂಗೆಡ್ಡೆ ಹಾಕಿ ಕಂದು ಬಣ್ಣಕ್ಕೆ ಬರುವವರೆಗೆ ತಾಳಿಸಬೇಕು. ಸಣ್ಣ ಪಾತ್ರೆಗೆ ಅರಿಶಿಣ, ಉಪ್ಪು, ಧನಿಯಾ ಪುಡಿ, ಮೆಣಸಿನ ಪುಡಿ ಹಾಕಿ ಸ್ವಲ್ಪ ನೀರು ಹಾಕಿ ದ್ರವ ರೂಪದ ಮಿಶ್ರಣ ತಯಾರಿಸಿಕೊಳ್ಳಿ.
ಈಗ ಇನ್ನೊಂದು ಬಾಣಲೆಗೆ ಎಣ್ಣೆ ಹಾಕಿ ಅದು ಬಿಸಿಯಾದಾಗ ಕರಿಬೇವು, ಜೀರಿಗೆ, ಸಾಸಿವೆ ಹಾಕಿ ಮೆಣಸಿನ ಪುಡಿ ಮತ್ತು ಕತ್ತರಿಸಿದ ಹಸಿಮೆಣಸಿನ ಕಾಯಿಯನ್ನು ಹಾಕಿ ಒಗ್ಗರಣೆಯಂತೆ ಮಾಡಿಕೊಳ್ಳಬೇಕು. ತಾಳಿಸಿಕೊಂಡಿದ್ದ ಆಲೂಗೆಡ್ಡೆಯನ್ನು ಇದಕ್ಕೆ ಹಾಕಿ ಒಂದೈದು ನಿಮಿಷ ಬೇಯಿಸಬೇಕು. ಕೊನೆಗೆ ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಹಬ್ಬಕ್ಕೆ ಆಲೂ ಮಸಾಲಾ ರೆಡಿಯಾಗಿರುತ್ತೆ.












Click it and Unblock the Notifications