ದೀಪಾವಳಿಗೆ ನಿಮ್ಮ ಮನೆಯಲ್ಲಿ ಏನು ಸ್ಪೆಷಲ್?

Deepavali Festival Special Recipes
ಹಬ್ಬಹರಿದಿನ, ಮುಂಜಿ, ಮದುವೆ, ಗೃಹಪ್ರವೇಶ, ನಾಮಕರಣ, ಹೊಸ ಕಾರು... ಯಾವುದೇ ಶುಭ ಸಮಾರಂಭವಿರಲಿ, ಅದರ ಯಶಸ್ಸು ಅಂದು ಹಾಕುವ ಪುಷ್ಕಳ ಭೋಜನದಲ್ಲಿ ಅಡಗಿರುತ್ತದೆ. ಅದುವೇ ಎಲ್ಲ ಶುಭ ಸಮಾರಂಭಗಳ ಮಾನದಂಡ. ಈ ಮಾತನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.

ಯಾವುದೇ ಸಮಾರಂಭವನ್ನು ನೆನಪಿಸಿಕೊಳ್ಳುವುದು ಅಂದು ಹೊಟ್ಟೆಸೇರಿದ ರುಚಿಯಾದ ಭೋಜನದಿಂದ. 'ಹೋಳಿಗೆ ಯಾವಾಗ ಹಾಕಿಸ್ತಿಯಾ'ದಿಂದ ಹಿಡಿದು 'ಅವತ್ತು ನಿಮ್ಮ ಅಮ್ಮ ಮಾಡಿದ ಹೋಳಿಗೆ, ಕಟ್ಟಿನ ಸಾರು ಸಖತ್ತಾಗಿತ್ತಮ್ಮ' ಎಂಬವರೆಗೆ ಮಾತುಗಳಲ್ಲೇ ಸಮಾರಂಭಗಳನ್ನು ಅಳೆದುತೂಗುವರು ಜಾಸ್ತಿ.

ಇನ್ನು ದೀಪಾವಳಿಯ ಸಂದರ್ಭದಲ್ಲಿ ನರಕ ಚತುರ್ದಶಿ, ಮಹಾಲಯ ಅಮವಾಸ್ಯೆ ಮತ್ತು ಬಲಿ ಪಾಡ್ಯಮಿ ಮೂರು ದಿನಗಳ ಕಾಲ, ಮನೆಯಲ್ಲಿ, ನೆಂಟರಿಷ್ಟರಲ್ಲಿ ಭೋಜನಗಳದ್ದೇ ಕಾರುಬಾರು. ಚಟಪಟ ಪಟಾಕಿಗಳು ಹೊರಗಡೆ ಸಿಡಿಯುತ್ತಿರುವಾಗ, ಒಳಗಡೆ ಮಾತಿನ ಚಟಾಕಿ ಹಾರಿಸಿಕೊಂಡು ಚುರುಗುಟ್ಟುವ ಹೊಟ್ಟೆಗೆ ಹೋಳಿಗೆ ಊಟ ಇಳಿಸುತ್ತಿದ್ದರೆ ಆ ಆನಂದವೇ ಬೇರೆ.

ದೀಪಾವಳಿಯ ಮೊದಲ ದಿನ ಸೂರ್ಯ ತನ್ನ ಕಿರಣಗಳನ್ನು ಭೂಮಿಯ ಮೇಲೆ ಬೀಳಿಸುವ ಮುನ್ನವೇ ಹಿಂದೂ ಧರ್ಮೀಯರ ಮನೆಯಲ್ಲಿ ಹೊಸಬಟ್ಟೆ ತೊಟ್ಟ ಕುಟುಂಬದವರಿಗೆಲ್ಲ ಆರತಿ ಮಾಡುವ ಪದ್ಧತಿಯಿದೆ. ನಂತರ ಅಭ್ಯಂಜನ ಮಾಡಿದ ಮೇಲೆ ನೆಂಟರಿಷ್ಟರನ್ನು ಮನೆಗೆ ಕರೆದು ವೈವಿಧ್ಯಮಯ ತಿಂಡಿತಿನಿಸುಗಳನ್ನು ಮಾಡಿ ಸಂತುಷ್ಟಗೊಳಿಸುವ ಪರಿಪಾಠವೂ ಬೆಳೆದುಕೊಂಡು ಬಂದಿದೆ.

ಬೇಸನ್ ಉಂಡೆ, ಕೋಡುಬಳೆ, ಚಕ್ಕುಲಿ, ಕರ್ಚಿಕಾಯಿ, ಉಪ್ಪಿಟ್ಟು, ಸಿರಾ, ಅವಲಕ್ಕಿ, ಚಟ್ನಿಪುಡಿ, ಜೊತೆಗೊಂದಿಷ್ಟು ಮೊಸರು ಎಲ್ಲ ತಯಾರಿಸಿ ಬಾಳೆಎಲೆಯ ಮೇಲೆ ಕುಳಿತು ಪಟ್ಟಾಗಿ ತಿಂಡಿ ಬಡಿಸುತ್ತಾರೆ. ಬೆಳಕಿನ ಜೊತೆ ಬಾಂಧವ್ಯವನ್ನು ಬೆಳೆಸಿಕೊಳ್ಳುವುದು, ಹೊಟ್ಟೆತುಂಬ ಉಂಡು ಬಂಧುಬಳಗದೊಂದಿಗೆ ಹರ್ಷದ ಕ್ಷಣಗಳನ್ನು ಕಳೆಯುವುದು ಈ ಸಮಾವೇಶಗಳ ಮೂಲ ಉದ್ದೇಶ.

ವರುಷಕ್ಕೊಮ್ಮೆ ಬೆಳಕನ್ನೀಯುವ ದೀಪಾವಳಿ ಎಂದ ಮೇಲೆ ವಿಶೇಷ ತಿಂಡಿ ತಿನಿಸು ಇರಲೇಬೇಕು. ಆದರೆ ಈ ಬಾರಿ ದೀಪಾವಳಿಗೆ ವಿಶೇಷವಾಗಿ, ವಿಭಿನ್ನವಾಗಿ ಏನನ್ನು ತಯಾರಿಸಬಹುದು ಎಂದು ನೀವು ಯೋಚಿಸುತ್ತಿದ್ದರೆ ನಿಮಗೆ ಅನುವು ಮಾಡಿಕೊಡಲೆಂದು ನಾಲ್ಕು ಬಗೆಯ ಅಡುಗೆಗಳು ಕಾದಿವೆ. ಅವೇನೆಂದು ಕಾದುನೋಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+