ಮೈಸೂರಿನಲ್ಲಿ ಪ್ರವಾಸಿಗರಿಗೆ ಮಾಹಿತಿ ಕೇಂದ್ರ

ಈ ಮಾಹಿತಿ ಕೇಂದ್ರದಲ್ಲಿ ಮೈಸೂರಿನ ಮಹಾಜನ ಕಾಲೇಜಿನ ಪ್ರವಾಸೋದ್ಯಮ ವಿಭಾಗದ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೆ ದೂರದಿಂದ ಬರುವ ಪ್ರವಾಸಿಗರಿಗೆ ಬೇಕಾದ ಮಾಹಿತಿಗಳನ್ನು ಈ ಮಾಹಿತಿ ಕೇಂದ್ರದ ಸ್ವಯಂಸೇವಕರು ನೀಡಲಿದ್ದಾರೆ.
ಮಾಹಿತಿ ಕೇಂದ್ರದಲ್ಲಿ ಪ್ರವಾಸಿಗರಿಗೆ ದಸರಾ ಉತ್ಸವದ ಕುರಿತಂತೆ ಮಾಹಿತಿ, ಮೈಸೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಪ್ರೇಕ್ಷಣೀಯ ತಾಣಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಲಿದೆ. ಹಾಗೆಯೆ, ಮೈಸುರು ಸುತ್ತಲಿನ ಸ್ಥಳಗಳನ್ನು ತೋರಿಸಲು ಮಾಡಿರುವ ವಿಶೇಷ ಬಸ್ ವ್ಯವಸ್ಥೆಯ ಕುರಿತು ಕೂಡ ಮಾಹಿತಿ ನೀಡಲಿದ್ದಾರೆ.
ಹೋಂಸ್ಟೇ ವ್ಯವಸ್ಥೆ : ದಸರಾ ಸಂದರ್ಭ ಹೋಟೆಲ್‌ನಲ್ಲಿ ತಂಗಲು ಇಷ್ಟಪಡದ ಹಾಗೂ ಮನೆ ವಾತಾವರಣದ ಹೋಂಸ್ಟೇಯನ್ನು ಬಯಸುವಂತಹ ಪ್ರವಾಸಿಗರಿಗಾಗಿ ಸುಮಾರು 40 ಮನೆಗಳನ್ನು ಗುರುತಿಸಲಾಗಿದೆ. ಈ ಮನೆಗಳಲ್ಲಿ ತಂಗುವವರಿಗೆ ದಸರಾ ಉಡುಗೊರೆಯಾಗಿ ಮೈಸೂರು ಪೇಟಾ, ಸಿಲ್ಕ್ ಸ್ಕಾರ್ಫ್, ಸ್ಯಾಂಡಲ್‌ವುಡ್ ಕೆತ್ತನೆ ಕಲಾಕೃತಿ, 5 ಎಂ.ಎಲ್. ಗಂಧದ ಎಣ್ಣೆ, 3 ಸ್ಯಾಂಡಲ್ ಸೋಪ್, ಸ್ಯಾಂಡಲ್ ಅಗರಬತ್ತಿಗಳನ್ನು ಕೊಡುವ ಉದ್ದೇಶವನ್ನು ಹೊಂದಲಾಗಿದೆ.












Click it and Unblock the Notifications