ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ದಸರಾ : ವಿಶೇಷ ಬಸ್ ವ್ಯವಸ್ಥೆ

By * ಬಿ.ಎಂ. ಲವಕುಮಾರ್, ಮೈಸೂರು
|
Google Oneindia Kannada News

Mysore Dasara 2011 : Special bus service
ಮೈಸೂರು, ಸೆ. 27 : ವಿಶ್ವಪ್ರಸಿದ್ಧ ಮೈಸೂರು ದಸರಾ ವೀಕ್ಷಣೆಗೆ ದೂರದ ಊರುಗಳಿಂದ ಆಗಮಿಸುವವರಿಗಾಗಿ ಸೆಪ್ಟಂಬರ್ 28ರಿಂದ ಅಕ್ಟೋಬರ್ 10ರವರೆಗೆ ವಿಶೇಷ ಬಸ್‌ಗಳ ಸಂಚಾರ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕಲ್ಪಿಸಿದೆ.

ಮೈಸೂರು ನಗರದಿಂದ ಚಾಮುಂಡಿಬೆಟ್ಟ, ಕೆಆರ್‌ಎಸ್, ಹುಣಸೂರು, ಕೆ.ಆರ್.ನಗರ, ಎಚ್.ಡಿ.ಕೋಟೆ, ಸರಗೂರು, ಗುಂಡ್ಲುಪೇಟೆ, ನಾಗಮಂಗಲ, ನಂಜನಗೂಡು, ಶ್ರೀರಂಗಪಟ್ಟಣ, ಕುಶಾಲನಗರ, ವೀರಾಜಪೇಟೆ, ಮಡಿಕೇರಿ, ಮಂಡ್ಯ, ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು, ಹಾಸನ, ಧರ್ಮಸ್ಥಳ, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ ಹಾಗೂ ಹೊರ ರಾಜ್ಯಗಳಿಗೂ ಹೆಚ್ಚುವರಿ ಬಸ್‌ಗಳ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದ್ದು, ಸುಮಾರು 200 ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ.

ಪ್ರಯಾಣಿಕರ ಅನುಕೂಲಕ್ಕಾಗಿ ಜಿಲ್ಲೆ, ಅಂತರ ರಾಜ್ಯ ಸಾರಿಗೆಯಲ್ಲಿ ಮುಂಗಡ ಟಿಕೆಟ್‌ಗಳನ್ನು ಕಾಯ್ದಿರಿಸುವ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಅಲ್ಲದೆ, ದಸರಾ ಪ್ರಯುಕ್ತ ವಿವಿಧ ಪ್ರೇಕ್ಷಣೀಯ ತಾಣಗಳಿಗೆ ತೆರಳಲು ಗಿರಿದರ್ಶಿನಿ, ಜಲದರ್ಶಿನಿ, ದೇವದರ್ಶಿನಿ, ನಗರದರ್ಶಿನಿ ಮೊದಲಾದ ಪ್ಯಾಕೇಜ್ ಟೂರ್ ವ್ಯವಸ್ಥೆಯನ್ನು ಮಾಡಲಾಗಿದೆ.

ಗಿರಿದರ್ಶಿನಿ : ಮೈಸೂರಿನಿಂದ ಬಂಡೀಪುರ, ಹಿಮವದ್‌ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನಬೆಟ್ಟ, ಚಾಮುಂಡಿಬೆಟ್ಟಕ್ಕೆ ಗಿರಿದರ್ಶಿನಿ ಎಂಬ ಪ್ಯಾಕೇಜ್ ಟೂರ್ ಮಾಡಿದ್ದು, ಇದು ಸುಮಾರು 305 ಕಿ.ಮೀ.ಗಳ ಪ್ರವಾಸವಾಗಿದ್ದು ಇದಕ್ಕೆ ದೊಡ್ಡವರಿಗೆ 260 ಹಾಗೂ ಮಕ್ಕಳಿಗೆ 130 ರೂಪಾಯಿಯನ್ನು ನಿಗದಿಪಡಿಸಲಾಗಿದೆ.

ಜಲದರ್ಶಿನಿ : ಈ ಪ್ಯಾಕೇಜ್ ಟೂರ್‌ನಲ್ಲಿ ನಾಗರಹೊಳೆ, ಇರ್ಪು, ರಾಜಾಸೀಟ್, ಗೋಲ್ಡನ್ ಟೆಂಪಲ್ ಮುಂತಾದ ಪ್ರೇಕ್ಷಣೀಯ ತಾಣಗಳಿಗೆ ತೆರಳಬಹುದಾಗಿದೆ. ಸುಮಾರು 376 ಕಿ.ಮೀ. ದೂರದ ಪ್ರವಾಸಕ್ಕೆ ದೊಡ್ಡವರಿಗೆ 300, ಮಕ್ಕಳಿಗೆ 150 ರೂಪಾಯಿಯನ್ನು ನಿಗದಿಪಡಿಸಲಾಗಿದೆ.

ದೇವದರ್ಶಿನಿ : ಗಗನಚುಕ್ಕಿ, ಭರಚುಕ್ಕಿ, ಮುಡುಕುತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣ, ಕೆಆರ್‌ಎಸ್‌ಗೆ ಸುಮಾರು 230 ಕಿ.ಮೀ. ಪ್ರಯಾಣವಾಗಿದ್ದು, ದೊಡ್ಡವರಿಗೆ 180, ಮಕ್ಕಳಿಗೆ 90 ರೂಪಾಯಿಯನ್ನು ನಿಗದಿಪಡಿಸಲಾಗಿದೆ.

ನಗರದರ್ಶಿನಿ : ಇದರಲ್ಲಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ, ಉತ್ತನಹಳ್ಳಿ, ಚಾಮುಂಡಿಬೆಟ್ಟ, ನಂದಿ, ಪ್ರಾಕೃತಿಕ ವಸ್ತು ಸಂಗ್ರಹಾಲಯ, ಮೃಗಾಲಯ, ಜಗನ್ಮೋಹನ ಅರಮನೆ, ಶ್ರೀರಂಗಪಟ್ಟಣ, ದರಿಯಾದೌಲತ್, ನಿಮಿಷಾಂಬ ದೇವಾಲಯ, ಶ್ರೀರಂಗನಾಥಸ್ವಾಮಿ ದೇವಾಲಯ ಮೊದಲಾದ ಪ್ರೇಕ್ಷಣೀಯ ತಾಣಗಳಿಗೆ ತೆರಳಬಹುದಾಗಿದೆ. ಸುಮಾರು 145 ಕಿ.ಮೀ. ದೂರದ ಪ್ರಯಾಣವಾಗಿದ್ದು, ದೊಡ್ಡವರಿಗೆ 100, ಮಕ್ಕಳಿಗೆ 50 ರೂಪಾಯಿಯನ್ನು ನಿಗದಿಪಡಿಸಲಾಗಿದೆ.

ಈ ಪ್ಯಾಕೇಜ್‌ನಡಿ ತೆರಳುವ ಬಸ್‌ಗಳು ಮೈಸೂರಿನ ಸಬರ್ಬನ್ ಬಸ್ ನಿಲ್ದಾಣದಿಂದ ಬೆಳಿಗ್ಗೆ 6.30ಕ್ಕೆ ಹೊರಟು ರಾತ್ರಿ 9.30ಕ್ಕೆ ಹಿಂತಿರುಗಲಿವೆ. ಮಾಹಿತಿಗೆ 0821-2443490, 2520853, ಮುಂಗಡ ಟಿಕೆಟ್ ಕಾಯ್ದಿರಿಸಲು 7760990822 ಸಂಪರ್ಕಿಸಬಹುದಾಗಿದೆ.

English summary
Mysore Dasara 2011 : Special bus service has been arranged by the KSRTC for the passengers arrive to watch the world famous Dasara. There are different packages to see the tourism spots in and around Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X