ಹರ್ಷ ಕಾವೇರಿ ಗೋಪಿ ಕೋಕಿಲಾಗೆ ಭರ್ಜರಿ ಆತಿಥ್ಯ

Mysore Dasara elephants
ಹರ್ಷ : ಕೊಡಗಿನ ಕುಶಾಲನಗರ ಬಳಿಯ ದುಬಾರೆ ಆನೆ ಶಿಬಿರದಿಂದ ಬಂದಿರುವ ಹರ್ಷನ ವಯಸ್ಸು 45. ಎತ್ತರ 2.57 ಮೀ. ಉದ್ದ 3.40 ಮೀ. ತೂಕ 3290 ಕೆ.ಜಿ. ಇದನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದೆ. 12ನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.

ಕಾವೇರಿ : ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಕಾವೇರಿ ಮಡಿಕೇರಿ ವಿಭಾಗದ ದುಬಾರೆ ಆನೆ ಶಿಬಿರದಿಂದ ಬಂದಿದೆ. 2.50ಮೀ. ಎತ್ತರ, 3.32 ಮೀ. ಉದ್ದ ಹಾಗೂ 3152 ಕೆ.ಜಿ. ಭಾರವನ್ನು ಹೊಂದಿರುವ ಈ ಆನೆಯನ್ನು 2009ರ ಫೆಬ್ರವರಿಯಲ್ಲಿ ಸೋಮವಾರಪೇಟೆಯ ಅಡಿನಾಡೂರು ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ.

ಗೋಪಿ : 1993ರಲ್ಲಿ ಸೋಮವಾರಪೇಟೆಯ ಕಾರೆಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾದ 29 ವರ್ಷ ವಯಸ್ಸಿನ ಗೋಪಿ ತುಂಬಾ ಸಾಧು ಸ್ವಭಾವದವನಾಗಿದ್ದು, ದುಬಾರೆ ಆನೆ ಶಿಬಿರದಲ್ಲಿ ಸಫಾರಿ ಕೆಲಸ ನಿರ್ವಹಿಸುತ್ತಿದ್ದು ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದಾನೆ. ಈತ 2.92 ಮೀ. ಎತ್ತರ, 3.42 ಮೀ. ಎತ್ತರ, 3710 ಕೆ.ಜಿ. ತೂಕವಿದ್ದಾನೆ. ದುಬಾರೆ ಆನೆ ಶಿಬಿರದಿಂದ ಬಂದಿದ್ದಾನೆ.

ಕೋಕಿಲಾ : ಹನ್ನೆರಡನೇ ಬಾರಿಗೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿರುವ 66 ವರ್ಷ ಪ್ರಾಯದ ಕೋಕಿಲ 2.56 ಮೀ. ಎತ್ತರ ಹಾಗೂ 3370 ಕೆ.ಜಿ. ತೂಕ ಹೊಂದಿದ್ದಾಳೆ. ಇದುವರೆಗೆ ಹಲವು ಸಮಾರಂಭಗಳ ಮೆರವಣಿಗೆಗಳಲ್ಲಿ ಭಾಗವಹಿಸಿದ ಅನುಭವವಿದೆ. 1977ರಲ್ಲಿ ಈಕೆಯನ್ನು ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+