ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಲರಾಮ ಗಜೇಂದ್ರ ಅಭಿಮನ್ಯು ಅರ್ಜುನ ಮೇರಿ

By * ಬಿ.ಎಂ. ಲವಕುಮಾರ್, ಮೈಸೂರು
|
Google Oneindia Kannada News

Balaram carrying Golden Howdah
ಜಂಬೂ ಸವಾರಿ ರೂವಾರಿಗಳು : ಈ ಬಾರಿಯ ದಸರಾ ಜಂಬೂ ಸವಾರಿಯಲ್ಲಿ ಬಲರಾಮನ ನೇತೃತ್ವದಲ್ಲಿ ಗಜೇಂದ್ರ, ಅಭಿಮನ್ಯು, ಅರ್ಜುನ, ಸರಳ, ಮೇರಿ, ಗಂಗೆ, ಕಾಂತಿ, ಕೋಕಿಲಾ, ಕಾವೇರಿ, ಗೋಪಿ, ಹರ್ಷ, ವಿಕ್ರಮ, ಸೇರಿ ಹದಿಮೂರು ಆನೆಗಳು ಪಾಲ್ಗೊಂಡಿವೆ. ಈ ಜಂಬೂ ಸವಾರಿ ರೂವಾರಿಗಳ ವಿವರ ಇಲ್ಲಿದೆ.

ಬಲರಾಮ : ಚಿನ್ನದ ಅಂಬಾರಿ ಹೊತ್ತು ಮುನ್ನಡೆಯುವ ಬಲರಾಮ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ಆನೆ ಶಿಬಿರದಿಂದ ಬಂದಿದ್ದು, ಈಗ 53 ವರ್ಷ. ಸೌಮ್ಯ ಸ್ವಭಾವದ ಈತ 2.70 ಮೀಟರ್ ಎತ್ತರ, 3.77 ಮೀ. ಉದ್ದ, ಸುಮಾರು 4900 ಕೆ.ಜಿ. ತೂಕವಿದ್ದಾನೆ. ಹದಿನಾರು ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು, ಕಳೆದ ಹನ್ನೆರಡು ವರ್ಷದಿಂದ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸುತ್ತಿದ್ದಾನೆ. ಬಲರಾಮನನ್ನು 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು.

ಅರ್ಜುನ : ಕಳೆದ 10 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಅರ್ಜುನನಿಗೆ ಈಗ 51 ವರ್ಷ. ಈತನ ಎತ್ತರ 2.80 ಮೀ, ಉದ್ದ 3.75 ಮೀ, 4750 ಕೆ.ಜಿ. ತೂಕವನ್ನು ಹೊಂದಿದ್ದಾನೆ. 1968ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಪಿಟ್ ಮೆಥಡ್‌ನಿಂದ ಸೆರೆಹಿಡಿದಿದ್ದು, ಹಿಂದಿನ ಅಂಬಾರಿ ಆನೆ ದ್ರೋಣನ ನಂತರ ಒಂದು ಬಾರಿ ಚಿನ್ನದ ಅಂಬಾರಿ ಹೊತ್ತ ಅನುಭವವಿದೆ. ಪ್ರಸ್ತುತ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳ್ಳೆ ಆನೆ ಶಿಬಿರದಿಂದ ಈತ ಬಂದಿದ್ದು, ದಸರಾ ಮಹೋತ್ಸವದಲ್ಲಿ ಪತಾಕೆ ಆನೆಯ ಜವಾಬ್ದಾರಿ ವಹಿಸುತ್ತಿದೆ.

ಮೇರಿ :
55 ವರ್ಷ ವಯಸ್ಸಿನ ಹೆಣ್ಣಾನೆ ಮೇರಿ 2.36 ಮೀಟರ್ ಎತ್ತರವಿದ್ದು, 3.34 ಮೀ ಉದ್ದ ಹಾಗೂ 3180 ಕೆ.ಜಿ. ತೂಕವಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ವನ್ಯಜೀವಿ ವಲಯದ ಸುಂಕದಕಟ್ಟೆ ಆನೆ ಶಿಬಿರದಿಂದ ಬಂದಿದೆ. ಇದನ್ನು 1977ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದೆ. ಇದುವರೆಗೆ 10 ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು ಬಲರಾಮನಿಗೆ ಕುಮ್ಕಿ ಆನೆಯಾಗಿ ಕಾರ್ಯನಿರ್ವಹಿಸುತ್ತಿದೆ.

ಗಜೇಂದ್ರ : ಚಾಮರಾಜನಗರ ವನ್ಯಜೀವಿ ವಿಭಾಗದ ಕೆ.ಗುಡಿ ಆನೆ ಶಿಬಿರದಿಂದ ಬಂದಿರುವ ಗಜೇಂದ್ರನಿಗೆ ಈಗ 56 ವರ್ಷ. 2.84 ಮೀ. ಎತ್ತರ, 3.80 ಮೀ. ಉದ್ದ ಹಾಗೂ 4570 ಕೆ.ಜಿ. ತೂಕವಿದ್ದಾನೆ. ಈತನನ್ನು 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಅರವಳಿಕೆ ಔಷಧಿ ನೀಡುವ ಮೂಲಕ ಸೆರೆಹಿಡಿಯಲಾಗಿದೆ. ಕಾಡಾನೆಯನ್ನು ಪಳಗಿಸುವುದರಲ್ಲಿ ಸೈ ಎನಿಸಿ ಕೊಂಡಿರುವ ಈತ ಮಹಾರಾಜರ ಅರಮನೆಯ ಪೂಜೆಯ ವಿಧಿ ವಿಧಾನಗಳಲ್ಲಿ ಭಾಗವಹಿಸುವ ಪಟ್ಟದ ಆನೆಯಾಗಿ ಕಾರ್ಯನಿರ್ವಹಿಸುತ್ತಿದ್ದು, 15 ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡ ಅನುಭವವಿದೆ.

English summary
13 elephants participating in world famous Mysore Dasara 2011 are getting trained in Mysore. Here is brief biodata of the elephants including Balaram, which will carry golden howdah on Vijayadashami.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X