ಈ ಗಜಪಡೆ... ಮೈಸೂರು ದಸರಾ ಸೂತ್ರಧಾರಿಗಳು
ಮೈಸೂರು
ದಸರಾದಲ್ಲಿ ಗಜಪಡೆಗಳದ್ದೇ ಕಾರುಬಾರು.... ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯದಲ್ಲಿ ಬಲರಾಮ ನಡೆಯುತ್ತಿದ್ದರೆ ಅವನ ಸುತ್ತಮುತ್ತ ಸರ್ವ ಅಲಂಕಾರ ಭೂಷಿತರಾಗಿ ಹೆಜ್ಜೆ ಹಾಕುವ ಗಜಪಡೆಗಳನ್ನು ನೋಡಲು ಎರಡು ಕಣ್ಣುಗಳೇ ಸಾಲದಾಗುತ್ತದೆ. ಆ ಒಂದು ದಿನದ ಜಂಬೂಸವಾರಿಗಾಗಿ ವಿವಿಧ ಆನೆ ಶಿಬಿರಗಳಿಂದ ಎರಡು ತಂಡವಾಗಿ ಮೈಸೂರಿಗೆ ಆಗಮಿಸುವ ಗಜಪಡೆ ತಿಂಗಳಾನುಗಟ್ಟಲೆ ನಗರದಲ್ಲಿ ತಾಲೀಮು ನಡೆಸುವ ಮೂಲಕ ಸಜ್ಜಾಗುತ್ತವೆ. id="toptextpromo">ಮೈಸೂರಿನ
ಅರಮನೆ ಆವರಣದಲ್ಲಿ ಬೀಡು ಬಿಡುವ ಈ ಗಜಪಡೆಗಳಿಗೆ ದಿನನಿತ್ಯ ವಿವಿಧ ಬಗೆಯ ಭೂರಿ ಭೋಜನ. ಅದರಲ್ಲೂ ಜಂಬೂ ಸವಾರಿಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ಬಲರಾಮನಿಗೆ ವಿಶೇಷ ಸತ್ಕಾರಗಳು ನಡೆಯುತ್ತಿವೆ. ಉದ್ದು, ಗೋಧಿ, ಕುಸುಬಲಕ್ಕಿ, ಈರುಳ್ಳಿ, ಹಸಿ ತರಕಾರಿಗಳ ದೊಡ್ಡ ಉಂಡೆ, ಜೊತೆಗೆ ಬೆಣ್ಣೆ, ಭತ್ತ, ತೆಂಗಿನಕಾಯಿ, ಹಿಂಡಿ, ಕಬ್ಬು, ಬೆಲ್ಲ, ಉಚ್ಚೆಳ್ಳು ಮೊದಲಾದ ಸೈಡ್ ಐಟಂಗಳೊಂದಿಗೆ ಹಸಿರು ಮೇವುಗಳಾಗಿ ಆಲದ ಮರದ ಸೊಪ್ಪು, ಹುಲ್ಲನ್ನು ಆಗಾಗ್ಗೆ ನೀಡಲಾಗುತ್ತಿದೆ. ದಿನಕ್ಕೆರಡು ಬಾರಿ ಪೈಪಿನಲ್ಲಿ ನೀರು ಹಾಯಿಸಿ ಸ್ನಾನ ಮಾಡಿಸಲಾಗುತ್ತಿದೆ. id='are-slot-1' class='oiad oi-axt oiadv'> id='top-searched-articles'>ಜಂಬೂ
ಸವಾರಿಯಲ್ಲಿ ಯಾವುದೇ ಅಡೆತಡೆಗೆ ಬಗ್ಗದೆ ಮುನ್ನಡೆಯಲು ಬಲರಾಮನಿಗೆ ಸುಮಾರು 750 ಕೆ.ಜಿ. ತೂಕದ ಮರದ ಅಂಬಾರಿಯನ್ನು, ಉಳಿದ ಆನೆಗಳಿಗೆ ಮರಳಿನ ಮೂಟೆ(ಗಾದಿ ಹಮ್ದಾ)ಯನ್ನು ಕಟ್ಟಿ ದಿನಕ್ಕೆರಡು ಬಾರಿ ತಾಲೀಮು ನಡೆಯುತ್ತದೆ. ಅರಮನೆ ಆವರಣದಿಂದ ಆರಂಭವಾಗುವ ಈ ತಾಲೀಮು ಸುಮಾರು 6 ಕಿ.ಮೀ.ರಷ್ಟು ದೂರವಿರುವ ಬನ್ನಿ ಮಂಟಪದವರೆಗೆ ದಿನನಿತ್ಯ ನಡೆಯುತ್ತದೆ.











Click it and Unblock the Notifications