Year Ender 2024: ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಮಾರಾಟವಾದ ಬೈಕ್‌ಗಳಿವು, ಯಾವುದು ನಂಬರ್.1
ಭಾರತದಲ್ಲಿ ಬೈಕ್ ಖರೀದಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಭಾರತದಲ್ಲಿ ದ್ವಿಚಕ್ರ ವಾಹನ ಮಾರುಕಟ್ಟೆಯು ಹೆಚ್ಚಿನ ಬೇಡಿಕೆಯೊಂದಿಗೆ 2024ರಲ್ಲಿ ಮುನ್ನಡೆ ಸಾಧಿಸಿದೆ. ಈ ವರ್ಷದ ಅಂತ್ಯದ ವೇಳೆ ದ್ವಿಚಕ್ರ ವಾಹನ ವಲಯವು ಶೇ 12ರಷ್ಟು ಬೆಳವಣಿಗೆ ಕಂಡಿದೆ. ಅದರಲ್ಲು ಕೆಲವು ಬೈಕ್‌ಗಳು ಈ ವರ್ಷ ಭಾರಿ ಸಂಖ್ಯೆಯಲ್ಲಿ ಮಾರಾಟವಾಗುವ ಮೂಲಕ ದಾಖಲೆ ಬರೆದಿವೆ. ಅದರಂತೆ ಭಾರತದಲ್ಲಿ ಮಾರಾಟವಾದ ಬೈಕ್‌ಗಳ ಪಟ್ಟಿ ಇಲ್ಲಿದೆ..
1. ಹೀರೋ ಸ್ಲೆಂಡರ್ ಪ್ಲಸ್ (Hero Splendor Plus): ಹೀರೋ ಸ್ಪ್ಲೆಂಡರ್ ಪ್ಲಸ್ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಮೊದಲಿನಿಂದಲೂ ರಾಜನಂತೆ ಮೆರೆಯುತ್ತಿದೆ. ಇದರ ವಿಶ್ವಾಸಾರ್ಹತೆ, ಅಸಾಧಾರಣ ಇಂಧನ ದಕ್ಷತೆ ಮತ್ತು ನಿರ್ವಹಣೆಯಿಂದಲೇ ಹೆಸರುವಾಸಿಯಾಗಿರುವ ಸ್ಪ್ಲೆಂಡರ್ ಗ್ರಾಮೀಣ ಭಾಗ ಹಾಗೂ ನಗರ ಪ್ರದೇಶಗಳಲ್ಲೂ ಹೆಚ್ಚಾಗಿ ಖರೀದಿಯಾಗಿದೆ. ಈ ವರ್ಷ 28,40,595 ಬೈಕ್‌ಗಳು ಮಾರಾಟವಾಗಿರುವುದಾಗಿ ವರದಿಯಾಗಿದೆ.

2. ಹೋಂಡಾ ಸಿಬಿ ಶೈನ್ (Honda CB Shine): ಭಾರತದ ನೆಚ್ಚಿನ 125 ಸಿಸಿ ಕಮ್ಯೂಟರ್ ಬೈಕ್‌ಗಳಲ್ಲಿ ಹೋಂಡಾ ಸಿಬಿ ಶೈನ್ ಮುಂಚೂಣಿಯಲ್ಲಿದೆ. ಅದರ ಎಂಜಿನ್ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ದಿನನಿತ್ಯದ ಪ್ರಯಾಣಿಕರಿಗೆ ಇದು ಒಂದು ಉತ್ತಮ ಆಯ್ಕೆಯಾಗಿದೆ. ಈ ಸಿಬಿ ಶೈನ್ ಕೂಡ 12,77,120 ಬೈಕ್‌ಗಳ ದಾಖಲೆ ಮಾರಾಟ ಬರೆದಿದೆ.
3. ಹೀರೋ ಎಚ್‌ಎಫ್ ಡಿಲಕ್ಸ್ (Hero HF Deluxe): ಈ ವರ್ಷ 11,93,856 ಹೀರೋ ಎಚ್‌ಎಫ್ ಡಿಲಕ್ಸ್ ಬೈಕ್‌ಗಳು ಮಾರಾಟವಾಗಿವೆ. ಇದು ಕೈಗೆಟುಕುವ ದರಕ್ಕೆ ಮತ್ತು ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದೆ. ಇದು ಬಿಸ್-6 ಮಾನದಂಡಗಳನ್ನು ಅನುಸರಿಸುವ ಮೊದಲ ಪ್ರವೇಶ ಮಟ್ಟದ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದೆ.

4. ಬಜಾಜ್ ಪಲ್ಸರ್ 125 (Bajaj Pulsar 125): ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ 125ಗೆ ಅಪಾರ ಅಭಿಮಾನಿಗಳಿದ್ದಾರೆ. ಇದರ ಕಾರ್ಯಕ್ಷಮತೆ ಮತ್ತು ಕೈಗೆಟುಕುವ ದರದಿಂದಾಗಿ ನಗರ ಪ್ರದೇಶದ ಸವಾರರಿಗೆ ಸ್ಪೋರ್ಟಿ ರೈಡಿಂಗ್ ಫೀಲ್ ನೀಡುವ ಮೂಲಕ 7,04,969 ಬೈಕ್‌ಗಳು ಮಾರಾಟವಾಗಿವೆ.
5. ಬಜಾಜ್ ಪ್ಲಾಟೀನ (Bajaj Platina): ಬಜಾಜ್ ಸಂಸ್ಥೆಯ ಹಲವು ಬೈಕ್‌ಗಳು ಇಂದಿಗೂ ಬಜೆಟ್ ಫ್ರೆಂಡ್ಲೀ ಮಾತ್ರವಲ್ಲದೆ, ಸವಾರರ ನೆಚ್ಚಿನ ಆಯ್ಕೆಗಳಲ್ಲಿ ಒಂದಾಗಿದೆ. ಹೆಚ್ಚು ಮೈಲೇಜ್ ನೀಡುವ ಕಾರಣಕ್ಕೆ ಈ ಬೈಕ್ ಖ್ಯಾತಿ ಪಡೆದಿದೆ. ಅದರಂತೆ ಈ ವರ್ಷ 3,92,867 ಬೈಕ್‌ಗಳು ಮಾರಾಟ ಆಗಿವೆ.

6. ಟಿವಿಎಸ್ ಅಪಾಚೆ ಆರ್‌ಟಿಆರ್ 160 (TVS Apache RTR 160): ಟಿವಿಎಸ್ ಅಪಾಚೆ ಸರಣಿಯು ಭಾರತದಲ್ಲಿನ ಅತ್ಯುತ್ತಮ ರಸ್ತೆ ಬೈಕ್‌ಗಳಲ್ಲಿ ಒಂದಾಗಿದೆ. ಇದರ ಸ್ಪೋರ್ಟಿ ವಿನ್ಯಾಸ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಮಲ್ಟಿಪಲ್ ರೈಡಿಂಗ್ ಮೋಡ್‌ಗಳು ಯುವ ಸವಾರರಲ್ಲಿ ನೆಚ್ಚಿನ ಆಯ್ಕೆಯನ್ನಾಗಿ ಮಾಡಿದೆ. ಹಾಗಾಗಿ 3,87,242 ಬೈಕ್‌ಗಳು ಮಾರಾಟವಾಗಿ ಮುಂಚೂಣಿ ಸ್ಥಾನದಲ್ಲಿದೆ.
7. ಟಿವಿಎಸ್ ರೈಡರ್ (TVS Raider 125): ಈ ಬೈಕ್ ಮಾರುಕಟ್ಟೆಗೆ ಇತ್ತೀಚೆಗೆ ಪರಿಚಯವಾದರೂ ವೇಗವಾಗಿ ಎಲ್ಲರ ಗಮನ ಸೆಳೆದಿದೆ. ಕಾಲೇಜು ಯುವಕರ ನೆಚ್ಚಿನ ಬೈಕ್‌ಗಳಲ್ಲಿ ಇದೂ ಕೂಡ ಒಂದಾಗಿದ್ದು, 3,82,927 ಬೈಕ್‌ಗಳು ಮಾರಾಟವಾಗಿವೆ.

ಇದಲ್ಲದೆ ಹೀರೋ ಸ್ಟ್ರೀಮ್ 125R (Hero Streme 125R) 2,79,638, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 (Royal Enfield Classic 350) 2,78,439, ಹೋಂಡಾ ಸಿಬಿ ಯುನಿಕಾರ್ನ್ (Honda CB Unicorn) 2,61,142 ಬೈಕ್‌ಗಳು ಮಾರಾಟವಾಗಿದೆ. ಈ ವರ್ಷಾಂತ್ಯದ ವೇಳೆ ಈ ಅಂಕಿಅಂಶಗಳು ಏರುಪೇರಾಗುವ ಸಾಧ್ಯತೆಯೂ ಇದೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications