Get Updates
Get notified of breaking news, exclusive insights, and must-see stories!

2021ರ ವಿಶೇಷ: ಭಾರತದಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಿದ್ದೇ ಒಂದು ದಾಖಲೆ!

ನವದೆಹಲಿ, ಡಿಸೆಂಬರ್ 17: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು 2021ರಲ್ಲೂ ಭಾರತೀಯರನ್ನು ಬೆನ್ನು ಬಿಡದೇ ಕಾಡಿತು. ಎರಡನೇ ಅಲೆ ಸಂದರ್ಭದಲ್ಲಿ ಉಸಿರಾಟ ಸಮಸ್ಯೆ ಹೆಚ್ಚು ಬಾಧಿಸಿದ ಹಿನ್ನೆಲೆ ರೋಗಿಗಳು ಸಾವಿನ ಮನೆ ಸೇರುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ಕೊವಿಡ್-19 ಲಸಿಕೆಗಳು ಕೋಟ್ಯಂತರ ಜನರ ಜೀವವನ್ನು ರಕ್ಷಿಸಿತು.

ಇಡೀ ಜಗತ್ತು ಕೊವಿಡ್-19 ಲಸಿಕೆಗಾಗಿ ಎದುರು ನೋಡುತ್ತಿದ್ದ ಕಾಲದಲ್ಲಿ ಭಾರತವು ತನ್ನ ಎಲ್ಲಾ ಪ್ರಜೆಗಳಿಗೆ ಉಚಿತವಾಗಿ ಲಸಿಕೆಯನ್ನು ವಿತರಿಸುವ ಅಭಿಯಾನವನ್ನು ಶುರು ಮಾಡಿತು. 2021ರ ಜನವರಿ 16ರಂದು ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲಸಿಕೆ ವಿತರಣೆ ಅಭಿಯಾನಕ್ಕೆ ಚಾಲನೆ ನೀಡಿದರು.

ಕೊರೊನಾವೈರಸ್ ಲಸಿಕೆ ವಿತರಣೆ ಹಾದಿಯಲ್ಲಿ ಸಾಕಷ್ಟು ಏಳು-ಬೀಳುಗಳು ಎದುರಾದವು. ಕೆಲ ಸಂದರ್ಭಗಳಲ್ಲಿ ಲಸಿಕೆ ಕೊರತೆ ಬಾಧಿಸಿದರೆ, ಇನ್ನು ಕೆಲವು ಕಡೆಗಳಲ್ಲಿ ಲಸಿಕೆ ಪಡೆದುಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದರು. ಇಂಥ ಹಲವು ಸವಾಲುಗಳನ್ನು ಎದುರಿಸಿ 100 ಕೋಟಿ ಡೋಸ್ ಲಸಿಕೆಯನ್ನು ವಿತರಿಸಿದ್ದೇ ಒಂದು ದಾಖಲೆ. 2021ರಲ್ಲಿ 100 ಕೋಟಿ ಡೋಸ್ ಲಸಿಕೆ ವಿತರಣೆ ಮತ್ತು ಅದರ ಸುತ್ತಲಿನ ಕೆಲವು ಪ್ರಮುಖ ಅಂಶಗಳ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

100 ಕೋಟಿ ಡೋಸ್ ಲಸಿಕೆ ವಿತರಿಸಲು ಎಷ್ಟು ದಿನ?

100 ಕೋಟಿ ಡೋಸ್ ಲಸಿಕೆ ವಿತರಿಸಲು ಎಷ್ಟು ದಿನ?

ಭಾರತದಲ್ಲಿ ಕೊವಿಡ್-19 ಲಸಿಕೆ ವಿತರಣೆಯನ್ನು ಆರಂಭಿಸಿದ್ದೇ ಒಂದು ಸವಾಲಾಗಿತ್ತು. ತದನಂತರ 9 ತಿಂಗಳಿನಲ್ಲೇ 100 ಕೋಟಿ ಡೋಸ್ ಲಸಿಕೆಯನ್ನು ವಿತರಿಸುವ ಮೂಲಕ ಜಗತ್ತಿನಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಿದ ಎರಡನೇ ರಾಷ್ಟ್ರವಾಗಿ ಗುರುತಿಸಿಕೊಂಡಿತು. ಕಳೆದ ಅಕ್ಟೋಬರ್ 21ರ ರಾತ್ರಿ 7 ಗಂಟೆ ವೇಳೆಗೆ 1,00,53,63,691 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯನ್ನು ವಿತರಿಸಲಾಗಿದೆ. ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿತು. ಇದರ ನಂತರ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳು ಅತಿಹೆಚ್ಚು ಲಸಿಕೆ ವಿತರಿಸಿದ ದೇಶದ ಟಾಪ್-5 ಪಟ್ಟಿಯಲ್ಲಿ ಕಾಣಿಸಿಕೊಂಡವು.

ವೈದ್ಯರಿಗೆ, ಮೊದಲ ಶ್ರೇಣಿ ಕಾರ್ಮಿಕರಿಗೆ ಆದ್ಯತೆ

ವೈದ್ಯರಿಗೆ, ಮೊದಲ ಶ್ರೇಣಿ ಕಾರ್ಮಿಕರಿಗೆ ಆದ್ಯತೆ

ದೇಶದಲ್ಲಿ ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಕೊರೊನಾವೈರಸ್ ಲಸಿಕೆ ವಿತರಣೆಯನ್ನು ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಏಪ್ರಿಲ್ 1ರಂದು ಮೂರನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ಆರಂಭಿಸಲಾಗಿತ್ತು.

100 ಕೋಟಿ ಡೋಸ್ ಲಸಿಕೆ ವಿತರಿಸಲು 279 ದಿನ

100 ಕೋಟಿ ಡೋಸ್ ಲಸಿಕೆ ವಿತರಿಸಲು 279 ದಿನ

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಪ್ರಕ್ರಿಯೆಯನ್ನು ಆರಂಭಿಸಿ 279 ದಿನಗಳು ಕಳೆದಿವೆ. ಈವರೆಗೂ 86 ದಿನ 10 ಸಾವಿರಕ್ಕಿಂತ ಕಡಿಮೆ ಡೋಸ್ ಲಸಿಕೆ ನೀಡಿದರೆ, 46 ದಿನ 10 ರಿಂದ 20 ಸಾವಿರ ಡೋಸ್ ಲಸಿಕೆ ನೀಡಲಾಗಿದೆ. ಅದೇ ರೀತಿ 28 ದಿನ 20 ರಿಂದ 30 ಡೋಸ್, 24 ದಿನಗಳವರೆಗೆ 30 ರಿಂದ 40 ಸಾವಿರ ಡೋಸ್, 19 ದಿನಗಳಲ್ಲಿ 40 ರಿಂದ 50 ಡೋಸ್ ಹಾಗೂ 19 ದಿನಗಳಲ್ಲಿ 50 ರಿಂದ 60 ಸಾವಿರ ಡೋಸ್ ಲಸಿಕೆ ನೀಡಲಾಗಿದೆ. ಅದೇ ರೀತಿ 13 ದಿನಗಳಲ್ಲಿ 60 ರಿಂದ 70 ಸಾವಿರ ಡೋಸ್, 11 ದಿನಗಳಲ್ಲಿ 70 ರಿಂದ 80 ಸಾವಿರ ಡೋಸ್ ಮತ್ತು 14 ದಿನ 80 ರಿಂದ 90 ಸಾವಿರ ಡೋಸ್ ಲಸಿಕೆ ವಿತರಿಸಿದರೆ, 19 ದಿನಗಳಲ್ಲಿ 90 ರಿಂದ 1 ಕೋಟಿಗೂ ಅಧಿಕ ಡೋಸ್ ಲಸಿಕೆಯನ್ನು ವಿತರಣೆ ಮಾಡಲಾಗಿದೆ. ಆ ಮೂಲಕ ಲಸಿಕೆ ವಿತರಣೆಯಲ್ಲಿ ಭಾರತವು ಹೊಸ ದಾಖಲೆ ಬರೆಯಿತು.

ಕೊವಿಡ್-19 ವಿರುದ್ಧ ಪ್ರಧಾನಿ ಮೋದಿ ಯಶಸ್ಸಿನ ಮಂತ್ರ

ಕೊವಿಡ್-19 ವಿರುದ್ಧ ಪ್ರಧಾನಿ ಮೋದಿ ಯಶಸ್ಸಿನ ಮಂತ್ರ

"ದೇಶದ ಮಹಾನಗರ, ನಗರ, ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಉಚಿತವಾಗಿ ಕೊರೊನಾವೈರಸ್ ಲಸಿಕೆ ವಿತರಣೆ ಮಾಡಲಾಗಿದೆ. ಕೊವಿಡ್-19 ಲಸಿಕೆ ವಿತರಣೆಯಲ್ಲಿ ಶ್ರೀಮಂತ, ಬಡವ ಎಂಬ ಯಾವುದೇ ಭೇದ ಭಾವವನ್ನು ಮಾಡಿಲ್ಲ. ದೇಶದಲ್ಲಿ ಇದುವೆರಗೂ ಯಾರೂ ಕೊರೊನಾವೈರಸ್ ಲಸಿಕೆ ಪಡೆದುಕೊಂಡಿಲ್ಲವೋ ಅವರು ತಕ್ಷಣವೇ ಹೋಗಿ ಲಸಿಕೆ ಹಾಕಿಸಿಕೊಳ್ಳಬೇಕು. ಯಾರು ಲಸಿಕೆಯನ್ನು ಪಡೆದುಕೊಂಡಿದ್ದೀರೋ ಅವರು ಬೇರೆಯವರಿಗೆ ಲಸಿಕೆ ಪಡೆದುಕೊಳ್ಳಲು ಪ್ರರೇಪಣೆ ನೀಡಿರಿ. ಭಾರತೀಯರೆಲ್ಲರೂ ಒಗ್ಗಟ್ಟಾಗಿ ಸೇರಿಕೊಂಡು ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ ಯಶಸ್ಸು ಕಾಣುತ್ತೇವೆ ಎಂಬ ವಿಶ್ವಾಸ ನನಗಿದೆ," ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆಯಿಂದ ಭಾರತಕ್ಕೆ ಶುಭಾಶಯ

ವಿಶ್ವ ಆರೋಗ್ಯ ಸಂಸ್ಥೆಯಿಂದ ಭಾರತಕ್ಕೆ ಶುಭಾಶಯ

ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಭಾರತದ ನಾಗರಿಕರಿಗೆ ಸಮಾನ ಲಸಿಕೆ ವಿತರಿಸಿದ್ದಕ್ಕಾಗಿಗಿ ಪ್ರಧಾನಿ ಮೋದಿ, ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರನ್ನು ಅಭಿನಂದಿಸಿದ್ದರು. "ಪ್ರಧಾನಮಂತ್ರಿ ನರೇಂದ್ರಮೋದಿ, ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರು ಮತ್ತು ಭಾರತದ ಜನರು, COVID19 ನಿಂದ ದುರ್ಬಲ ಜನಸಂಖ್ಯೆಯನ್ನು ರಕ್ಷಿಸಲು ಮತ್ತು ವ್ಯಾಕ್ಸಿನ್ ಇಕ್ವಿಟಿ ಗುರಿಗಳನ್ನು ಸಾಧಿಸಲು ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು" ಎಂದು ಅವರು ಟ್ವೀಟ್ ಮಾಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+