ಉಕ್ರೇನ್‌ನಲ್ಲಿ 25 ಲಕ್ಷಕ್ಕೆ ಸಿಗುವ ಮೆಡಿಕಲ್ ಪದವಿ ಭಾರತದಲ್ಲಿ 2 ಕೋಟಿ ಯಾಕೆ?
ಬೆಂಗಳೂರು, ಮಾ. 03: ಅದೊಂದು ಪ್ರತಿಷ್ಠಿತ ರಾಜಕಾರಣಿ ಒಡೆತನದ ಮೆಡಿಕಲ್ ಕಾಲೇಜ್. ಅಲ್ಲಿ ಮ್ಯಾನೇಜ್‌ಮೆಂಟ್ ಕೋಟಾದಡಿ ಸೀಟು ಪಡೆಯಬೇಕಾದರೆ ಎರಡು ಕೋಟಿ ಪ್ಯಾಕೇಜ್ ಕೊಡಬೇಕು! ಒಬ್ಬ ಬಡವ, ಮಧ್ಯಮ ವರ್ಗದ ವಿದ್ಯಾರ್ಥಿ ಖಾಸಗಿ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಮಾಡಲು ಸಾಧ್ಯವೇ?
ಶಿಕ್ಷಣ ಎಂಬುದು ಲಾಭದಾಯಕ ಸೇವೆಯಾಗಬಾರದು. ಅದು ಸೇವೆಗೆ ಸೀಮಿತವಾಗಿರಬೇಕು. ಶಿಕ್ಷಣ ಜನರ ಮೂಲಭೂತ ಹಕ್ಕು ಎನ್ನುತ್ತದೆ ಭಾರತದ ಸಂವಿಧಾನದ ಆರ್ಟಿಕಲ್ 42. ಆದರೆ ವಾಸ್ತವದಲ್ಲಿ ಈ ಮೂಲಭೂತ ಹಕ್ಕನ್ನು ದಕ್ಕಿಸಿಕೊಳ್ಳಬೇಕಾದರೆ ಕೋಟಿ ಕೋಟಿ ಹಣ ಹೊಂದಿರಬೇಕು. ಯಾಕೆಂದರೆ ಭಾರತದಲ್ಲಿ ಶಿಕ್ಷಣ ಎಂಬುದು ಸೇವೆಯಾಗಿ ಉಳಿದಿಲ್ಲ. ಸೇವೆಯ ಹೆಸರಿನಲ್ಲಿ ಲಾಭ ಮಾಡುವ ಉದ್ಯಮವನ್ನಾಗಿ ನಮ್ಮನ್ನು ಆಳುವ ನಾಯಕರೇ ರೂಪಿಸಿದ್ದಾರೆ. ವಿದ್ಯಾ ಸಂಸ್ಥೆಗಳನ್ನು ಕಟ್ಟಿಕೊಂಡು ಶಿಕ್ಷಣದ ಹೆಸರಿನಲ್ಲಿ ವ್ಯಾಪಾರ ಮಾಡುತ್ತಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ, ವೈದ್ಯಕೀಯ ಪದವಿ ಗಳಿಸಲು ಭಾರತದ ವಿದ್ಯಾರ್ಥಿಗಳು ಉಕ್ರೇನ್‌ಗೆ ಹೋಗಿರುವ ವಿಚಾರ ಚರ್ಚೆಗೆ ನಾಂದಿ ಹಾಡಿದೆ. ಇದರ ಬೆನ್ನಲ್ಲೇ ಗಗನ ಕಸುಮವಾಗಿರುವ, ವೈದ್ಯಕೀಯ ಶಿಕ್ಷಣ, ಮೆಡಿಕಲ್ ಸೀಟ್ ಮಾಫಿಯಾ ಸುತ್ತ ಹೊಸ ಚರ್ಚೆ ನಾಂದಿ ಹಾಡಿದೆ.

ವೈದ್ಯಕೀಯ ಪದವಿ ಮೂಲ ಉದ್ದೇಶ:
ಜನರ ಆರೋಗ್ಯ ಸೇವೆ ಮಾಡುವ ಉದ್ದೇಶ ಇಟ್ಟುಕೊಂಡಿರುವ ಪ್ರತಿಭಾವಂತ ವಿದ್ಯಾರ್ಥಿಗಳು ವೈದ್ಯಕೀಯ ಪದವಿ ಮಾಡಲು ಆಸೆ ಪಡುತ್ತಾರೆ. ಐದಾರು ಸಾವಿರ ರೂ. ಕೊಟ್ಟು ಆರೋಗ್ಯ ವಿಮೆ ಖರೀದಿಸಲಾಗದ ಸ್ಥಿತಿ ನಮ್ಮ ದೇಶದ ಬಡವರದ್ದು. ಇಂತಹ ಪರಿಸ್ಥಿತಿಯಲ್ಲಿ ಕೋಟಿ ಕೋಟಿ ಪಾವತಿಸಿ ಮೆಡಿಕಲ್ ಸೀಟು ಪಡೆದು ಪದವಿ ಮಾಡುವರು ನಿಜವಾಗಿಯೂ ಬಡವರ ಸೇವೆ ಮಾಡಲು ಸಾಧ್ಯವೇ? ವೈದ್ಯಕೀಯ ಪದವಿಗೆ ಎರಡು ಕೋಟಿ, ಸ್ನಾತಕೋತ್ತರ ಪದವಿಗೆ ಮೂರು ಕೋಟಿ ಹೂಡಿಕೆ ಮಾಡಿ ಅಷ್ಟು ಹಣ ರಿಕವರಿ ಮಾಡುವರು ಬಡವರ ಸೇವೆ ಮಾಡಲು ಮನಸು ಮಾಡಲು ಸಾಧ್ಯವೇ? ಕರ್ನಾಟಕ (ಭಾರತವೂ ಸೇರಿದಂತೆ)ದಲ್ಲಿ ಮೆಡಿಕಲ್ ಪದವಿಗೆ ಕೋಟಿ ಕೋಟಿ ಹಣ ನಿಗದಿ ಮಾಡಿದ್ದಾರೆ? ಒಬ್ಬ ವಿದ್ಯಾರ್ಥಿ ವೈದ್ಯಕೀಯ ಪದವಿ ಮಾಡಲು ಕೋಟಿ ವೆಚ್ಚ ಏನಕ್ಕೆ ತಗಲುತ್ತದೆ ಎಂಬ ವಾಸ್ತವಿಕ ಸತ್ಯ ಇಲ್ಲಿವರೆಗೂ ಬಂದಿಲ್ಲ.

65 ಸಾವಿರಕ್ಕೆ ಮೆಡಿಕಲ್ ಪದವಿ:
'ನಾನು ಬಡ ಕುಟಂಬದಲ್ಲಿ ಹುಟ್ಟಿದವ. 1982 ರಲ್ಲಿ ಸರ್ಕಾರಿ ಕೋಟಾದಡಿ ಮೆಡಿಕಲ್ ಸೀಟು ಪಡೆದುಕೊಂಡು ಅಧ್ಯಯನ ಮಾಡಿದೆ. ಎರಡು ಸಾವಿರ ರೂಪಾಯಿ ವೈದ್ಯಕೀಯ ಕಾಲೇಜಿನ ಶುಲ್ಕ, ಹಾಸ್ಟಲ್ ಶುಲ್ಕ ಸೇರಿ ಒಟ್ಟಾರೆ ಪದವಿಯನ್ನು 65 ಸಾವಿರ ರೂ.ಗೆ ಪಡೆದುಕೊಂಡೆ. ಇವಾಗ ನನ್ನ ಮಗಳೇ ಮೆಡಿಕಲ್ ಓದಬೇಕು ಅಂದ್ರೆ ಖಾಸಗಿಯಲ್ಲಿ ಖಂಡಿತವಾಗಿಯೂ ಸಾಧ್ಯವಿಲ್ಲ. ದೇಶದ ಬಡವರ ಸೇವೆ ಮಾಡಲು ಆಸೆ ಉಳ್ಳವರು ಕೋಟಿ ಕೋಟಿ ಕೊಟ್ಟು ಮೆಡಿಕಲ್ ಸೀಟು ಪಡೆದವರಿಂದ ಬಡವರ ಸೇವೆ ನಿರೀಕ್ಷೆ ಮಾಡುವುದು ಸಾಧ್ಯವೇ? ಶಿಕ್ಷಣ ಸೇವೆಗೆ ಸೀಮಿತವಾಗಿರಬೇಕು. ಈಗ ಉದ್ಯಮವಾಗಿದೆ. ಉಳ್ಳವರು ಮಾತ್ರ ಮೆಡಿಕಲ್ ಪದವಿ ಪದವಿ ಪಡೆಯುವಂತಾಗಿರುವುದು ಮನಸಿಗೆ ನೋವುಂಟಾಗುತ್ತದೆ. ಮುಂದಿನ ದಿನಗಳ ಕರಾಳತೆ ಬಗ್ಗೆ ಅಲೋಚಿಸಿದ್ರೆ ಭಯವಾಗುತ್ತದೆ' ಎಂದು ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಬಗ್ಗೆ ಬೆಂಗಳೂರು ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ. ಎಂ.ಬಿ ರಾಮಮೂರ್ತಿ ಕಳವಳ ವ್ಯಕ್ತಪಡಿಸಿದರು.

ನೀಟ್ -ಸೀಟ್ ಬ್ಲಾಕ್ ದಂಧೆ:
ವೈದ್ಯಕೀಯ ಶಿಕ್ಷಣ ಗಗನ ಕುಸುಮವಾಗಿ ರೂಪಾಂತರವಾಗಿಲ್ಲ. ಇದೊಂದು ಮಾಫಿಯಾ ಸ್ವರೂಪ ಪಡೆದುಕೊಂಡಿದೆ. ನೀಟ್ ಪರೀಕ್ಷೆ ಮೂಲಕ ಸರ್ಕಾರಿ ಕೋಟಾ ಸೀಟು ಗಿಟ್ಟಿಸಿಕೊಳ್ಳಲು ಕೂಡ ಸೀಟ್ ಬ್ಲಾಕಿಂಗ್ ದಂಧೆ ಮೀರಿ ನಿಲ್ಲಬೇಕು. ಪ್ರತಿ ವರ್ಷ ನೀಟ್ ಪರೀಕ್ಷೆ ಬರೆದು ಸರ್ಕಾರಿ ಕೋಟಾದ ಮೆಡಿಕಲ್ ಸೀಟ್ ಗಿಟ್ಟಿಸುವ ಕೆಲವು ವಿದ್ಯಾರ್ಥಿಗಳು ಆ ಸೀಟುಗಳನ್ನು ಖಾಸಗಿಯವರೇ ಬಿಟ್ಟು ಹೋಗುವ ಸೀಟ್ ಬ್ಲಾಕಿಂಗ್ ದಂಧೆ ವರ್ಷಗಳಿಂದ ನಡೆದುಕೊಂಡು ಬಂದಿದೆ. ಎಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳು ಈ ದಂಧೆಯ ಕರಿ ನೆರಳಿನಿಂದ ಸರ್ಕಾರಿ ಸೀಟು ಪಡೆಯುವ ಅರ್ಹವುಳ್ಳವರನ್ನೇ ಅನರ್ಹಗೊಳಿಸಲಾಗಿದೆ. ಇಷ್ಟೇ ಅಲ್ಲ ಎಷ್ಟೋ ಬಡ ವಿದ್ಯಾರ್ಥಿಗಳು ಕಾಲ ಮಿತಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿಗದಿತ ಶುಲ್ಕವನ್ನು ಹೊಂದಿಸಲಾಗದೇ ಎಷ್ಟೋ ವಿದ್ಯಾರ್ಥಿಗಳು ಮೆಡಿಕಲ್ ಸೀಟಿನಿಂದ ವಂಚಿತವಾಗಿರುವ ಉದಾಹರಣೆಗಳಿವೆ.

ಸೀಟು ಮಾರಾಟಕ್ಕೆ ಏಜೆಂಟರ ನೇಮಕ:
ಇನ್ನು ಎನ್ಆರ್‌ಐ ಕೋಟಾ ಹುಟ್ಟು ಹಾಕಿರುವ ಖಾಸಗಿ ಮೆಡಿಕಲ್ ಕಾಲೇಜುಗಳು, ತಮ್ಮ ಪಾಲಿನ ಮ್ಯಾನೇಜ್‌ಮೆಂಟ್ ಸೀಟುಗಳನ್ನು ಬಿಡ್ ರೂಪದಲ್ಲಿ ಆಕ್ಷನ್ ಹಾಕಿ ದುಬಾರಿ ಶುಲ್ಕಕ್ಕೆ ಮಾರಾಟ ಮಾಡಲು ಕನ್ಸಲ್ಟೆನ್ಸಿಗಳ ಹೆಸರಿನಲ್ಲಿ ಏಜೆಂಟರನ್ನು ಹುಟ್ಟು ಹಾಕಿವೆ. ಅತಿ ದುಬಾರಿ ಶುಲ್ಕ ಕೊಡುವರಿಗೆ ಈ ಮೆಡಿಕಲ್ ಪದವಿ ಎಂಬ ಸೇವಾ ಪದವಿಯನ್ನು ಬಿಕರಿ ಮಾಡಲಾಗುತ್ತಿದೆ. ಈ ಏಜೆಂಟರಿಗೆ ಪ್ರತಿ ಸೀಟಿಗೂ ಕಮೀಷನ್ ಕೊಡುವ ವ್ಯವಸ್ಥೆಯೂ ಅಸ್ತಿತ್ವದಲ್ಲಿದೆ. ವೈದ್ಯಕೀಯ ಶಿಕ್ಷಣ ಎಂಬುದು ಮಾಫಿಯಾ, ಉಳ್ಳವರಿಗೆ ಸಿಗುವ ಪದವಿ ರೂಪ ಪಡೆದುಕೊಂಡಿದೆ.

ವೈದ್ಯಕೀಯ ಪದವಿಗೆ ಎಷ್ಟು ಖರ್ಚು ಆಗುತ್ತೆ:
ಒಬ್ಬ ವಿದ್ಯಾರ್ಥಿ ಸರ್ಕಾರಿ ಕೋಟಾದಡಿ ಮೆಡಿಕಲ್ ಸೀಟು ಪಡೆದರೆ, ಮೂಲ ಸೌಕರ್ಯ, ಪ್ರೊಫೆಸರ್‌ಗಳ ವೇತನ ಸೇರಿ ಒಂದು ವಿದ್ಯಾರ್ಥಿಗೆ ಗರಿಷ್ಠ 25 ಲಕ್ಷ ರೂ. ಗಳನ್ನು ಖರ್ಚು ಮಾಡುತ್ತದೆ. ಖಾಸಗಿ ಮೆಡಿಕಲ್ ಕಾಲೇಜುಗಳ ವಿಚಾರಕ್ಕೆ ಬಂದರೆ, ಐದಾರು ಲಕ್ಷ ರೂ. ಹೆಚ್ಚು ಪಡೆದರೂ ಅದಕ್ಕೆ ಅರ್ಥವಿದೆ. ಎರಡು ಮೂರು ಕೋಟಿ ವ್ಯಯಿಸಿ ವೈದ್ಯಕೀಯ ಪದವಿಗೆ ಶುಲ್ಕ ವಿಧಿಸುತ್ತಾರೆ. ಅಷ್ಟು ಮೊತ್ತದಲ್ಲಿ ಎಷ್ಟು ಹಣ ಒಬ್ಬ ವಿದ್ಯಾರ್ಥಿಯ ಪದವಿಗೆ ಖರ್ಚು ಬರಬಹುದು? ಈ ವಾಸ್ತವ ನೆಲೆಗಟ್ಟಿನಲ್ಲಿ ಈವರೆಗೂ ಚರ್ಚೆ ಕೂಡ ಮಾಡಿಲ್ಲ. ರಾಜಕಾರಣಿಗಳ ಒಡೆತನ ಹೊಂದಿರುವ ಮೆಡಿಕಲ್ ಕಾಲೇಜುಗಳ ಸೀಟು ಮಾರಾಟದ ಕಾನೂನುಗಳು ಅವರಿಂದಲೇ ರೂಪಗೊಳ್ಳುವ ವ್ಯವಸ್ಥೆ ಇರುವಾಗ ಏನು ನಿರೀಕ್ಷೆ ಮಾಡಲು ಸಾಧ್ಯ? ಮೆಡಿಕಲ್ ಶಿಕ್ಷಣ, ಮೆಡಿಕಲ್ ಕಾಲೇಜುಗಳ ಪಾಲಿಗೆ ಸಂಪತ್ತು ದುಡಿದು ಕೊಡುವ ಬಿಸಿನೆಸ್ ಆಗಿ ರೂಪಾಂತರಗೊಂಡಿದೆ.

ಶಿಕ್ಷಣದ ಬಗ್ಗೆ ಸಂವಿಧಾನದ ಮೂಲ ಆಶಯ
ಶಿಕ್ಷಣದ ಬಗ್ಗೆ ಸಂವಿಧಾನದ ಮೂಲ ಆಶಯಗಳನ್ನೇ ಸಾಯಿಸಲಾಗಿದೆ. ಇದು ದೇಶದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯ ಅಸಲಿ ಸತ್ಯ. ಪ್ರಾಮಾಣಿಕ ವೈದ್ಯರ ಮಕ್ಕಳೇ ವೈದ್ಯ ಪದವಿ ಮಾಡಲಾಗದ ಸ್ಥಿತಿ ಒದಗಿ ಬಂದಿದೆ.
ಹೀಗಾಗಿಯೇ ಎಷ್ಟೋ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ವೈದ್ಯಕೀಯ ಆಸೆ ಹೊತ್ತು ಉಕ್ರೇನ್‌ಗೆ ಹೋಗುತ್ತಾರೆ. ಕೇವಲ 25 ಲಕ್ಷ ರೂಪಾಯಿನಲ್ಲಿ ಮೆಡಿಕಲ್ ಸೀಟು ಪಡೆಯುವ ಅವಕಾಶ ಅಲ್ಲಿ ಕಲ್ಪಿಸಲಾಗಿದೆ. ನಮ್ಮ ದೇಶದ ಮೆಡಿಕಲ್ ಮಾಫಿಯಾದಿಂದ ಶಿಕ್ಷಣದಿಂದ ವಂಚಿತರು ಮೆಡಿಕಲ್ ಪದವಿ ಮಾಡಲು ಹೋದವರದ್ದು ಇದೀಗ ರಷ್ಯಾ ರಣರಂಗದಲ್ಲಿ ಜೀವ ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.
-
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ












Click it and Unblock the Notifications