Maha Kumbh Mela 2025: ಮಹಾ ಕುಂಭಮೇಳಕ್ಕೆ ಆಗಮಿಸುವ ಬಾಲಿವುಡ್‌ ಸ್ಟಾರ್‌ಗಳು ಯಾರ್ಯಾರು?

ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಉತ್ಸವವಾಗಿರುವ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳಕ್ಕೆ ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ಭರ್ಜರಿ ಸಿದ್ಧತೆಯಾಗುತ್ತಿದೆ. ತ್ರಿವೇಣಿ ಸಂಗಮದಲ್ಲಿ 2025ರ ಜನವರಿ 13ರಿಂದ ಫೆಬ್ರವರಿ 26ರವರೆಗೆ ಈ ಮಹಾ ಕುಂಭಮೇಳ ನಡೆಯಲಿದ್ದು, ಸುಮಾರು 40 ಕೋಟಿ ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

7,000 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಸಿದ್ಧತೆಗಳು ಈಗಾಗಲೇ ಅಂತಿಮ ಹಂತದಲ್ಲಿದ್ದು, ಜಗತ್ತಿನಾದ್ಯಂತದಿಂದ ಬರುವ ಕೋಟ್ಯಂತರ ಭಕ್ತರಿಗಾಗಿ 10,000 ಹೆಕ್ಟೇರ್‌ಗಳ ವಿಶಾಲವಾದ ಪ್ರದೇಶದಲ್ಲಿ 1.5 ಲಕ್ಷ ಟೆಂಟ್‌ಗಳನ್ನು ನಿರ್ಮಿಸಲಾಗಿದೆ. ಪ್ರಯಾಗ ರಾಜ್‌ಗೆ ಈಗಾಗಲೇ ಲಕ್ಷಾಂತರ ನಾಗ ಸಾಧುಗಳು ಆಗಮಿಸಿದ್ದು, ತಮಗೆ ನಿಗದಿ ಮಾಡಲಾದ ಶಿಬಿರಗಳಲ್ಲಿ ಹೋಮ-ಹವನಗಳನ್ನು ನಡೆಸುತ್ತಿದ್ದಾರೆ. ನಾಗ ಸಾಧುಗಳು ಮೆರವಣಿಗೆ, ಮಂತ್ರ ಪಠಣ ಹಾಗೂ ಧ್ಯಾನದಲ್ಲಿ ನಿರತರಾಗಿದ್ದು, ಮಹಾ ಕುಂಭ ಮೇಳದ ಪೂಜೆ ಸಜ್ಜಾಗುತ್ತಿದ್ದಾರೆ.

Who Are The Bollywood Stars Arriving To Prayagraj Maha Kumbh Mela 2025

ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿರುವ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ನಡೆಯುವ ಮಹಾ ಕುಂಭಮೇಳದಲ್ಲಿ ಶಾಹಿ ಸ್ನಾನ ಮಾಡುವುದರಿಂದ ಜನರು ಮೋಕ್ಷವನ್ನು ಪಡೆಯುತ್ತಾರೆ ಎನ್ನುವ ನಂಬಿಕೆ ಇದೆ. ಹೀಗಾಗಿ ಜನ ಸಾಮಾನ್ಯ ಭಕ್ತರಲ್ಲದೇ ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಸಹ ಭಾಗಿಯಾಗುತ್ತಾರೆ. ಅದರಲ್ಲೂ ಬಾಲಿವುಡ್‌ ಸ್ಟಾರ್‌ಗಳು ಕೂಡ ಈ ಮಹಾಕುಂಭ ಮೇಳದಲ್ಲಿ ಹೆಚ್ಚಾಗಿ ಭಾಗಿಯಾಗುತ್ತಾರೆ.

ಇನ್ನು ಈ ವರ್ಷದ ಜನವರಿ 13ರಿಂದ ಫೆಬ್ರವರಿ 26ರವರೆಗೆ ನಡೆಯುವ ಮಹಾ ಕುಂಭಮೇಳಕ್ಕೆ ಆಗಮನಿಸುವಂತೆ ಬಾಲಿವುಡ್‌ನ ಕೆಲವು ನಟ-ನಟಿಯರಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಹಿರಿಯ ನಟ ಅಮಿತಾಬ್ ಬಚ್ಚನ್, ಅವರ ಪುತ್ರ ನಟ ಅಭಿಷೇಕ್ ಬಚ್ಚನ್, ನಟಿ ಐಶ್ವರ್ಯ ರೈ, ನಟಿ ಆಲಿಯಾ ಭಟ್, ನಟ ರಣಬೀರ್ ಕಪೂರ್, ನಟ ವಿವೇಕ್ ಒಬೆರಾಯ್, ಗಾಯಕ ಸೋನು ನಿಗಮ್, ನಟಿ ರಾಖಿ ಸಾವಂತ್, ಶ್ವೇತಾ ನಂದಾ, ರಾಜ್‌ಪಾಲ್ ಯಾದವ್, ಗಾಯಕ ಕೈಲಾಶ್ ಖೇರ್, ಗಾಯಕಿ ಶ್ರೇಯಾ ಘೋಷಾಲ್, ಗಾಯಕ ಶಂಕರ್ ಮಹಾದೇವನ್, ಗಾಯಕ ಅನೂಪ್ ಜಲೋಟಾ ಹಾಗೂ ನಟ ಅಶುತೋಷ್ ರಾಣಾ ಸೇರಿದಂತೆ ಅನೇಕ ಗಣ್ಯರಿಗೆ ಮಹಾ ಕುಂಭಮೇಳಕ್ಕೆ ಆಹ್ವಾನ ನೀಡಲಾಗಿದೆ ಎಂದು ವರದಿಯಾಗಿದೆ.

Who Are The Bollywood Stars Arriving To Prayagraj Maha Kumbh Mela 2025

ಮಹಾ ಕುಂಭ ಮೇಳ 2025: ಪ್ರಮುಖ ದಿನಾಂಕಗಳ ವಿವರ

ಜನವರಿ 13 2025ರಂದು ಮಹಾ ಕುಂಭಮೇಳ ಪ್ರಾರಂಭವಾಗುತ್ತದೆ.

ಜನವರಿ 14, 2025ರಂದು ಮಕರ ಸಂಕ್ರಾಂತಿಯ ದಿನ ಮೊದಲ ಶಾಹಿ ಸ್ನಾನ ನಡೆಯುತ್ತದೆ.

ಜನವರಿ 29, 2025ರಂದು ಮೌನಿ ಅಮವಾಸ್ಯೆಯ ದಿನ ಎರಡನೇ ಶಾಹಿ ಸ್ನಾನ ನಡೆಯುತ್ತದೆ.

ಫೆಬ್ರವರಿ 3, 2025ರಂದು ವಸಂತ ಪಂಚಮಿಯ ದಿನ ಮೂರನೇ ಶಾಹಿ ಸ್ನಾನ ನಡೆಯುತ್ತದೆ.

ಫೆಬ್ರವರಿ 12, 2025ರಂದು ಮಾಘಿ ಪೂರ್ಣಿಮಾ ಅಂದರೆ ಹುಣ್ಣಿಮೆಯ ದಿನ.

ಫೆಬ್ರವರಿ 26, 2025ರಂದು ಮಹಾ ಶಿವರಾತ್ರಿ ಹಾಗೂ ಮಹಾ ಕುಂಭಮೇಳಕ್ಕೆ ತೆರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+