Happy New Year 2025: ಹೊಸ ವರ್ಷದ ಖುಷೀಲಿ ಶಿಳ್ಳೆ ಹೊಡೆಯಂಗಿಲ್ಲ, ಪೊಲೀಸರಿಂದ ವಾರ್ನಿಂಗ್‌

ಹೊಸ ವರ್ಷಕ್ಕೆ ಕ್ಷಣಗಣನೆ ಶುರುವಾಗಿದೆ. ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಭರ್ಜರಿ ಸಿದ್ಧತೆಗಳು ನಡೆದಿವೆ. ಮತ್ತೊಂದೆಡೆ ಪೊಲೀಸರು ಕೂಡ ಫುಲ್‌ ಅಲರ್ಟ್‌ ಆಗಿದ್ದಾರೆ. ಹೊಸ ವರ್ಷದ ನೆಪದಲ್ಲಿ ಬಾಲ ಬಿಚ್ಚಿದವರಿಗೆ ಸರಿಯಾಗಿ ಲಾಠಿ ರುಚಿ ತೋರಿಸಲು ಸಜ್ಜಾಗಿದ್ದಾರೆ.

ಬೆಂಗಳೂರಿನ ಎಂ.ಜಿ.ರಸ್ತೆ, ಚರ್ಚ್‌ಸ್ಟ್ರೀಟ್‌, ಬ್ರಿಗೇಡ್‌ ರೋಡ್‌ಗಳಲ್ಲಿ ಇಂದು ರಾತ್ರಿ ಹೊಸ ವರ್ಷಾಚರಣೆಗೆ ಲಕ್ಷಾಂತರ ಜನ ಸೇರುತ್ತಾರೆ. ಕೆಲವರು ಖುಷಿಯಲ್ಲಿ ಕೂಗುವುದು, ಶಿಳ್ಳೆ ಹೊಡೆಯುವುದು, ಅರಚುವುದು, ಕೆಲ ಪುಂಡರು ಯುವತಿಯರನ್ನು ಚುಡಾಯಿಸುವುದು ಮಾಡುತ್ತಾರೆ. ಆದರೆ ಇದಕ್ಕೆಲ್ಲ ಈ ಬಾರಿ ಅವಕಾಶವೇ ಇಲ್ಲ.

Whistling In Public Places Prohibited During New Year Celebrations In Bengaluru

ಪೊಲೀಸರು ಫುಲ್‌ ಅಲರ್ಟ್‌ ಆಗಿದ್ದು, ಯಾರಾದರು ಪುಂಡರಂತೆ ವರ್ತಿಸಿದರೆ, ಹೊಸ ವರ್ಷಕ್ಕೆ ಜೈಲಿನ ದರ್ಶನ ತೋರಿಸಲು ಮುಂದಾಗಿದ್ದಾರೆ. ಅಲ್ಲದೆ ಶಿಳ್ಳೆ ಹೊಡೆಯುವುದನ್ನು ತಪ್ಪಿಸಲು ಮಾಸ್ಕ್‌ ಧರಿಸುವಂತೆ ಖಡಕ್‌ ಸೂಚನೆ ನೀಡಿದ್ದಾರೆ. ಯಾರಾದರೂ ಶಿಳ್ಳೆ ಹೊಡೆಯುವ ಪ್ಲ್ಯಾನ್‌ನಲ್ಲಿದ್ರೆ ಕೂಡಲೇ ಆಸೆ ಬಿಟ್ಟುಬಿಡಿ. ಹೋಗ್ತಾ ಜೊತೇಲಿ ಒಂದು ಮಾಸ್ಕ್‌ ತಗೊಂಡು ಹೋಗೋದನ್ನ ಮರೀಬೇಡಿ..

ಇನ್ನು ಕೆಲವರು ಬೇಕಂತಲೇ ಹೆಚ್ಚು ಜನ ಇರುವಾಗ ಹುಡುಗಿಯರನ್ನು ಚುಡಾಯಿಸಲು ಶಿಳ್ಳೆ ಹೊಡೆಯುತ್ತಾರೆ. ಮಹಿಳೆಯ ರಕ್ಷಣೆ ಉದ್ದೇಶದ ಹಿನ್ನೆಲೆ ಈ ಬಾರಿ ಹೊಸ ವರ್ಷಾಚರಣೆ ವೇಳೆ ಸಾರ್ವಜನಿಕವಾಗಿ ಶಿಳ್ಳೆ ಹೊಡೆಯುವುದನ್ನು ನಿಷೇಧಿಸಲಾಗಿದೆ. ಹೌದು ಈ ಬಾರಿ ಪೊಲೀಸರು ಮಾಹಿತಿ ನೀಡಿದ್ದು, ಹೊಸ ವರ್ಷದ ನೆಪದಲ್ಲಿ ಶಿಳ್ಳೆ ಹೊಡೆದವರಿಗೆ ತಕ್ಕ ಪಾಠ ಕಲಿಸುವುದಾಗಿ ವಾರ್ನಿಂಗ್‌ ಕೂಡ ಕೊಟ್ಟಿದ್ದಾರೆ.

Whistling In Public Places Prohibited During New Year Celebrations In Bengaluru

ಹಾಗಾಗಿ ಇಂದು ಹೊಸ ವರ್ಷಾಚರಣೆಗೆ ಹೋಗಿ ಶಿಳ್ಳೆ ಹೊಡೆಯುವ ಮುನ್ನ ಪೊಲೀಸರನ್ನೊಮ್ಮೆ ನೆನಪು ಮಾಡಿಕೊಳ್ಳಿ. ಸಂಭ್ರಮದ ನೆಪ್ಪದಲ್ಲಿ ಬಾಸುಂಡೆ ತಿನ್ನಬೇಡಿ ಎಂದು ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನು ಹೊಸ ವರ್ಷಾಚರಣೆಗೆ ಸೇರುವ ಸ್ಥಳಗಳಲ್ಲಿ ಪೊಲೀಸರು ಭದ್ರತೆಗಾಗಿ ನೂರಾರು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಅಲ್ಲಿಗೆ ಬರುವ ಎಲ್ಲರ ಮೇಲೂ ಸಿಸಿಟಿವಿ ಕಣ್ಗಾವಲು ಇರಲಿದ್ದು, ಅಸಭ್ಯವಾಗಿ ವರ್ತಿಸಿದರೆ ಅಲ್ಲೇ ಡ್ರಾ, ಅಲ್ಲೇ ಬಹುಮಾನ ಎನ್ನಲು ಪೊಲೀಸರು ನಿಗಾ ಇಡಲಿದ್ದಾರೆ.

ಹೊಸ ವರ್ಷಾಚರಣೆ ಹಿನ್ನೆಲೆ ಪೊಲೀಸರು ಬೆಂಗಳೂರು ನಗರದಾದ್ಯಂತೆ ಕಟ್ಟೆಚ್ಚರ ವಹಿಸಿದ್ದಾರೆ. ಕೆಲವರು ಫ್ಲೈಓವರ್‌ಗಳ ಮೇಲೆ ತೆರಳಿ ಕೇಕ್‌ ಕತ್ತರಿಸಿ, ಪಟಾಕಿ ಸಿಡಿಸಿ ಹುಚ್ಚಾಟ ಮೆರೆಯುವ ಕಾರಣಕ್ಕೆ ನಗರದ ಎಲ್ಲ ಫ್ಲೈಓವರ್‌ಗಳನ್ನು ಇಂದು ರಾತ್ರಿ ಬಂದ್‌ ಮಾಡಲು ಮುಂದಾಗಿದ್ದಾರೆ. ಡಿಸೆಂಬರ್‌ 31ರ (ಇಂದು) ರಾತ್ರಿ 11ರಿಂದ ಜನವರಿ 1ರ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ನಗರದ ಫ್ಲೈಓವರ್‌ಗಳು ಬಂದ್‌ ಆಗಲಿದ್ದು, ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ.

Whistling In Public Places Prohibited During New Year Celebrations In Bengaluru

ಹೊಸವರ್ಷಾಚರಣೆ ನಿಮಿತ್ತ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಫ್ಲೈಓವರ್‌ನಲ್ಲಿ ಬೈಕ್‌ಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಉಳಿದಂತೆ ಬಸ್‌, ಕ್ಯಾಬ್‌, ಕಾರು ಇನ್ನಿತರ ವಾಹನಗಳಷ್ಟೇ ಸಂಚರಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಹೊಸವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಫುಲ್‌ ಅಲರ್ಟ್‌ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+