ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Udyog Aadhaar : ಉದ್ಯೋಗ್ ಆಧಾರ್ ಏನು? ಹೇಗೆ ಮಾಡಿಸುವುದು? ಏನುಪಯೋಗ?

|
Google Oneindia Kannada News

ಆಧಾರ್ ಕಾರ್ಡ್ ಬಗ್ಗೆ ಬಹುಶಃ ಎಲ್ಲರಿಗೂ ಗೊತ್ತಿರುವಂಥದ್ದೇ. ಬಹುತೇಕ ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಹೊಂದಿದ್ದೇವೆ. ಇದೊಂದು ರೀತಿಯಲ್ಲಿ ಭಾರತೀಯರ ಗುರುತಿನ ಚೀಟಿಯಾಗಿದೆ. ಸರಕಾರದ ಕೆಲ ಯೋಜನೆಗಳಿಗೆ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ.

ಆಧಾರ್ ಕಾರ್ಡ್‌ನಂತೆ ಬಾಲ್ ಆಧಾರ್ (ಮಕ್ಕಳಿಗೆ ಮಾಡಿಸುವ ಆಧಾರ್ ಕಾರ್ಡ್) ಕೂಡ ಅಸ್ತಿತ್ವದಲ್ಲಿದೆ. ಹಾಗೆಯೇ, ಉದ್ಯೋಗ್ ಆಧಾರ್ ಬಗ್ಗೆ ನಿಮಗೆ ಮಾಹಿತಿ ಇದೆಯಾ?

ಆಧಾರ್ ಕಾರ್ಡ್ ಜೊತೆ ವೋಟರ್ ಐಡಿ ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನ ಆಧಾರ್ ಕಾರ್ಡ್ ಜೊತೆ ವೋಟರ್ ಐಡಿ ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

ಏನಿದು ಉದ್ಯೋಗ ಆಧಾರ್? ಯಾಕಾಗಿ ಇದು ಇದೆ? ಉದ್ಯೋಗ ಆಧಾರ್ ಯಾರು ಮಾಡಿಸಬೇಕು? ಅದರಿಂದ ಪ್ರಯೋಜನಗಳೇನು ಇತ್ಯಾದಿ ಮಾಹಿತಿ ಇಲ್ಲಿದೆ.

ಉದ್ಯೋಗ್ ಆಧಾರ್ ಏನು?

ಉದ್ಯೋಗ್ ಆಧಾರ್ ಏನು?

ಉದ್ಯೋಗ್ ಆಧಾರ್ ಎಂಬುದು ಸಣ್ಣ ವ್ಯವಹಾರ ವಲಯದ ಸಂಸ್ಥೆಗಳಿಗೆ ಕೊಡಲಾಗುವ ಯೂನಿಕ್ ಐಡೆಂಟಿಫಿಕೇಶನ್ ನಂಬರ್ (ಯುಐಎನ್) ಆಗಿದೆ. ಎಂಎಸ್‌ಎಂಇ ಸಚಿವಾಲಯದಿಂದ ಇದನ್ನು ಒದಗಿಸಲಾಗುತ್ತದೆ. 12 ಅಂಕಿಯ ಈ ಯುಐಎನ್ ಅನ್ನು ಎಂಎಸ್‌ಎಂಇಗಳಿಗೆ ನೀಡಲಾಗುತ್ತದೆ.

ಸದ್ಯ ಉದ್ಯೋಗ್ ಆಧಾರ್ ಹೆಸರನ್ನು ಉದ್ಯಮ್ ಎಂದು ಬದಲಾಯಿಸಲಾಗಿದೆ. ಹೊಸ ಎಂಎಸ್‌ಎಂಇಗಳು ಉದ್ಯಮ್ ನೊಂದಣಿ ಪೋರ್ಟಲ್‌ನಲ್ಲಿ ನೊಂದಾಯಿಸಿ ಒಂದು ಪ್ರಮಾಣಪತ್ರ ಪಡೆಯಬಹುದು.

ಉದ್ಯೋಗ್ ಆಧಾರ್ ಪಡೆಯುವುದು ಹೇಗೆ?

ಉದ್ಯೋಗ್ ಆಧಾರ್ ಪಡೆಯುವುದು ಹೇಗೆ?

ಉದ್ಯೋಗ್ ಆಧಾರ್ ನೊಂದಾಯಿಸಲು ನಿಮಗೆ ಆಧಾರ್ ಕಾರ್ಡ್ ಅಗತ್ಯ.

ಮೊದಲಿಗೆ ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್ ಆಗಿ ಆಧಾರ್ ಕಾರ್ಡ್ ವಿವರವನ್ನು ತುಂಬಿರಿ.
ಬಳಿಕ ಬಾಕ್ಸ್ ಚೆಕ್ ಮಾಡಿ, "ವ್ಯಾಲಿಡೇಟ್ ಅಂಡ್ ಜನರೇಟ್ ಒಟಿಪಿ" ಕ್ಲಿಕ್ ಮಾಡಿ.
ನಿಮ್ಮ ನೊಂದಾಯಿತ ಮೊಬೈಲ್ ನಂಬರ್‌ಗೆ ಬರುವ ಒಟಿಪಿಯನ್ನು ಹಾಕಿ ಸಬ್ಮಿಟ್ ಕ್ಲಿಕ್ ಮಾಡಿದರೆ ಇನ್ನೊಂದು ಪುಟದಲ್ಲಿ ಫಾರ್ಮ್ ತೆರೆದುಕೊಳ್ಳುತ್ತದೆ.
ಆ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿ ತುಂಬಿರಿ, ನಂತರ ಸಬ್ಮಿಟ್ ಕ್ಲಿಕ್ ಮಾಡಿ.
ಮತ್ತೊಮ್ಮೆ ನಿಮ್ಮ ಮೊಬೈಲ್ ನಂಬರ್‌ಗೆ ಒಟಿಪಿ ಬರುತ್ತದೆ. ಒಟಿಪಿ ಹಾಕಿ ಕೊನೆಯದಾಗಿ 'ಸಬ್ಮಿಟ್' ಬಟನ್ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಕೆಯಾದಂತಾಗುತ್ತದೆ.

ಉದ್ಯೋಗ್ ಆಧಾರ್‌ಗೆ ಬೇಕಿರುವ ದಾಖಲೆಗಳು

ಉದ್ಯೋಗ್ ಆಧಾರ್‌ಗೆ ಬೇಕಿರುವ ದಾಖಲೆಗಳು

* ಆಧಾರ್ ನಂಬರ್
* ಎಂಎಸ್‌ಎಂಇ ಮಾಲೀಕರ ಹೆಸರು
* ಅರ್ಜಿದಾರರ ವಿಭಾಗ
* ವ್ಯವಹಾರದ ಹೆಸರು
* ಸಂಸ್ಥೆಯ ಹೆಸರು
* ಬ್ಯಾಂಕ್ ವಿವರ
* ನ್ಯಾಷನಲ್ ಇಂಡಸ್ಟ್ರಿಯಲ್ ಕ್ಲಾಸಿಫಿಕೇಶನ್ ಕೋಡ್
* ಸಂಸ್ಥೆಯಲ್ಲಿ ಉದ್ಯೋಗಿಗಳ ಸಂಖ್ಯೆ
* ಡಿಸ್ಟ್ರಿಕ್ಟ್ ಇಂಡಸ್ಟ್ರಿ ಸೆಂಟರ್‌ನ ವಿವರ
* ಯಾವಾಗಿನಿಂದ ಸಂಸ್ಥೆ ಆರಂಭ

ಉದ್ಯೋಗ್ ಆಧಾರ್‌ನಿಂದ ಅನುಕೂಲ

ಉದ್ಯೋಗ್ ಆಧಾರ್‌ನಿಂದ ಅನುಕೂಲ

* ನಿಮ್ಮ ಸಂಸ್ಥೆಯನ್ನು ಎಂಎಸ್‌ಎಂಇ ಆಗಿ ನೊಂದಾಯಿಸುವ ಪ್ರಕ್ರಿಯೆ ಬಹಳ ಸರಾಗವಾಗಿ ಆಗುತ್ತದೆ.
* ಸ್ವಘೋಷಣೆ ಸೌಲಭ್ಯ
* ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ
* ಸರಕಾರದ ಸೌಲಭ್ಯಗಳು ಸುಲಭವಾಗಿ ಸಿಗುತ್ತವೆ
* ಒಂದಕ್ಕಿಂತ ಹೆಚ್ಚು ಉದ್ಯೋಗ್ ಆಧಾರ್ ಅರ್ಜಿಗಳನ್ನು ಸಲ್ಲಿಸಬಹುದು.

(ಒನ್ಇಂಡಿಯಾ ಸುದ್ದಿ)

English summary
Udyog Aadhaar is a 12 digit UIN given to MSMEs. This is similar to Aadhaar card, but is distributed by ministry of MSMEs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X