ಬಿಹಾರ ಅಸೆಂಬ್ಲಿ ಚುನಾವಣೆ: ಕಳೆದ Exit ಪೋಲ್ ಹೇಳಿದ್ದೇನು, ಫಲಿತಾಂಶ ಬಂದಿದ್ದೇನು
ಪಾಟ್ನಾ, ನ 7: ಬಿಹಾರದ ಅಸೆಂಬ್ಲಿ ಚುನಾವಣೆಯ ಮೇಲೆ ಉತ್ಸುಕರಾಗಿರುವವರನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ಮತಗಟ್ಟೆ ಸಮೀಕ್ಷೆ ಹೊರಬಿದ್ದಿದೆ. ಹೆಚ್ಚಿನ ಸಮೀಕ್ಷೆಯ ಪ್ರಕಾರ, ನಿತೀಶ್ ಕುಮಾರ್ ಅವರ ಪಾರುಪಂತ್ಯಕ್ಕೆ ಮತದಾರ ತೆರೆ ಎಳೆಯಲಿದ್ದಾನೆ.
Recommended Video
ಇದುವರೆಗೆ ಬಂದಿರುವ ಎಕ್ಸಿಟ್ ಪೋಲ್ ಸಮೀಕ್ಷೆಯ ಪ್ರಕಾರ ಯುಪಿಎ ಮೈತ್ರಿಕೂಟಕ್ಕೆ ಅಧಿಕಾರ ದಕ್ಕಲಿದೆ ಅಥವಾ ಅತಂತ್ರ ಫಲಿತಾಂಶ ಬರಲಿದೆ. ಒಂದು ವೇಳೆ, ಹಾಗಾದಲ್ಲಿ ಕುರ್ಚಿಗೆ ಅಂಟಿಕೊಳ್ಳುವ ಜಾಯಮಾನದ ನಿತೀಶ್ ಕುಮಾರ್, ಬೇರೆ ಏನಾದರೂ ರಾಜಕೀಯ ಆಟವಾಡಲಿದ್ದಾರಾ ಎನ್ನುವುದು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ.
ಕಳೆದ ಅಂದರೆ 2015ರ ಅಸೆಂಬ್ಲಿ ಚುನಾವಣೆಯ ವೇಳೆ, ಕಾಂಗ್ರೆಸ್ ಮತ್ತು ತಮ್ಮ ಕಟ್ಟಾ ವಿರೋಧಿಯಾಗಿದ್ದ ಲಾಲೂ ಪ್ರಸಾದ್ ಯಾದವ್ ನೇತೃತ್ವದ ಆರ್ಜೆಡಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಸಿಎಂ ನಿತೀಶ್ ಕುಮಾರ್, ಬದಲಾದ ರಾಜಕೀಯದಲ್ಲಿ ಬಿಜೆಪಿ ಜೊತೆ ನಂಟು ಬೆಳೆಸಿಕೊಂಡಿದ್ದರು.
ನೈಜ ಫಲಿತಾಂಶದಷ್ಟೇ ಕುತೂಹಲ ಹುಟ್ಟಿಸುವ ಮತಗಟ್ಟೆ ಸಮೀಕ್ಷೆಯನ್ನು ಕಳೆದ ಅಸೆಂಬ್ಲಿ ಚುನಾವಣೆಯಲ್ಲೂ ವಿವಿಧ ವಾಹಿನಿಗಳು ಮಾಡಿದ್ದವು. ಆ ಫಲಿತಾಂಶಗಳು ಎಷ್ಟು ಕರಾರುವಕ್ಕಾಗಿ ಮೂಡಿಬಂದವು ಎನ್ನುವುದಕ್ಕೆ ಇಲ್ಲಿದೆ ರಿಸಲ್ಟ್ ವರದಿಗಳು.

ಕಳೆದ ಚುನಾವಣೆಯಲ್ಲಿನ ಪಾರ್ಟಿಯಲ್ಲಿನ ಹೊಂದಾಣಿಕೆ
ಮಹಾಘಟಬಂಧನ
ಲಾಲೂ ನೇತೃತ್ವದ ಆರ್ಜೆಡಿ
ನಿತೀಶ್ ನೇತೃತ್ವದ ಜನತಾದಳ
ಕಾಂಗ್ರೆಸ್
ಎನ್ಡಿಎ ಮೈತ್ರಿಕೂಟ
ಬಿಜೆಪಿ
ಎಲ್ಜೆಪಿ
ಆರ್ ಎಲ್ ಎಸ್ ಪಿ
ಎಚ್ ಎ ಎಂ

ಅಸಲಿ ಫಲಿತಾಂಶ
ಒಟ್ಟು ಸ್ಥಾನಗಳು : 243
ಮಹಾಘಟಬಂಧನ - 177
ಎನ್ಡಿಎ - 58
ಇತರರು - 08
(ಮುಂದಿನ ಸ್ಲೈಡ್ ಗಳಲ್ಲಿ ಕಳೆದ 2015ರ ಮತಗಟ್ಟೆ ಸಮೀಕ್ಷೆ ವರದಿ)

ಎಬಿಪಿ-ನೀಲ್ಸನ್
ಎಬಿಪಿ-ನೀಲ್ಸನ್
ಮಹಾಘಟಬಂಧನ - 130
ಎನ್ಡಿಎ - 108
ಇತರರು - 05
ಐಬಿಎನ್ - ಏಕ್ಸಿಸ್
ಮಹಾಘಟಬಂಧನ - 176
ಎನ್ಡಿಎ - 64
ಇತರರು - 03

ಮತಗಟ್ಟೆ ಸಮೀಕ್ಷೆ
ಇಂಡಿಯಾ ಟುಡೇ -ಸಿಸಿರೋ
ಮಹಾಘಟಬಂಧನ - 111-123
ಎನ್ಡಿಎ - 113-127
ಇತರರು - 4-8
ಎನ್ಡಿಟಿವಿ - ಹಂಸಾ
ಮಹಾಘಟಬಂಧನ - 110
ಎನ್ಡಿಎ - 125
ಇತರರು - 08

ಎಕ್ಸಿಟ್ ಪೋಲ್
ಇಂಡಿಯಾ ಟೈಮ್ಸ್ -ಸಿವೋಟರ್
ಮಹಾಘಟಬಂಧನ - 112-132
ಎನ್ಡಿಎ - 101-121
ಇತರರು - 06-14
ಟುಡೇಸ್ ಚಾಣಕ್ಯ
ಮಹಾಘಟಬಂಧನ - 83
ಎನ್ಡಿಎ - 155
ಇತರರು - 05











Click it and Unblock the Notifications