ಪ್ರತಿನಿತ್ಯ ಓಟ್ಸ್ ತಿನ್ನುವುದರಿಂದಾಗುವ ಪ್ರಯೋಜನಗಳೇನು? ತೂಕ ಇಳಿಸುವವರು ತಿಳಿಯಲೇಬೇಕಾದ ಮಾಹಿತಿ
ಓಟ್ಸ್ ಸೇವನೆಯ ನೇರ ಪರಿಣಾಮವೆಂದರೆ ಅದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೀಗಾಗಿ ತೂಕ ಇಳಿಸುವವರು ಓಟ್ಸ್ ಸೇವನೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ನೈಸರ್ಗಿಕವಾಗಿ ತೂಕ ಇಳಿಸಿಕೊಳ್ಳ ಬೇಕು ಎಂದುಕೊಂಡವರು, ವ್ಯಾಯಾಮಗಳ ಜೊತೆ ಪ್ರತಿನಿತ್ಯ ಓಟ್ಸ್ ಸೇವನೆ ಮಾಡುತ್ತಾರೆ. ಆದರೆ ನಿಜಕ್ಕೂ ಓಟ್ಸ್ ಆರೋಗ್ಯಕ್ಕೆ ಒಳ್ಳೆಯದಾ ಎನ್ನುವ ಪ್ರಶ್ನೆ ಕಾಡುತ್ತಿರುತ್ತದೆ.
ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಓಟ್ಸ್ ಸಿಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಓಟ್ಸ್ ಬಾಯಿಗೆ ರುಚಿ ನೀಡುವುದರ ಜೊತೆಗೆ ತೂಕ ಇಳಿಸಿಕೊಳ್ಳಲು ಸಹ ನೆರವಾಗುತ್ತದೆ. ಹೀಗಾಗಿ ಓಟ್ಸ್ ಸೇವನೆಯ ಬಗ್ಗೆ ಹಲವರಲ್ಲಿ ಗೊಂದಲ ಇರಬಹುದು. ಈ ಗೊಂದಲಕ್ಕೆ ಇಲ್ಲಿ ಸರಳವಾಗಿ ಉತ್ತರ ನೀಡಲಾಗಿದೆ.

ತೂಕ ನಷ್ಟಕ್ಕೆ ಸಹಾಯ ಮಾಡುವುದರಿಂದ ಹಿಡಿದು ಹೃದಯದ ಆರೋಗ್ಯ ಸರಿಪಡಿಸುವುದರ ಜೊತೆ ಜೀರ್ಣಕ್ರಿಯೆ ಕೂಡ ಉತ್ತಮವಾಗಿರಲು ಸಹ ಓಟ್ಸ್ ಸೇವನೆ ನೆರವಾಗುತ್ತದೆ. ಪ್ರತಿನಿತ್ಯ ನಿಯಮಿತವಾಗಿ ಓಟ್ಸ್ ಸೇವಿಸುವುದರಿಂದ ಹಲವು ಪ್ರಯೋಜನಗಳಿವೆ ಎಂದು ಆಹಾರ ತಜ್ಞರು ಹೇಳುತ್ತಾರೆ.
ಓಟ್ಸ್‌ನಲ್ಲಿ ಫೈಬರ್ ಅಂಶ ಸಮೃದ್ಧವಾಗಿದೆ. ಇದು ಒಂದು ಪರಿಪೂರ್ಣ ಉಪಹಾರವಾಗಿದ್ದು, ಬೇರೆ ಆಹಾರಗಳ ಬದಲಿಗೆ ಇದನ್ನು ಸೇವಿಸಬಹುದು. ಇದರಿಂದ ಕ್ಯಾಲೋರಿ ಹೆಚ್ಚಿರುವ ಇತರ ಆಹಾರ ಸೇವನೆಯನ್ನು ಕಡಿಮೆ ಮಾಡುತ್ತದೆ. ತಮ್ಮ ತೂಕವನ್ನು ಸರಿಯಾಗಿ ನಿರ್ವಹಿಸಲು ಬಯಸುವವರಿಗೆ ಇದು ವಿಶೇಷವಾಗಿ ಪ್ರಯೋಜನಕಾರಿಯಾಗುತ್ತದೆ.
ಓಟ್ಸ್ ಸೇವನೆಯಿಂದ ಕರುಳಿನ ಆರೋಗ್ಯ ಉತ್ತಮವಾಗಿರುತ್ತದೆ. ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡುತ್ತದೆ. ಓಟ್ಸ್ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಕ್ರಮೇಣ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಪ್ರತಿ ದಿನ ಓಟ್ಸ್ ಸೇವಿಸುವುದರಿಂದ ದೇಹದ ಶಕ್ತಿ ಹೆಚ್ಚಾಗುತ್ತದೆ. ಓಟ್ ಮೀಲ್‌ನಲ್ಲಿರುವ ಫೈಬರ್ ಅಂಶವು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಓಟ್ಸ್ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಇದರಿಂದಾಗಿ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡವನ್ನು ಸ್ಥಿರಗೊಳಿಸುವಲ್ಲಿ ಓಟ್ಸ್ ಪ್ರಮುಖ ಪಾತ್ರವಹಿಸುತ್ತದೆ. ಇದು ರಕ್ತದೊತ್ತಡ ಮತ್ತು ಹೃದಯರಕ್ತನಾಳದ ಸಂಬಂಧಿತ ಅಪಾಯವನ್ನು ತಡೆಯಲು ಸಹಾಯ ಮಾಡುತ್ತದೆ.
ಹೃದಯದ ಆರೋಗ್ಯ ಮತ್ತು ತೂಕ ನಿರ್ವಹಣೆಯ ಹೊರತಾಗಿ ಓಟ್ಸ್ ಕರುಳಿನ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಜೀರ್ಣಾಂಗದಲ್ಲಿ ಪ್ರಯೋಜನಕಾರಿ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸಹಾಯವಾಗುತ್ತದೆ. ಇದರಿಂದ ನಾವು ಸೇವಿಸಿದ ಆಹಾರದ ಮೂಲಕ ದೇಹ ಸೇರಿದ ವಿಷ ಮತ್ತು ತ್ಯಾಜ್ಯ ಹೊರಹಾಕಲು ಸಹಾಯಕವಾಗುತ್ತದೆ.

ಓಟ್ಸ್ ಹೇಗೆ ತಿನ್ನಬೇಕು..?
ಓಟ್ಸ್ ಸತು, ಫೋಲೇಟ್ ಮತ್ತು ಮೆಗ್ನೀಸಿಯಮ್ನಂತಹ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಕೆಲವರಿಗೆ ಇದು ರುಚಿ ಎನಿಸುವುದಿಲ್ಲ. ಹೀಗಾಗಿ ಒಮ್ಮೆ ಓಟ್ಸ್ ತಿಂದವರು ಮತ್ತೆ ತಿನ್ನಲು ಹಿಂದೇಟು ಹಾಕುತ್ತಾರೆ. ಹೀಗಾಹಿ ಬರೀ ಓಟ್ಸ್ ಬದಲಿಗೆ ಡ್ರೈ ಫ್ರುಟ್ಟ್ ಜೊತೆಗೆ ಹಣ್ಣುಗಳನ್ನು ಮಿಶ್ರಣ ಮಾಡಿ ಸೇವಿಸಬಹುದು. ಪ್ರತಿ ದಿನ ಓಟ್ಸ್ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳುವುದು ದೇಹದ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.











Click it and Unblock the Notifications