ಕಾಫಿ ನಿಮ್ಮ ಡೈಲಿ ಪಾರ್ಟ್‌ನರ್ ಮಾತ್ರವಲ್ಲ, ನಿಮ್ಮ ಡಾಕ್ಟರ್ ಕೂಡ!
ಬೆಳಿಗ್ಗೆ ಎದ್ದ ಕೂಡಲೇ ಕೈಯಲ್ಲಿ ಒಂದು ಕಾಫಿ ಇದ್ರೆ ಅದೇ ಸ್ವರ್ಗ ಅನ್ನೋರು ಹಲವರು ಇದ್ದಾರೆ. ಭಾರತೀಯರಿಗಂತೂ ಕಾಫಿ ಇಲ್ಲದೆ ಬೆಳಗಾಗುವುದೇ ಇಲ್ಲ. ಎಷ್ಟೋ ಜನರ ಪಾಲಿಗೆ ಕಾಫಿ ಒಂದು ರೀತಿಯಲ್ಲಿ ಪಾರ್ಟ್‌ನರ್ ಇದ್ದಂತೆ. ಇನ್ನೂ ಕೆಲವರಿಗೆ ಎಷ್ಟು ಕುಡಿದ್ರೂ ಕಾಫಿ ಮೇಲೆ ಮೋಹ ಅಂತ ಕಡಿಮೆ ಆಗೋದೇ ಇಲ್ಲ. ಅದಕ್ಕೆ ದಿನದಲ್ಲಿ ಕನಿಷ್ಠ ಎರಡು ಮೂರು ಸಲವಾದ್ರೂ ಕಾಫೀಗ್ ಹೋಗೋಣ್ವಾ? ಅಂತಿರ್ತಾರೆ.
ಕೆಲವರು ದಿನಕ್ಕೆ ಎರಡು ಬಾರಿ ಕಾಫಿ ಕುಡಿಯೋರು ಇದ್ದಾರೆ. ಇನ್ನೂ ಕೆಲವರು ದಿನದಲ್ಲಿ ಎಷ್ಟು ಸಲವಾದ್ರೂ ಕಾಫಿ ಅಂದ್ರೆ ಓಕೆ ಅಂತಾರೆ. ಆದ್ರೆ ನೀವು ಕುಡಿಯೋ ಕಪ್ ಕಾಫಿಯಿಂದ ಏನೆಲ್ಲ ಲಾಭ ಇದೆ ಅನ್ನೋದು ನಿಮಗೆ ಅಷ್ಟಾಗಿ ತಿಳಿದಿರಲ್ಲ. ನೀವು ಬಾಯಿ ಚಪ್ಪರಿಸುತ್ತಾ ಸವಿಯೋ ಕಾಫೀನೇ ನಿಮ್ಮ ಆರೋಗ್ಯದ ಸ್ಥಿತಿಯನ್ನ ಕಂಟ್ರೋಲ್ ಮಾಡುತ್ತೆ ಅಂದ್ರೆ ನೀವು ನಂಬಲೇಬೇಕು..

ಹೌದು, ಅಧ್ಯಯನವೊಂದರ ಪ್ರಕಾರ ಒಂದು ದಿನದಲ್ಲಿ ಮೂರು ಕಪ್ ಕಾಫಿ ಕುಡಿಯುವುದರಿಂದ ನೀವು ಟೈಪ್ 2 ಡಯಾಬಿಟಿಸ್ ಕಾಯಿಲೆ, ಪಾರ್ಶ್ವವಾಯು ಕಾಯಿಲೆ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಪಾರಾಗಬಹುದಂತೆ.
The Journal of Clinical Endocrinology and Metabolism ನಡೆಸಿರುವ ಅಧ್ಯಯನದ ಪ್ರಕಾರ ಪ್ರತಿ ದಿನ ಮೂರು ಕಪ್ ಕಾಫಿ ಕುಡಿಯುವವರಿಗೆ ಹೃದಯ ಸಂಬಂಧಿ ಕಾಯಿಲೆ, ಮಧಮೇಹದಂತ ಕಾಯಿಲೆಗಳ ಅಪಾಯದಿಂದ ಶೇ 50ರಷ್ಟು ದೂರ ಉಳಿಯಬಹುದು. ತಜ್ಞರು ಹೇಳುವಂತೆ ಪ್ರತಿದಿನವೂ ಮೂರ್ ಕಪ್ ಕಾಫಿ ಅಥವಾ 300 ಎಂ.ಜಿಯಷ್ಟು ಕೆಫೀನ್ ದೇಹಕ್ಕೆ ಹೋಗುವುದರಿಂದ ಹೃದಯಸಂಬಂಧಿತ ಕಾಯಿಲೆಗಳು ಬರುವುದನ್ನು ತಡೆಯುತ್ತವೆ. ಇದಲ್ಲದೆ ಕಾಫಿಯಲ್ಲಿ ಇನ್ನೂ ಅನೇಕ ಆರೋಗ್ಯಕರ ಪ್ರಯೋಜನಗಳೂ ಇವೆ.
ಹಾಗಾಗಿ ಮಿತವಾದ ಕಾಫಿ ಸೇವನೆಯಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು, ಸ್ಟ್ರೋಕ್ ಹಾಗೂ ಮಧುಮೇಹದಂತ ಕಾಯಿಲೆಗಳಿಗೆ ಗುಡ್‌ಬೈ ಹೇಳಬಹುದು. ಕಾಫಿ ಕುಡಿಯುವ ಅಭ್ಯಾಸದಿಂದಾಗಿ ನಿಮ್ಮ ಮೆದುಳಿನ ಕಾರ್ಯಕ್ಷಮತೆ ಕೂಡ ಹೆಚ್ಚಾಗುತ್ತದೆ. ನಿಮ್ಮ ನೆನಪಿನ ಶಕ್ತಿ ವೃದ್ಧಿಸುವಲ್ಲಿಯೂ ಹೆಚ್ಚು ನೆರವಾಗುತ್ತದೆ.

ಕಾಫಿಯಲ್ಲಿರುವ ಕೆಫೀನ್ ಅಂಶವು ನಿಮ್ಮ ಮೆದುಳಿನ ನರಮಂಡಲವನ್ನು ಸುಸ್ಥಿತಿಗೆ ತಂದು, ನಿಮ್ಮ ಮನಸ್ಸನ್ನು ಸಹ ಹಗುರಗೊಳಿಸುತ್ತದೆ. ಉತ್ತಮ ಮನಸ್ಥಿತಿ ನಿಮ್ಮದಾಗುವುದರಿಂದ ನಿಮ್ಮ ಮೂಡ್ ಕೂಡ ಚೆನ್ನಾಗಿರುತ್ತೆ. ಡಿಪ್ರೆಷನ್ನಂತಹ ಮಾನಸಿಕ ಕಾಯಿಲೆಗಳಿಂದಲೂ ನಿಮ್ಮನ್ನು ದೂರವಿಡುತ್ತದೆ. ಮಿತವಾಗಿ ಕಾಫಿ ಸೇವಿಸುವುದರಿಂದಲೂ ಆರೋಗ್ಯಕರ ಜೀವನ ಶೈಲಿ ನಿಮ್ಮದಾಗುತ್ತದೆ. ತೂಕ ನಿಯಂತ್ರಿಸಲು ಕೂಡ ಕಾಫಿ ಉತ್ತಮ ಮಾರ್ಗೋಪಾಯ ಎನ್ನಲಾಗಿದೆ.
ಒಂದು ಅಥವಾ ಎರಡು ಕಪ್ ಕಾಫಿ ಸೇವನೆ ಮಾಡುವುದರಿಂದ ಶೇ 40ರಷ್ಟು ಲಿವರ್ ಕ್ಯಾನ್ಸರ್ ಸಮಸ್ಯೆ ತಗ್ಗಲಿದೆ. ಪ್ರತಿದಿನ ಒಂದು ಕಪ್ ಸಕ್ಕರೆ ಬೆರೆಸದೆ, ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಕ್ಯಾಲೋರಿ ಅಂಶ ಇರುವುದರಿಂದ ನಿಮ್ಮ ದೇಹದ ತೂಕ ಇಳಿಸಲು ಕೂಡ ಸಹಕಾರಿಯಾಗುತ್ತದೆ. ಅಸ್ತಮಾ ಸಮಸ್ಯೆಗೆ ಬ್ಲ್ಯಾಕ್ ಕಾಫಿ ಮನೆ ಮದ್ದು ಎಂದು ಕರೆಯುತ್ತಾರೆ.
ನಿಮ್ಮ ಮನೆಯಲ್ಲಿ ಯಾರಿಗಾದರೂ ಅಸ್ತಮಾ ಇದ್ದು, ಉಸಿರಾಡಲು ಕಷ್ಟವಾಗುತ್ತಿದ್ದರೆ ಕೂಡಲೇ ಅವರಿಗೆ ಸಕ್ಕರೆರಹಿತ ಕಾಫಿ ಅಂದರೆ ಕುಡಿಯಲು ನೀಡಿರಿ. ಕುಡಿಯಲು ಸ್ವಲ್ಪ ಕಹಿಯಾದರೂ ಅಸ್ತಮಾ ಸಮಸ್ಯೆ ಮಾಯವಾಗುತ್ತದೆ. ಉಸಿರಾಟದ ತೊಂದರೆಗೂ ಕಾಫಿ ರಾಮಬಾಣ. ಯಾವುದೇ ಆದರೂ ಹೆಚ್ಚಾದರೆ, ಹೆಚ್ಚು ಕಮ್ಮಿ ಆಗುತ್ತೆ. ಹಾಗಾಗಿ ಮಿತದಲ್ಲಿದ್ದರೆ ಎಲ್ಲವೂ ಹಿತ..












Click it and Unblock the Notifications