ರಸ್ತೆಯಲ್ಲೇ ಕುಸಿದು ಪ್ರಾಣಬಿಟ್ಟ ಯುವಕ: ವಿಡಿಯೋ ವೈರಲ್
ಮನುಷ್ಯನಿಗೆ ಸಾವು ಎನ್ನುವುದು ಯಾವಾಗ? ಹೇಗೆ? ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ಹುಟ್ಟಿದ ಮನುಷ್ಯ ಒಂದಲ್ಲಾ ಒಂದು ದಿನ ಸಾಯಲೇಬೇಕು..ಅದು ನಿಶ್ಚಿತ. ಆದರೆ ಇತ್ತೀಚಿನ ದಿನಗಳಲ್ಲಿ ಮನುಷ್ಯ ಅಂದಾಜಿನ ಜೀವತಾವಧಿಯನ್ನು ಜೀವಿಸದೇ ಅಲ್ಪ ಆಯುಷಿ ಆಗುತ್ತಿರುವುದು ನಿಜಕ್ಕೂ ಆತಂಕಕಾರಿಯಾದ ವಿಷಯ.
ಅಪಘಾತ, ಹೃದಯಾಘಾತ, ಮಾರಣಾಂತಿಕ ಕಾಯಿಲೆಗಳು ಹೀಗೆ ವಿವಿಧ ಕಾರಣಗಳಿಂದ ಚಿಕ್ಕ ಚಿಕ್ಕ ವಯಸ್ಸಿನಲ್ಲೇ ಮೃತರಾಗುತ್ತಿರುವವ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಇದ್ದ ಮನುಷ್ಯ ನಾಳೆ ಇಲ್ಲ. ರಾತ್ರಿ ಊಟ ಮಾಡಿ ಮಲಗಿದ ವ್ಯಕ್ತಿ ಬೆಳಗ್ಗೆ ಎದ್ದೇಳಲೇ ಇಲ್ಲ, ಊಟಕ್ಕೆ ಕೂತಲ್ಲೇ ಸಾವು, ಮದುವೆ ಮನೆಯಲ್ಲೇ ವ್ಯಕ್ತಿ ದಿಢೀರ್ ಕುಸಿದು ಬಿದ್ದು ಸಾವು. ಹೀಗೆ ಅನೇಕ ಉದಾಹರಣೆಗಳನ್ನು ನೀವು ನೋಡಿರಬಹುದು.

ಇದೇ ರೀತಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವಕ ಏಕಾಏಕಿ ಕುಸಿದುಬಿದ್ದು ಸ್ಥಳದಲ್ಲೇ ಪ್ರಾಣ ಪಕ್ಷಿ ಹಾರಿ ಹೋದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ನೀವು ಫಿಟ್ ಆ್ಯಂಡ್ ಫೈನ್ ಆಗಿರುವ ಯುವಕನನ್ನೇ ನೋಡಬಹುದು. ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದ ಅಥವಾ ಅನಾರೋಗ್ಯ ಇರುವ ವ್ಯಕ್ತಿಯಂತೆ ಆತ ಕಾಣುವುದಿಲ್ಲ.
ಮೊದಲು ನಗುನಗುತ್ತಲೇ ಖುಷಿಯಿಂದ ಬಂದ ಯುವಕನನ್ನು ಎದುರಿಗೆ ಬಂದ ವ್ಯಕ್ತಿ ಮಾತನಾಡಿಸಿ ಮುಂದೆ ಹೋಗುತ್ತಾರೆ. ಅವರು ಹತ್ತು ಹೆಜ್ಜೆ ಮುಂದೆ ಇಟ್ಟು ಹೋಗುವಷ್ಟರಲ್ಲಿ ಈ ಯುವಕ ಯಾರನ್ನೋ ಕರೆಯುತ್ತಾ ನಿಂತಲ್ಲೇ ನಿಂತಿರುತ್ತಾನೆ. ಒಮ್ಮೆಲೆ ಯುವಕ ಸುಸ್ತಾದಂತೆ ಕಂಡಿದ್ದು, ನೋಡ ನೋಡುತ್ತಿದ್ದಂತೆ ಕುಸಿದು ಬೀಳುತ್ತಾನೆ. ಎದುರಿಗೆ ಇದ್ದ ಗೋಡೆಯ ಸಹಾಯ ಪಡೆಯಲು ಹೋಗುತ್ತಾನೆ ಆದರೆ ಸಾಧ್ಯವಾಗದೇ ಅಲ್ಲೇ ಬೀಳುತ್ತಾನೆ. ಎರಡು ಸೆಂಕೆಂಡುಗಳ ಕಾಲ ಯುವಕ ಬಿದ್ದಲ್ಲೇ ಒದ್ದಾಡುತ್ತಾನೆ.
⚠️ Trigger Warning : Sensitive Visual⚠️
— Sachin Gupta (@SachinGuptaUP) March 22, 2025
जिंदगी–मौत का कुछ नहीं पता। इस Video को देखिए। 20 सेकेंड पहले तक जो इंसान एकदम फिट दिखाई दे रहा है, वो अचानक से मर जाता है।
📍बुलंदशहर, यूपी pic.twitter.com/9jiDgbC2ay
ಯುವಕ ಕೆಳಗೆ ಬಿದ್ದಿರುವುದನ್ನು ದೂರದಿಂದಲೇ ಕಂಡ ವ್ಯಕ್ತಿಯೊಬ್ಬರು ಓಡಿ ಬಂದು ಎತ್ತಿಕೊಳ್ಳುತ್ತಾರೆ. ಕೂಡಲೇ ಸ್ಥಳದಲ್ಲಿದ್ದ ಇತರರು ಬಂದು ಆತನ ರಕ್ಷಣೆ ಮುಂದಾಗಿದ್ದು, ಮಾತನಾಡಿಸಲು ಪ್ರಯತ್ನಿಸುತ್ತಾರೆ. ಆದರೆ ಆತ ಅಲ್ಲಿಯೇ ಕೊನೆಯುಸಿರೆಳೆಯುತ್ತಾನೆ. ಉತ್ತರ ಪ್ರದೇಶದ ಬುಲಂದಶಹರ್‌ನಲ್ಲಿ ಈ ಘಟನೆ ನಡೆದಿದ್ದು, ಸಚಿನ್ ಗುಪ್ತ ಎನ್ನುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 'ಜೀವನ ಮತ್ತು ಸಾವಿನ ಬಗ್ಗೆ ನಾನು ಏನೂ ತಿಳಿದಿರಲು ಸಾಧ್ಯವಿಲ್ಲ. 20 ಸೆಕೆಂಡ್‌ಗಳ ಹಿಂದೆ ಸಂಪೂರ್ಣವಾಗಿ ಫಿಟ್ ಆಗಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತಾನೆ' ಎಂದು ಕ್ಯಾಪ್ಷನ್ ನೀಡಿ ವಿಡಿಯೋ ಹಂಚಿಕೊಂಡಿದ್ದಾರೆ.












Click it and Unblock the Notifications