Unforgettable 2020: ಲಾಕ್‌ಡೌನ್‌ನಲ್ಲಿ ಮಹಿಳೆಯರನ್ನು ಕೂಲ್ ಆಗಿರಿಸಿದ 'ಸೀರೆ ಚಾಲೆಂಜ್'

ಶಾಪಿಂಗ್ ಇಲ್ಲ, ಪ್ರವಾಸವಿಲ್ಲ, ಮದುವೆಮನೆಗಳಿಲ್ಲ, ಪಾರ್ಟಿಗಳಿಲ್ಲದೆ ಬೇಸರದಿಂದ ಲಾಕ್‌ಡೌನ್ ಕಳೆಯುತ್ತಿದ್ದ ಮಹಿಳೆಯರಿಗೆ ಈ ಸ್ಯಾರಿ ಚಾಲೆಂಜ್‌ ಖುಷಿ ನೀಡಿತ್ತು.

ಮೇಕ್‌ ಅಪ್ ಎಂದು ಕನ್ನಡಿಮುಂದೆ ಕೂರದೇ ನಿತ್ಯ ಅಡುಗೆ, ಮನೆಗೆಲಸ ಎಂದು ಬ್ಯುಸಿಯಾಗಿದ್ದ ಮಹಿಳೆಯರಿಗೆ ಈ ಸ್ಯಾರಿ ಚಾಲೆಂಜ್ ಒಂದಷ್ಟು ಹೊತ್ತು ಕನ್ನಡಿ ಮುಂದೆ ಕೂರುವಂತೆ ಮಾಡಿತ್ತು.

ಈ ಲಾಕ್‌ಡೌನ್ ಸಂದರ್ಭದಲ್ಲಿ ಕೈತೊಳೆಯುವ ಚಾಲೆಂಜ್, ಪಾಸ್‌ ದಿ ಬ್ರಶ್ ಚಾಲೆಂಜ್ ಸೇರಿದಂತೆ ಹತ್ತು ಹಲವಾರು ಚಾಲೆಂಜ್‌ಗಳು ಮನಸ್ಸನ್ನು ಸ್ವಲ್ಪ ಮಟ್ಟಿಗೆ ಕೂಲ್ ಆಗಿರಿಸಿದ್ದವು.

Unforgettable 2020: Saree Challenges That Helped Women Beat Lockdown

ಹಾಗೆಯೇ ಕ್ವಾರಂಟೈನ್ ಟ್ರಾವೆಲ್ ಚಾಲೆಂಜ್ ಕೂಡ ಹೆಚ್ಚು ಮಂದಿ ಸ್ವೀಕರಿಸಿದ್ದರು. ಕೊರೊನಾ ಲಾಕ್‌ಡೌನ್‌ಗೂ ಮೊದಲು ನೀವು ಸುತ್ತಿ ಬಂದಿದ್ದ ಯಾವುದೇ ಎರಡು ಚಿತ್ರಗಳನ್ನು ತೆಗೆದುಕೊಂಡು, ಮನೆಯಲ್ಲಿಯೇ ಆ ಸ್ಥಳದ ಮಾದರಿಯನ್ನು ನಿರ್ಮಾಣ ಮಾಡುವ ಚಾಲೆಂಜ್ ಇದಾಗಿತ್ತು. ಸಾಕಷ್ಟು ಮಂದಿ ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ಗಳಲ್ಲಿ ಈ ಚಾಲೆಂಜ್ ಅಕ್ಸೆಪ್ಟ್ ಮಾಡಿದ್ದರು.

ಮೊದ ಮೊದಲು ಇದೆಂಥಾ ಚಾಲೆಂಜ್ ಎಂದು ಬೈದರೂ ಕೂಡ ಕೊನೆಗೆ ಯಾವುದೇ ಚಾಲೆಂಜ್ ಬಂದರೂ ಅದನ್ನು ಅಕ್ಸೆಪ್ಟ್ ಮಾಡಲು ಜನರು ಶುರು ಮಾಡಿದ್ದರು. ಅದರಲ್ಲಿ ಸೀರೆಯ ಚಾಲೆಂಜ್ ಕೂಡ ಒಂದು, ಈ ಸ್ಯಾರಿ ಚಾಲೆಂಜ್‌ಲ್ಲಿ ಮಹಿಳೆ ತನ್ನು ಸೀರೆಯುಟ್ಟು ಫೋಟೊವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡುವ ಮೂಲಕ ಮತ್ತೊಂದಷ್ಟು ಮಂದಿ ಚಾಲೆಂಜ್ ಮಾಡಬಹುದಾಗಿತ್ತು.

ಕೊನೆ ಕೊನೆಗೆ ಫೇಸ್‌ಬುಕ್‌ನಲ್ಲಿ ಈ ಚಾಲೆಂಜ್ ನೋಡುತ್ತಿದ್ದ ಪುರುಷರು ದೋತಿ ಚಾಲೆಂಜ್ ಶುರು ಮಾಡಿ ತಮ್ಮದೇ ಆದ ಟ್ರೆಂಡ್ ಸೃಷ್ಟಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+