2020ಕ್ಕೂ ಮೊದಲು ನೀವು ಎಂದೂ ನೋಡಿರದ, ಬಳಸದ 5 ವಸ್ತುಗಳು
ನವದೆಹಲಿ, ಡಿಸೆಂಬರ್ 11: ಒಳ್ಳೆಯದೇ ಆಗಿರಲಿ ಕೆಟ್ಟದ್ದೇ ಆಗಿರಲಿ ಈ ಕೊವಿಡ್ 19 ರೋಗವೆಂಬುದು ನಮ್ಮ ದಿನನಿತ್ಯದ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ.
ಹಾಗೆಯೇ ನಮ್ಮ ಸುತ್ತಮುತ್ತಲಿನ ಪರಿಸರದ ಶುಚಿತ್ವ, ವೈಯಕ್ತಿಕ ಶುಚಿತ್ವ, ಬೇರೆಯವರ ಬಗ್ಗೆ ಕಾಳಜಿ ಸೇರಿದಂತೆ ನಮಗೆ ಗೊತ್ತಿಲ್ಲದಂತೆಯೇ ಹಲವು ಒಳ್ಳೆಯ ಗುಣಗಳನ್ನು ಅದು ಕಲಿಸಿದೆ.
ಇಷ್ಟು ದಿನ ನಮ್ಮೊಂದಿಗೇ ಇದ್ದು ಬಳಕೆಯಲ್ಲಿಲ್ಲದ ವಸ್ತುಗಳನ್ನು ಬಳಕೆ ಮಾಡಲು ಕಲಿತಿದ್ದೇವೆ. ನೀವು 2020ಕ್ಕೂ ಮೊದಲು ಬಳಸದ ಐದು ವಸ್ತುಗಳ ಕುರಿತು ನಾವು ಇಲ್ಲಿ ವಿವರಿಸಿದ್ದೇವೆ.
ಬೆಂಗಳೂರಿನ ಸರ್ಜಾಪುರ ಮುಖ್ಯರಸ್ತೆ ಬಳಿ 3 ಹಾಗೂ 4 BHK ಐಷಾರಾಮಿ ಅಪಾರ್ಟ್ಮೆಂಟ್. ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿ

ಇನ್‌ಫ್ರೇಮ್ಡ್ ಥರ್ಮೋಮೀಟರ್
ಈ ಥರ್ಮೋಮೀಟರ್‌ಗಳನ್ನು 2020ಕ್ಕೂ ಮೊದಲು ಬಳಸಿರಲೂ ಇಲ್ಲಮ ನೋಡಿರಲೂ ಇಲ್ಲ, ಜ್ವರ ಬಂದಾಗ ಬಾಯಿ, ಕಂಕುಳಲ್ಲಿಡುವ ಥರ್ಮೋಮೀಟರ್ ಬಿಟ್ಟರೆ ಜನರಿಗೆ ಇನ್ಯಾವುದರ ಬಗ್ಗೆಯೂ ಅರಿವಿರಲಿಲ್ಲ. ಇದೀಗ, ಮಾಸ್ಕ್, ಥರ್ಮೋಮೀಟರ್, ಸ್ಯಾನಿಟೈಸರ್, ಗ್ಲೌಸ್ ಎಂದರೆ ಎಂಥವರಿಗೂ ಪಟ್ ಎಂದು ಅರ್ಥವಾಗಿಬಿಡುತ್ತದೆ.
ಕೊರೊನಾ ಸೋಂಕು ಹರಡಿದಾಗಿನಿಂದ ದೇಹದ ತಪಮಾನವನ್ನು ಅಳೆಯಲು ಪ್ರತಿ ಕಚೇರಿಗಳು, ಆಸ್ಪತ್ರೆ, ಮಾಲ್‌ಗಳು, ಹೋಟೆಲ್, ಏರ್‌ಪೋರ್ಟ್, ಶಾಲಾ, ಕಾಲೇಜುಗಳಲ್ಲಿ ಇರಿಸಲಾಗಿದೆ.

ಫೇಸ್‌ಶೀಲ್ಡ್ ಮತ್ತು ಮಾಸ್ಕ್
ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಫೇಸ್‌ಶೀಲ್ಡ್ ಹಾಗೂ ಮಾಸ್ಕ್‌ಗಳನ್ನು ಧರಿಸಲಾಗುತ್ತಿದೆ. ಕೊರೊನಾ ಸೋಂಕಿನಿಂದ ದೂರವಿರಲು ಕೇವಲ ಸಾಮಾಜಿಕ ಅಂತಕವನ್ನು ಕಾಯ್ದುಕೊಂಡರೆ ಪ್ರಯೋಜನವಿಲ್ಲ, ಮಾಸ್ಕ್, ಫೇಸ್‌ಶೀಲ್ಡ್ ಕೂಡ ಹಾಕಿಕೊಳ್ಳಬೇಕಾಗುತ್ತದೆ.

ವಾತಾವರಣ ಶುಚಿತ್ವ
ಸಾಮಾನ್ಯವಾಗಿ ಮನೆ, ಕಚೇರಿಗಳು, ಸಾಲೆ ಎಲ್ಲವನ್ನೂ ನಿತ್ಯ ಸ್ವಚ್ಛಗೊಳಿಸಲಾಗುತ್ತದೆ, ಆದರೆ ಸ್ಯಾನಿಟೈಸರ್ ಹಾಗೂ ಅನೇಕ ರೋಗ ನಿವಾರಕಗಳನ್ನು ಹಾಕಿ ಸ್ಯಾನಿಟೈಸ್ ಮಾಡುತ್ತಿರುವುದನ್ನು ನೋಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಇಕೊರೊನಾ ಸೋಂಕು ಮತ್ತೊಬ್ಬರಿಗೆ ಹರಡದಂತೆ ತಡೆಯಲು ವಾತಾವರಣವನ್ನು ಶುಚಿಯಾಗಿಟ್ಟುಕೊಳ್ಳಬೇಕಾಗುತ್ತದೆ. ಕೊರೊನಾ ಸೋಂಕು ಕಂಡು ಬಂದ ಪ್ರದೇಶವಷ್ಟೇ ಅಲ್ಲದೆ ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಯಾನಿಟೈಸರ್ ಹಾಕಿ ಸ್ವಚ್ಛಗೊಳಿಸುತ್ತಿದ್ದಾರೆ. ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಕಾಪಾಡಿಕೊಳ್ಳಲು ಲ್ಯಾಬ್‌ಗಳು ಮತ್ತು ಆಸ್ಪತ್ರೆಗಳು ಹೆಚ್ಚಾಗಿ ಬಳಸುತ್ತಿದ್ದ ಈ ಸೋಂಕು ನಿವಾರಕಗಳು ಈಗ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರವಲ್ಲದೆ ಮನೆಯಲ್ಲಿಯೂ ಬಳಕೆಯಾಗುತ್ತಿದೆ. ಕೊರೊನಾಗಳು ಗಂಟೆಗಳ ಕಾಲ ಮೇಲ್ಮೈನಲ್ಲಿ ಸಕ್ರಿಯಾಗಿರುವ ಕಾರಣ ಈ ಸೋಂಕು ನಿವಾರಕಗಳನ್ನು ಸಿಂಪಡಿಸುವದರಿಂದ ಅವು ಬ್ಯಾಕ್ಟೀರಿಯಾ ಜತೆ ಹೋರಾಡುತ್ತವೆ.

ಪಿಪಿಇ ಕಿಟ್
ಪಿಪಿಇ ಕಿಟ್, ಕನ್ನಡಕ, ಮುಖಗವಸು, ಕೈಗವಸು, ಹೆಡ್ ಕವರ್, ಶೂ ಇವೆಲ್ಲವೂ ವೈರಸ್ ವಿರುದ್ಧ ಹೋರಾಡುವವರಿಗೆ ವರದಾನವಾಗಿದೆ. ಮೊದಲು ಭಾರತವು ಬೇರೆ ದೇಶಗಳಿಂದ ಪಿಪಿಇ ಕಿಟ್‌ಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಇದೀಗ ಸ್ವಾವಲಂಬಿಯಾಗಿ ದೇಶದಲ್ಲೇ ಪಿಪಿಇ ಕಿಟ್ ತಯಾರಿಸಲಾಗುತ್ತಿದೆ ಎಂಬುದನ್ನು ಗಮನಿಸಬೇಕು.

ಪೆಡಲ್ ಆಪರೇಟೆಡ್ ಸ್ಯಾನಿಟೈಸರ್
ಸಾಮಾನ್ಯವಾಗಿ ಸ್ಯಾನಿಟೈಸರ್ ಬಳಕೆ ಜನರಿಗೆ ಗೊತ್ತಿತ್ತು, ಆದರೆ ಪೆಡಲ್ ಸ್ಯಾನಿಟೈಸರ್ ಬಗ್ಗೆ ಸಾಕಷ್ಟು ಮಾಹಿತಿ ಇರಲಿಲ್ಲ. ನೀವು ನಿಮ್ಮದೇ ಆದ ಸ್ಯಾನಿಟೈಸರ್‌ಗಳನ್ನು ಹೊಂದಿಲ್ಲ ಎಂದಾದಲ್ಲಿ ಅನಿವಾರ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಇಟ್ಟಿರುವ ಸ್ಯಾನಿಟೈಸರ್ ಬಳಸಬೇಕಾಗುತ್ತದೆ. ಆದರೆ ಒಬ್ಬರು ಮುಟ್ಟಿದ ಸ್ಯಾನಿಟೈಸರ್ ಮತ್ತೊಬ್ಬರು ಬಳಸುವುದರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಅದಕ್ಕೆ ಪೆಡಲ್ ಸ್ಯಾನಿಟೈಸರ್ ಬಳಕೆ ಮಾಡಲಾಗುತ್ತದೆ.











Click it and Unblock the Notifications