ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆಗಾಲದಲ್ಲಿ ಪ್ರವಾಸ ಮಾಡಲು 5 ಅತ್ಯುತ್ತಮ ಸ್ಥಳಗಳು

|
Google Oneindia Kannada News

ಮುಂಗಾರು ಆರಂಭವಾಗುತ್ತಿದ್ದಂತೆ ಹಚ್ಚು ಹಸಿರು ಪರಿಸರವು ನಮ್ಮ ಮನದಲ್ಲಿ ಆಹ್ವಾನಿಸುತ್ತಲೇ ಇರುತ್ತದೆ. ಆದರೆ ನಾವು ಯಾವಾಗ ಇಂತಹ ಪರಿಸರದ ಸುಂದರ ಸ್ಥಳಗಳನ್ನು ಯಾವಾಗ ಸುತ್ತುತ್ತೇವೆ ಎಂಬುವುದು ಮನದಲ್ಲಿ ಕಾಡುತ್ತಲೇ ಇರುತ್ತದೆ.

ನೀವು ಈ ವರ್ಷದ ಮುಂಗಾರು ಹಾಗೂ ಸುಂದರ ಕ್ಷಣಗಳಿಗಾಗಿ ಈ ಸ್ಥಳಗಳ ಬಗ್ಗೆ ತಿಳಿದಿಕೊಳ್ಳಲೇ ಬೇಕಾಗುತ್ತದೆ ಎಕೆಂದರೆ ಈ ಮಾನ್ಸೂನ್‌ ಕಳೆಯುವ ಮೊದಲು ನಾವು ನೋಡಲೇ ಬೇಕಾಗಿರುವ ಸ್ಥಳಗಳು ಇವಾಗಿವೆ.

ಹೌದು ಭಾರತದಲ್ಲಿ ಮುಂಗಾರು ಈಗಾಗಲೇ ಆರಂಭವಾಗಿದೆ. ಒಣಗಿದ ಭೂಮಿಯ ಮೇಲೆ ತಣ್ಣನೆಯ ಮಳೆ ನೀರು ಬಿದ್ದಿದೆ. ನದಿಗಳು, ಕೆರೆಗಳು ತುಂಬಿ ಹರಿಯುತ್ತಿವೆ. ಹಚ್ಚ ಹಸಿರಿನ ಭೂಮಿ ಮತ್ತು ಸುಂದರವಾದ ಕಡಲತೀರಗಳಿಗೆ ಭೇಟಿ ನೀಡಲು ಈಗ ಉತ್ತಮ ಸಮಯ ಎಂದು ಗಮನಿಸಬೇಕಾದ ಅಂಶವಾಗಿದೆ.

ನೀವು ಪ್ರಕೃತಿ ಪ್ರಿಯರಾಗಿದ್ದರೆ ಮತ್ತು ಮಳೆಗಾಲದಲ್ಲಿ ಪ್ರಯಾಣಿಸಲು ಬಯಸಿದರೆ, ಇದಕ್ಕಿಂತ ಉತ್ತಮ ಸಮಯ ಇನ್ನೊಂದಿಲ್ಲ. ಮಾನ್ಸೂನ್ ಪ್ರವಾಸೋದ್ಯಮಕ್ಕಾಗಿ ಭಾರತದ ಅತ್ಯುತ್ತಮ 5 ಸ್ಥಳಗಳ ಕುರಿತು ವಿವರಗಳನ್ನು ಇಲ್ಲಿ ನೀಡಲಾಗಿದೆ.

 ಓಹೋ ಮೇಘಾಲಯ

ಓಹೋ ಮೇಘಾಲಯ

ಪೂರ್ವದ ಸ್ಕಾಟ್ಲೆಂಡ್ ಎಂದು ಕರೆಯಲ್ಪಡುವ ಶಿಲ್ಲಾಂಗ್ ಮಾನ್ಸೂನ್ ಸಮಯದಲ್ಲಿ ಭಾರೀ ಮಳೆಯು ಸುರಿಯುತ್ತದೆ. ಸೊಂಪಾದ ಕಾಶಿ ಮತ್ತು ಜಯಂತಿ ಬೆಟ್ಟಗಳಿಂದ ಸುತ್ತುವರೆದಿರುವ ರಾಜ್ಯವು ಹಲವಾರು ಜಲಪಾತಗಳು ಮತ್ತು ಕಣಿವೆಯ ಅದ್ಭುತ ನೋಟಗಳಿಂದ ಕೂಡಿದ ಸ್ಥಳಗಳು ಇಲ್ಲವೆ. ಇಲ್ಲಿ ಟ್ರೆಕ್ಕಿಂಗ್ ಮಾಡುವ ಅನೇಕ ಸ್ಥಳಗಳಿವೆ ಆದರೆ ಮಳೆಗಾಲದಲ್ಲಿ ನೀವು ಹೆಚ್ಚಿನ ಮಾಹಿತಿ ಪಡೆದುಕೊಂಡು ಪ್ಲಾನ್‌ ಮಾಡಬೇಕಾಗುತ್ತದೆ.
ನೋಡಬೇಕಾದ ಸ್ಥಳಗಳು
• ಎಲಿಫೆಂಟ್ ಫಾಲ್ಸ್ ಮತ್ತು ಈಗಲ್ ಫಾಲ್ಸ್
• ಡೇವಿಡ್ ಸ್ಕಾಟ್ ಟ್ರಯಲ್ ಟ್ರೆಕ್
• ಸ್ಥಳೀಯ ಭಕ್ಷ್ಯಗಳನ್ನು ತಿನ್ನಿರಿ ಅಥವಾ ಕೈಯಿಂದ ಹೆಣದಿರುವ ಶಾಲುಗಳು ಮತ್ತು ಉಡುಪುಗಳನ್ನು ಖರೀದಿಸಿ.

 ಪ್ರಶಾಂತ ಲೋನಾವಾಲಾ

ಪ್ರಶಾಂತ ಲೋನಾವಾಲಾ

1) ಪಾವ್ನಾ ಸರೋವರದಲ್ಲಿ ರಾಪ್ಪೆಲಿಂಗ್ ಮತ್ತು ಕ್ಯಾಂಪಿಂಗ್, ಡಿಕೋನಾ ಕೋಟೆಯ ಬಳಿ ಟ್ರೆಕ್ಕಿಂಗ್, ರಾಜ್ಮಾಚಿ ಕೋಟೆಗೆ ಟ್ರೆಕ್ಕಿಂಗ್ ಮುಂತಾದ ಮೋಜಿನ ಚಟುವಟಿಕೆಗಳನ್ನು ಆನಂದಿಸಬಹುದು.
2) ಪಶ್ಚಿಮ ಘಟ್ಟಗಳ ಅದ್ಭುತ ನೋಟಕ್ಕಾಗಿ ಟೈಗರ್ಸ್ ಲೀಪ್ ಅನ್ನು ಭೇಟಿ ಮಾಡಿ.
3) ಕಾರ್ಲಾ ಮತ್ತು ಬಾಜಾ ಗುಹೆಗಳನ್ನು ನೋಡಬಹುದು.
ಪ್ರಶಾಂತ ಲೋನಾವಾಲಾ ಒಂದು ಜನಪ್ರಿಯ ಗಿರಿಧಾಮವಾಗಿದ್ದು, ದೇಶಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪುಣೆಯಿಂದ 64 ಕಿ. ಮೀ. ಮತ್ತು ಮುಂಬೈನಿಂದ 96 ಕಿ. ಮೀ. ದೂರದಲ್ಲಿರುವ ಈ ಪ್ರದೇಶವು ಸುಂದರವಾದ ಸರೋವರಗಳು ಮತ್ತು ಹಸಿರಿನಿಂದ ಹೆಸರುವಾಸಿಯಾಗಿದೆ

 ಮಳೆಗಾಲದಲ್ಲಿ ಕೊಡಗು ಪ್ರವಾಸ

ಮಳೆಗಾಲದಲ್ಲಿ ಕೊಡಗು ಪ್ರವಾಸ

• ಮಡಿಕೇರಿ ಕೋಟೆ ಮತ್ತು ರಾಜಾಸೀಟ್‌ಗೆ ಚಾರಣ.
• ಜೋಗ್ ಫಾಲ್ಸ್, ಭಾರತದ ಎರಡನೇ ಅತಿ ಎತ್ತರದ ಜಲಪಾತ ಮತ್ತು ಅಬ್ಬೆ ಜಲಪಾತಗಳಿಗೆ ಭೇಟಿ ನೀಡಬಹುದು.
• ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಮತ್ತು ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ
• ಕಾಫಿನಾಡು ಸುತ್ತಿ ವೈನ್ ಸಹ ಸವಿಯಬಹುದು.
ಜಲಪಾತಗಳು, ದಟ್ಟವಾದ ಕಾಡುಗಳು ಮತ್ತು ಕಾಫಿ ತೋಟಗಳು ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಗಮನ ಸೆಳೆಯುತ್ತವೆ, ನಿಮ್ಮ ಮನಸ್ಸನ್ನು ತಂಪಾಗಿಸುತ್ತದೆ. ಬೆಂಗಳೂರಿನಿಂದ 260 ಕಿ.ಮೀ ದೂರದಲ್ಲಿರುವ ಈ ರಸ್ತೆ ಪ್ರವಾಸ ಅವಿಸ್ಮರಣೀಯ. ಮಳೆಗಾಲದಲ್ಲಿ ನೀವು ಈ ಸುಂದರ ನಗರದ ಸೌಂದರ್ಯವನ್ನು ಆನಂದಿಸಬಹುದು.

 ಪಶ್ಚಿಮ ಘಟ್ಟಗಳ ಮಂಜಿನಲ್ಲಿ ಹಸಿರು ಬೆಟ್ಟಗಳು

ಪಶ್ಚಿಮ ಘಟ್ಟಗಳ ಮಂಜಿನಲ್ಲಿ ಹಸಿರು ಬೆಟ್ಟಗಳು

• ಬೊಮ್ ಜೀಸಸ್, ವಾಸ್ಕೋ ಚರ್ಚ್ ಮುಂತಾದ ಪ್ರಸಿದ್ಧ ಪ್ರವಾಸಿ ತಾಣಗಳಿವೆ.
• ಮಾಂಡೋವಿ ನದಿಯಲ್ಲಿ ಸಂಜೆ ದೋಣಿ ವಿಹಾರ ಮಾಡಬಹುದು.
ವರ್ಷಪೂರ್ತಿ ಜನಪ್ರಿಯ ಪ್ರವಾಸಿ ತಾಣವಾಗಿರುವ ಗೋವಾ ಮಾನ್ಸೂನ್ ಸಮಯದಲ್ಲಿ ನೋಡಲೇಬೇಕಾದ ಸ್ಥಳವಾಗಿದೆ. ಗೋವಾ ನೀವು ಕಡಲತೀರಗಳಿಗೆ ಭೇಟಿ ನೀಡಬಹುದು.
ಕೇರಳದ ಮುನ್ನಾರ್ ಪಶ್ಚಿಮ ಘಟ್ಟಗಳ ಮಂಜಿನಲ್ಲಿ ಹಸಿರು ಬೆಟ್ಟಗಳು ಮತ್ತು ಹಸಿರು ಚಹಾ ತೋಟಗಳಿಗೆ ನೆಲೆಯಾಗಿದೆ, ಇದು ಮಳೆಗಾಲದಲ್ಲಿ ನೆಚ್ಚಿನ ಪ್ರವಾಸಿ ತಾಣವಾಗಿದೆ.
• ಮುನ್ನಾರ್‌ನಲ್ಲಿ ಚಹಾ ಮತ್ತು ಮಸಾಲೆ ತೋಟಗಳನ್ನು ಪ್ರವಾಸ ಮಾಡಿ.
• ಕಾರ್ಮೆಲ್‌ಗಿರಿ ಎಲಿಫೆಂಟ್ ಪಾರ್ಕ್‌ನಲ್ಲಿ ಆನೆ ಸವಾರಿಯನ್ನು ಆನಂದಿಸಬಹುದು.

English summary
Travel plan; Don't miss these 5 best monsoon travel destinations, As the monsoons begin, the lush green environment keeps calling in our mind but when we will visit such beautiful places of environment, it keeps bothering our mind
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X