Tiger Urine: ಸಂಧಿವಾತ ನಿವಾರಣೆಗೆ ರಾಮಬಾಣ ಎಂದು ಹುಲಿ ಮೂತ್ರ ಮಾರಾಟ ಮಾಡಿದ ಮೃಗಾಲಯ

ಆಹಾರ ಹಾಗೂ ಆರೋಗ್ಯದ ವಿಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಿನ ಜಾಗ್ರತೆ ವಹಿಸುತ್ತಿದ್ದಾರೆ. ಆಹಾರದಲ್ಲಿಯೂ ಸ್ಲೋ ಕೆಮಿಕಲ್‌ಗಳು ಮಿಶ್ರಣವಾಗುತ್ತಿರುವ ಕಾರಣ ಜನರು ತಿನ್ನುವ ವಸ್ತುಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸುತ್ತಿದ್ದಾರೆ. ಇನ್ನು ಆರೋಗ್ಯದ ಸಮಸ್ಯೆಗಳಿಗೂ ಕೂಡ ಜನ ಮನೆ ಮದ್ದುಗಳು, ಆರ್ಯುವೇದ ಔಷಧಿಗಳು ಹಾಗೂ ನಾಟಿ ಔಷಧಗಳಿಗೆ ಹೆಚ್ಚು ಪ್ರಾಶಸ್ತ್ಯಕೊಡುತ್ತಿದ್ದಾರೆ.

ಜನರ ಈ ಆರೋಗ್ಯ ಸಮಸ್ಯೆ ಹಾಗೂ ಆರೋಗ್ಯ ಕಾಳಜಿಯನ್ನೇ ಬಂಡವಾಳ ಮಾಡಿಕೊಂಡ ಮೃಗಾಲಯವೊಂದು ಸಂಧಿವಾತ ಸಮಸ್ಯೆಗಳಿಗೆ ರಾಮಬಾಣವೆಂದು ನಂಬಿಸಿ ಜನರಿಗೆ ಹುಲಿಯ ಮೂತ್ರವನ್ನು ಮಾರಾಟ ಮಾಡುತ್ತಿದೆ. ಮೊದಲೆಲ್ಲಾ ವಯಸ್ಸಾದವರಲ್ಲಿ ಹೆಚ್ಚು ಕಂಡು ಬರುತ್ತಿರುವ ಸಂಧಿವಾತ ಸಮಸ್ಯೆ ಈಗ ವಯಸ್ಕರಲ್ಲಿಯೂ ಕಂಡು ಬರುವುದು ಹೆಚ್ಚಾಗಿದೆ. ಹೀಗಾಗಿ ಇದರ ನಿವಾರಣೆಗೆ ಔಷಧವೆಂದು ಮೃಗಾಲಯವೊಂದು ಬೆಲೆ ನಿಗದಿ ಮಾಡಿ ಹುಲಿಯ ಮೂತ್ರ ಮಾರಾಟ ಮಾಡುತ್ತಿದೆ.

Tiger Urine Sold as Arthritis Remedy at Chinese Zoo

ದೇಹದಲ್ಲಿ ಯಾವುದೇ ಭಾಗದಲ್ಲಿ ಸ್ನಾಯು ನೋವು ಅಥವಾ ಉಳುಕು ಹಾಗೂ ಸಂಧಿವಾತ ಸಮಸ್ಯೆಗಳಿಗೆ ಹುಲಿ ಮೂತ್ರ ಒಳ್ಳೆಯದು ಎಂದು ಮೃಗಾಲಯದ ಅಧಿಕಾರಿಗಳು ಜಾಹೀರಾತು ನೀಡಿದ್ದಾರೆ. ಹುಲಿಯ ಮೂತ್ರವನ್ನು ಬಿಳಿ ವೈನ್‌ನಲ್ಲಿ ಬೆರೆಸಿ ಶುಂಠಿ ಬೆರೆಸಿ ನೋವಿರುವ ಜಾಗಕ್ಕೆ ಹಚ್ಚಿದರೆ ಸ್ನಾಯು ನೋವು ಅಥವಾ ಉಳುಕು ಮಾಯವಾಗುತ್ತದೆ ಎಂದು ಮೃಗಾಲಯದ ಅಧಿಕಾರಿಗಳು ಎಲ್ಲೆಡೆ ಸುದ್ದಿ ಹರಡಿಸಿದ್ದಾರೆ. ಇದನ್ನೇ ನಂಬಿದ ಅನೇಕರು ಮೃಗಾಲಯಕ್ಕೆ ಭೇಟಿ ನೀಡಿ ಹುಲಿ ಮೂತ್ರ ಖರೀದಿಸುತ್ತಿದ್ದಾರೆ.

ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಯಾನ್ ಯಾನ್ ಬಿಫೆಂಗ್ಸಿಯಾ ವನ್ಯಜೀವಿ ಮೃಗಾಲಯದಲ್ಲಿ ಈ ವ್ಯವಹಾರ ನಡೆಯುತ್ತಿದ್ದು, ಹುಲಿಗಳಿಂದ ಸಂಗ್ರಹಿಸಿದ ಮೂತ್ರವನ್ನು ಮೃಗಾಲಯದ ಅಧಿಕಾರಿಗಳು 50 ಯುವಾನ್ ಅಂದರೆ ಭಾರತದ ದರದಲ್ಲಿ 600 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.

Tiger Urine Sold as Arthritis Remedy at Chinese Zoo

ಈ ವಿಚಾರವನ್ನು ವ್ಯಕ್ತಿಯೊಬ್ಬ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ಬಳಿಕ ಚರ್ಚೆಗೆ ಗ್ರಾಸವಾಗಿತ್ತು. ಹುಲಿ ಮೂತ್ರವು ಸಾಂಪ್ರದಾಯಿಕ ಔಷಧಿಯಲ್ಲ. ಅದರಿಂದ ಯಾವುದೇ ವೈದ್ಯಕೀಯ ಪರಿಣಾಮವಿಲ್ಲ ಎಂದು ಚೀನಾದ ಔಷಧಿ ತಜ್ಞರೊಬ್ಬರು ತಿಳಿಸಿದ್ದು, ಇದೀಗ ಮೃಗಾಲಯದ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ ಎಂದು ವರದಿಯಾಗಿದೆ. ಒಟ್ಟಾರೆಯಾಗಿ ನೈಸರ್ಗಿಕವಾಗಿ ಆರೋಗ್ಯ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಜನ ಪೂರ್ವಪರ ವಿಚಾರಿಸದೇ ಈ ರೀತಿ ಮೂರ್ಖರಾಗುತ್ತಿರುವುದನ್ನು ನೋಡಿದರೆ ಜನ ಮರಳೋ ಜಾತ್ರೆ ಮರಳೋ ಎನ್ನುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+