ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪರೂಪದ ಪ್ರಾಣಿ: ಈ ಬೆಕ್ಕಿಗಿದೆ ಎರಡಲ್ಲ ಮೂರು ಕಣ್ಣು..!

|
Google Oneindia Kannada News

ದೇವರಿಂದ ಸೃಷ್ಟಿಸಲ್ಪಟ್ಟ ಈ ಜಗತ್ತಿನಲ್ಲಿ ಬಹಳಷ್ಟು ಆಶ್ಚರ್ಯಪಡುವಂತದಿದೆ. ವಿಜ್ಞಾನಿಗಳೂ ಕೂಡ ಕೆಲವು ವಿಷಯಗಳಲ್ಲಿ ಬೆರಗಾಗುತ್ತಾರೆ. ವಾಸ್ತವವಾಗಿ ಈ ವಿಚಾರ ಹೇಳಲು ಕಾರಣವೇನೆಂದರೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವೊಂದು ವೈರಲ್ ಆಗುತ್ತಿದೆ. ಅದು ಜನರನ್ನು ಬೆರಗುಗೊಳಿಸುವಂತ ವಿಡಿಯೋ. ವೈರಲ್ ಆಗುತ್ತಿರುವ ಈ ವಿಡಿಯೋ ಬೆಕ್ಕಿನದ್ದು. ನೋಡಲು ತುಂಬಾ ಮುದ್ದಾಗಿರುವ ಈ ಬೆಕ್ಕಿಗೆ ಎರಡಲ್ಲ ಮೂರು ಕಣ್ಣುಗಳಿವೆ. ಇದರ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಜನ ನಿಜಕ್ಕೂ ಬೆರಗಾಗಿದ್ದಾರೆ.

ಸಾಮಾನ್ಯವಾಗಿ ಬೆಕ್ಕು ಅಥವ ಬಹುತೇಕ ಪ್ರಾಣಿಗಳಿಗೆ ಮನುಷ್ಯರಂತೆ ಎರಡು ಕಣ್ಣುಗಳಿರುತ್ತವೆ. ಆದರೆ ಈ ಬೆಕ್ಕಿಗೆ ಎರಡು ಕಣ್ಣು ಬದಲಿಗೆ ಮೂರು ಕಣ್ಣುಗಳಿವೆ. ಈ ಬೆಕ್ಕಿನ ಒಂದು ಕಣ್ಣಿನಲ್ಲಿ ಎರಡು ಕಣ್ಣುಗುಡ್ಡೆಗಳು ಇವೆ. ಒಂದೇ ಕಣ್ಣಿನಲ್ಲಿ ಎರಡು ಕಣ್ಣುಗುಡ್ಡೆಗಳನ್ನು ಈ ಬೆಕ್ಕು ಹೊಂದಿದೆ. ಅತ್ತಿತ್ತ ನೋಡುವಾಗ ಬೆಕ್ಕಿನ ಮೂರನೇ ಕಣ್ಣುಗುಡ್ಡೆ ಕಾಣಿಸಿಕೊಳ್ಳುತ್ತದೆ.

OMG: This CAT has Three Eyes!

ಇದು ನಿಜಕ್ಕೂ ಪವಾಡವೇ ಸರಿ. ಅದರ ವಿಡಿಯೊವನ್ನು ರೆಡ್ಡಿಟ್ ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು 'ಕ್ಯಾಟ್ ವಿತ್ 3 ಐಸ್' ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ. ನಂತರ ಆ ವಿಡಿಯೊ ವೈರಲ್ ಆಗಿದೆ. ಜನರು ಈ ಬೆಕ್ಕನ್ನು ಇಷ್ಟಪಡುತ್ತಿದ್ದಾರೆ ಮತ್ತು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಈ ರೀತಿ ತಮಾಷೆಯ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

OMG: This CAT has Three Eyes!

ಈ ಬೆಕ್ಕಿಗೆ ವಿಶೇಷ ಶಕ್ತಿ ಇದೆಯೇ?
ಕೆಲವರು ಕೇಳಿದರು - ಈ ಬೆಕ್ಕಿಗೆ ವಿಶೇಷ ಶಕ್ತಿ ಇದೆಯೇ? ಮೂರನೇ ಕಣ್ಣು ಕೂಡ ಕೆಲಸ ಮಾಡುತ್ತಿದೆಯೇ? ಬೆಕ್ಕಿಗೆ ಏನಾದರೂ ತೊಂದರೆ ಇದೆಯೇ? ಇದು ನೋವಿನಿಂದ ಕೂಡಿದೆಯೇ? ಇದು ಬೇರೆ ಗ್ರಹದಿಂದ ಬಂದ ಜೀವಿಗಳ ಚಿಹ್ನೆಗಳೇ? ಹೀಗೆ ಹಲವಾರು ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಮುದ್ದಾದ ಬೆಕ್ಕು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

OMG: This CAT has Three Eyes!

ಮೂರನೇ ಕಣ್ಣು ಹೇಗೆ ಕೆಲಸ ಮಾಡುತ್ತದೆ?
ಸೋಷಿಯಲ್ ಮೀಡಿಯಾದಲ್ಲಿ ಕೆಲವು ತಜ್ಞರು ಕೂಡ ಈ ಬಗ್ಗೆ ಹೇಳಿದ್ದಾರೆ. ಮೂರನೇ ಕಣ್ಣು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಪಶುವೈದ್ಯರು ರೆಡ್ಡಿಟರ್‌ಗಳಿಗೆ ವಿವರಿಸಿದ್ದಾರೆ. 'ಯಾದೃಚ್ಛಿಕ ರೂಪಾಂತರಗಳು ಯಾವಾಗಲೂ ಸಂಭವಿಸುತ್ತವೆ. ಆದರೆ ಅವುಗಳಲ್ಲಿ ಹೆಚ್ಚಿನವು ಸ್ಥಿರವಾಗಿರುತ್ತವೆ ಮತ್ತು ಕೆಲವೇ ಕೋಡಿಂಗ್ ಅಲ್ಲದ ಭಾಗಗಳು ಡಿಎನ್‌ಎ ಭಾಗವಾಗಿದೆ. ಆದರೆ ಕೆಲವೊಮ್ಮೆ ಈ ಕೋಡಿಂಗ್ ಅಲ್ಲದ ಭಾಗಗಳು ಡಿಎನ್‌ಎ ಭಾಗವಾದಾಗ ಈ ರೀತಿಯ ವಿಷಯಗಳನ್ನು ನೀವು ನೋಡಬಹುದು' ಎಂದು ಅವರು ಹೇಳಿದರು. ಆಗ್ನೇಯ ಏಷ್ಯಾ ಈ ಬೆಕ್ಕುಗಳ ಮೂಲವಾಗಿದೆ. ಈ ಬೆಕ್ಕುಗಳು ನೀರನ್ನು ಇಷ್ಟಪಡುವುದಿಲ್ಲ, ಆದ್ದರಿಂದ ಅವು ಸ್ನಾನ ಮಾಡಲು ಇಷ್ಟಪಡುವುದಿಲ್ಲ. ಬೆಕ್ಕುಗಳು ಸುಮಾರು 1,000 ವಿಭಿನ್ನ ಶಬ್ದಗಳನ್ನು ಮಾಡಬಹುದು.

English summary
A video of a three-eyed cat has gone viral on social media. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X