Viral Video: ಕರಿಮಣಿ ಮಾಲೀಕ ನೀನಲ್ಲ..ಮದುವೆ ಮಂಟಪದಿಂದ ವರನನ್ನು ಒದ್ದು ಹೊರಹಾಕಿದ ವಧು

ಮದುವೆ ಎನ್ನುವುದು ಜೀವನದ ಅತೀ ಮಹತ್ವದ ಘಟ್ಟ. ಮದುವೆ ಎನ್ನುವುದು ಎರಡು ಜೀವಗಳು ಮಾತ್ರವಲ್ಲದೇ ಎರಡು ಕುಟುಂಬಗಳನ್ನು ಬೆಸೆಯುವ ಸುಂದರವಾದ ಬಾಂಧವ್ಯ. ನೂರಾರು ಜನರು ಸೇರಿ ಸಂಭ್ರಮಿಸುವ ಹಬ್ಬ ಮದುವೆ. ಇಂತಹ ಮದುವೆಯಲ್ಲಿ ಅನೇಕ ಘಟನೆಗಳು ನಡೆಯುತ್ತದೆ. ಕೆಲವು ಘಟನೆಗಳು ಮನಸ್ಸಿಗೆ ಭಾರ ಎನಿಸಿದರೆ, ಇನ್ನೂ ಕೆಲವು ಸಖತ್‌ ತಮಾಷೆ ಎನಿಸಿ ಬಿದ್ದು ಬಿದ್ದು ನಗುವಂತಾಗುತ್ತದೆ.

ಮದುವೆಯಲ್ಲಿ ಆಗುವ ಇಂತಹ ತಮಾಷೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತದೆ. ಮದುವೆಗೆ ಹೋದವರಷ್ಟೇ ಅಲ್ಲದೇ ಈ ವಿಡಿಯೋಗಳನ್ನು ನೋಡಿದವರು ಕೂಡ ಬಿದ್ದು ಬಿದ್ದು ನಗುತ್ತಾರೆ. ಅಂತಹ ಅನೇಕ ವಿಡಿಯೋಗಳನ್ನು ನಾವು ಕಾಣಬಹುದು. ಆದರೆ ಈಗೊಂದು ವಿಡಿಯೋ ವೈರಲ್‌ ಆಗುತ್ತಿದ್ದು, ವಿಷಯ ಗಂಭೀರವಾಗಿದ್ದರೂ, ಸನ್ನಿವೇಶ ನೋಡಿದವರು, ಹೊಟ್ಟೆ ಹುಣ್ಣಾಗುವಷ್ಟು ನಗುತ್ತಿದ್ದಾರೆ.

The Bride Kicked The Groom Out Of The Wedding Hall Viral Video

ಮದುವೆಗೆ ಸಿದ್ಧವಾದ ವಧುವೊಬ್ಬಳು ವರನನ್ನು ಕಾಲಿನಿಂದ ಒದ್ದು ಮದುವೆ ಮನೆಯಿಂದ ಆಚೆ ಹಾಕಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಈ ವಿಡಿಯೋದಲ್ಲಿ ವಧು ಯಾಕೆ ವರನ ಮೇಲೆ ಕೋಪಗೊಂಡಳು ಎನ್ನುವುದನ್ನು ನೋಡಿದರೆ ಮತ್ತಷ್ಟು ತಮಾಷೆಯಾಗಿದೆ.

ಶೃಂಗಾರಗೊಂಡ ವಧು ವರರು ಮದುವೆಯ ಶಾಸ್ತ್ರಗಳನ್ನು ನಡೆಸುತ್ತಿರುತ್ತಾರೆ. ಈ ವೇಳೆ ವಧು ವರನಿಗೆ, ವರ ವಧುವಿಗೆ ರಸಗುಲ್ಲ ತಿನ್ನಿಸುವ ಅಂದರೆ ಸಿಹಿ ತಿನ್ನುವ ಶಾಸ್ತ್ರವಿರುತ್ತದೆ. ಈ ವೇಳೆ ವಧು ವರನಿಗೆ ರಸಗುಲ್ಲ ತಿನಿಸುತ್ತಾಳೆ. ವರ ಮುಗುಳುನಗುತ್ತಲೇ ಸಿಹಿಯನ್ನು ತಿನ್ನುತ್ತಾನೆ. ಬಳಿಕ ತಾನೂ ವಧುವಿಗೆ ಸಿಹಿ ತಿನಿಸಲು ಮುಂದಾಗುತ್ತಾನೆ. ಆದರೆ ವಧು ತನಗೆ ಬೇಡ ಎಂದು ನಿರಾಕರಿಸುತ್ತಾಳೆ. ಆದರೆ ವರ ಪಟ್ಟು ಬಿಡದೇ ತಿನ್ನಿಸುತ್ತಾನೆ. ಬಿಲ್‌ಕುಲ್‌ ಸಿಹಿ ತಿನ್ನಲು ಒಪ್ಪದ ವಧು ಕೋಪಗೊಳ್ಳುತ್ತಾಳೆ.

ವರನ ವರ್ತನೆ ಕಂಡು ಕೋಪಗೊಂಡ ವಧು ಮೊದಲು ಆತನನ್ನು ತಳ್ಳುತ್ತಾಳೆ. ಆದರೆ ವರ ಕೋಪಗೊಳ್ಳದೇ ಮುಗುಳುನಗುತ್ತಲೇ ಇರುತ್ತಾನೆ. ಇದರಿಂದ ಮತ್ತಷ್ಟು ಕೋಪಗೊಂಡ ವಧು, ಮನಬಂದಂತೆ ವರನಿಗೆ ಹೊಡೆಯುತ್ತಾಳೆ. ಅಷ್ಟೇ ಅಲ್ಲದೇ ಕಾಲಿನಿಂದ ಒದ್ದು ವೇದಿಕೆಯಿಂದ ಹೊರಗೆ ಹಾಕುತ್ತಾಳೆ. ವಧುವಿನ ವರ್ತನೆ ಕಂಡು ಗಾಬರಿಯಾದ ಕುಟುಂಬಸ್ಥರು ಓಡೋಡಿ ಬಂದು ವರರನ್ನು ರಕ್ಷಿಸುತ್ತಾರೆ.

ಇಷ್ಟಕ್ಕೆ ಸುಮ್ಮನಾಗದ ವಧು ಮತ್ತೆ ಮತ್ತೆ ಆತನಿಗೆ ಹೊಡೆಯಲು ಹೋಗುತ್ತಾಳೆ, ಥು..ಥು ಎಂದು ಬಾಯಲ್ಲಿದ್ದ ಸಿಹಿಯನ್ನು ಆತನಿಗೆ ಉಗಿಯುತ್ತಾಳೆ. ಕೂಡಲೇ ಸ್ಥಳದಲ್ಲಿದ್ದವರು ಆಕೆಯನ್ನು ಸಮಾಧಾನ ಮಾಡಲು ಪ್ರಯತ್ನಿಸುತ್ತಾರೆ. ಹಾಗೂ ವರನನ್ನು ಅಲ್ಲಿಂದ ಕರೆ ತರುತ್ತಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇಲ್ಲಿ ವಧು ವರನ ಮೇಲೆ ಹಲ್ಲೆ ಮಾಡಿದ ವಿಚಾರ ಗಂಭೀರವಾಗಿದ್ದರೂ, ಸನ್ನಿವೇಶ ಮಾತ್ರ ಸಖತ್‌ ತಮಾಷೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+