ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಐಸಿಸಿ ಅಧ್ಯಕ್ಷ ಸ್ಥಾನ 2022 ಚುನಾವಣೆ: ಖರ್ಗೆ ವಿರುದ್ಧ ತರೂರ್ ಸೆಣಸು

|
Google Oneindia Kannada News

ಭಾರತದಲ್ಲಿ ಬರೋಬ್ಬರಿ 26 ವರ್ಷಗಳ ನಂತರದಲ್ಲಿ ಮೊದಲ ಬಾರಿಗೆ ದಕ್ಷಿಣ ಭಾರತದ ನಾಯಕರಿಗೆ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರ ಸ್ಥಾನ ಒಲಿದು ಬರುತ್ತಿದೆ. ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅಥವಾ ಕೇರಳದ ಶಶಿ ತರೂರ್ ಕೈ ಪಾರ್ಟಿಯ ಮುಂದಿನ ಸಾರಥಿ ಆಗಲಿದ್ದಾರೆ.

ಇದರ ಜೊತೆಗೆ 24 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಗಾಂಧಿ ಕುಟುಂಬಸ್ಥರು ಸ್ಪರ್ಧೆಯಿಂದ ಹೊರಗುಳಿದಿದ್ದು, ಹೊಸ ನಾಯಕರನ್ನು ಕಾಂಗ್ರೆಸ್ ಕಾಣಲಿದೆ. 2000ರಲ್ಲಿ ಜಿತೇಂದ್ರ ಪ್ರಸಾದ ವಿರುದ್ಧ ಸೋನಿಯಾ ಗಾಂಧಿ ಭಾರಿ ಅಂತರದಿಂದ ಗೆಲುವು ಸಾಧಿಸಿ ಎಐಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದರು.

1997ಕ್ಕೂ ಮೊದಲು ತ್ರಿಕೋನ ಸ್ಪರ್ಧೆಯನ್ನು ಕಾಣಬಹುದಾಗಿತ್ತು. ಸೀತಾರಾಂ ಕೇಸರಿ, ಶರದ್ ಪವಾರ್ ಹಾಗೂ ರಾಜೇಶ್ ಪೈಲಟ್ ನಡುವಿನ ಹಣಾಹಣಿಯಲ್ಲಿ ಸೀತಾರಾಂ ಕೇಸರಿ ಜಯಭೇರಿ ಬಾರಿಸಿದ್ದರು.

26 ವರ್ಷಗಳಲ್ಲೇ ಹೊಸ ದಾಖಲೆ: ದಕ್ಷಿಣ ಭಾರತದ ನಾಯಕನಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಸ್ಥಾನ!26 ವರ್ಷಗಳಲ್ಲೇ ಹೊಸ ದಾಖಲೆ: ದಕ್ಷಿಣ ಭಾರತದ ನಾಯಕನಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಸ್ಥಾನ!

2022ರ ಚುನಾವಣೆಯಲ್ಲಿ ಹಲವು ನಾಯಕರ ಹೆಸರು ಕೇಳಿ ಬಂದರೂ ಅಶೋಕ್ ಗೆಹ್ಲೋಟ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ಸ್ಪರ್ಧಿಸುವ ಬಗ್ಗೆ ಅಂತಿಮಗೊಂಡಿತ್ತು. ಕೊನೆಯಲ್ಲಿ ಸ್ಪರ್ಧೆಯಿಂದ ಗೆಹ್ಲೋಟ್ ಹಿಂದೆ ಸರಿದ ಬಳಿಕ ಖರ್ಗೆ ವಿರುದ್ಧ ತರೂರ್ ಹಣಾಹಣಿ ಕುತೂಹಲ ಕೆರಳಿಸಿತು. ಅಕ್ಟೋಬರ್ 17ರಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಬ್ಯಾಲೆಟ್ ಪತ್ರದ ಬಳಸಿ ಮತದಾನ ಹಾಗೂ ಮತ ಎಣಿಕೆ ಕಾರ್ಯ ಅಕ್ಟೋಬರ್ 19ರಂದು ದೆಹಲಿಯಲ್ಲಿ ನಡೆಯಲಿದೆ.

2022ರ ಎಐಸಿಸಿ ಚುನಾವಣೆ

2022ರ ಎಐಸಿಸಿ ಚುನಾವಣೆ

ಎಐಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ನಡೆಯಲಿರುವ ಚುನಾವಣೆಗೆ ಹೈಕಮಾಂಡ್ ಬೆಂಬಲಿತ ಅಭ್ಯರ್ಥಿ ಆಗಿ ಮಲ್ಲಿಕಾರ್ಜುನ್ ಖರ್ಗೆ ಸ್ಪರ್ಧಿಸಿದರೆ, ಕೇರಳದ ಶಶಿ ತರೂರ್ ಪ್ರತಿಸ್ಪರ್ಧಿ ಆಗಿ ಕಣಕ್ಕೆ ಇಳಿದಿದ್ದಾರೆ. ಇಬ್ಬರು ಅಭ್ಯರ್ಥಿಗಳು ಸೆಪ್ಟೆಂಬರ್ 30ರಂದು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಯು ಅಕ್ಟೋಬರ್ 17ರಂದು ನಡೆಯಲಿದ್ದು, ಫಲಿತಾಂಶವು ಅಕ್ಟೋಬರ್ 19ರಂದು ಹೊರ ಬೀಳಲಿದೆ. ಒಟ್ಟು 9100 ಕಾಂಗ್ರೆಸ್ ನಾಯಕರು ಈ ಚುನಾವಣೆಯಲ್ಲಿ ಮತದಾನ ಮಾಡಲಿದ್ದು, ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.

ಖರ್ಗೆ ಅಧ್ಯಕ್ಷರಾದರೆ ಕರ್ನಾಟಕ ಕಾಂಗ್ರೆಸ್‌ಗೆ ಆಗುವ ಲಾಭಗಳು!
ಮತದಾನ ಪ್ರಕ್ರಿಯೆ

ಮತದಾನ ಪ್ರಕ್ರಿಯೆ

ಮತದಾನ ಪ್ರಕ್ರಿಯೆ: ಎಲ್ಲಾ ರಾಜ್ಯ ಘಟಕ(ಪ್ರದೇಶ ಕಾಂಗ್ರೆಸ್ ಸಮಿತಿ)ಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಮತದಾನಕ್ಕೆ ವೇದಿಕೆ ಸಜ್ಜಾಗಿದೆ. ಈ ನಡುವೆ ಸದ್ಯ ಕರ್ನಾಟಕ -ಆಂಧ್ರಪ್ರದೇಶದಲ್ಲಿ ಭಾರತ್ ಜೋಡೋ ಯಾತ್ರೆ ಜಾರಿಯಲ್ಲಿದ್ದು, ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ರಾಹುಲ್ ಗಾಂಧಿ ಅವರು ಬಳ್ಳಾರಿಯಲ್ಲಿ 40ಕ್ಕೂ ಅಧಿಕ ಕಾಂಗ್ರೆಸ್ ಪ್ರತಿನಿಧಿಗಳ ಜೊತೆಗೆ ಬಳ್ಳಾರಿಯ ಸಂಗನಕಲ್ಲು ಮತಗಟ್ಟೆಯಲ್ಲಿ ಮತ ಚಲಾಯಿಸಲಿದ್ದಾರೆ. ಚುನಾವಣೆಯಿಂದಾಗಿ ಈ ವಾರದಲ್ಲಿ ಭಾರತ್ ಜೋಡೋ ಯಾತ್ರೆಗೆ ತಾತ್ಕಾಲಿಕ ಬ್ರೇಕ್ ಸಿಕ್ಕರೂ ಕರ್ನಾಟಕದಿಂದ ಆಂಧ್ರಕ್ಕೆ ಪಾದಯಾತ್ರೆ ಸಾಗಿದೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ; ತರೂರ್, ಖರ್ಗೆ ಭಿನ್ನ ಹಾದಿ?
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನ

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನ

ಕಾಂಗ್ರೆಸ್‌ನಲ್ಲಿ ಬೆಂಬಲವನ್ನು ನೋಡುತ್ತಿದ್ದರೆ ಮಲ್ಲಿಕಾರ್ಜುನ್ ಖರ್ಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗುವುದು ಬಹುತೇಕ ಪಕ್ಕಾ ಆಗಿದೆ. ಹಾಗೊಂದು ವೇಳೆ ಅಧ್ಯಕ್ಷ ಲಭಿಸಿದರೆ, ಕರ್ನಾಟಕದಿಂದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಸ್ಥಾನಕ್ಕೆ ಏರಿದ ಎರಡನೇ ನಾಯಕರಾಗಿ ಮಲ್ಲಿಕಾರ್ಜುನ್ ಖರ್ಗೆ ಗುರುತಿಸಿಕೊಳ್ಳಲಿದ್ದಾರೆ. ಈ ಹಿಂದೆ 1968-69ರಲ್ಲಿ ಪಕ್ಷವನ್ನು ಮುನ್ನಡೆಸಿದ್ದ ಹಿರಿಯ ಲಿಂಗಾಯತ ಸಮುದಾಯದ ನಾಯಕ ಎಸ್ ನಿಜಲಿಂಗಪ್ಪ ಆಗಿದ್ದರು. 1967ರ ಸೋಲಿನ ನಂತರ ದೇಶದ ಹಲವಾರು ಭಾಗಗಳಲ್ಲಿ ಕಾಂಗ್ರೆಸ್ ಚುನಾವಣಾ ಅಸಮಾಧಾನವನ್ನು ಎದುರಿಸಿದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಪಿವಿ ನರಸಿಂಹ ರಾವ್

ಪಿವಿ ನರಸಿಂಹ ರಾವ್

1992 ರಿಂದ 1996ರಲ್ಲಿ ಮೊದಲ ಬಾರಿಗೆ ದಕ್ಷಿಣ ಭಾರತದ ಪಿವಿ ನರಸಿಂಹ ರಾವ್ ಅವರಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಸ್ಥಾನವನ್ನು ನೀಡಲಾಗಿತ್ತು. ಅಲ್ಲಿಂದ ಮುಂದೆ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರ ಗದ್ದುಗೆಯಲ್ಲಿ ಸೋನಿಯಾ ಗಾಂಧಿಯವರೇ ಹೆಚ್ಚು ಹಿಡಿತ ಸಾಧಿಸಿದ್ದರು. ತದನಂತರದಲ್ಲಿ ರಾಹುಲ್ ಗಾಂಧಿ ಅದರ ಹೊಣೆ ಹೊತ್ತುಕೊಂಡರು. 2019ರ ಲೋಕಸಭಾ ಚುನಾವಣೆ ಸೋಲಿನ ಹೊಣೆ ಹೊತ್ತುಕೊಂಡು ಕುರ್ಚಿಯಿಂದ ಕೆಳಗಿಳಿದರು. ನಂತರ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಬಯಸದೆ ಸದ್ಯ ದೇಶದೆಲ್ಲೆಡೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

ಖರ್ಗೆ ಬಹುತೇಕ ಎಐಸಿಸಿ ಬಾಸ್: ದೆಹಲಿಯಲ್ಲಿ 5 ಕನ್ನಡಿಗರ ಕಲರವ
ಖರ್ಗೆ ಮತ್ತು ತರೂರ್

ಖರ್ಗೆ ಮತ್ತು ತರೂರ್

ಮತ ಪ್ರಚಾರ: ಪಕ್ಷದ ಮುಖ್ಯಸ್ಥರನ್ನು ಆಯ್ಕೆ ಮಾಡಲು ಎಲೆಕ್ಟ್ರೋಲ್ ಕಾಲೇಜನ್ನು ರೂಪಿಸುವ 9,000 ಕ್ಕೂ ಹೆಚ್ಚು ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಪ್ರತಿನಿಧಿಗಳ ಮುಂದೆ ಖರ್ಗೆ ಮತ್ತು ತರೂರ್ ಇಬ್ಬರೂ ಉಮೇದುವಾರಿಕೆ ಹಕ್ಕು ಸ್ಥಾಪಿಸಿ, ಮತ ಪ್ರಚಾರ ಕೈಗೊಂಡಿದ್ದಾರೆ. ಗಾಂಧಿ ಕುಟುಂಬಸ್ಥರು ತಟಸ್ಥರಾಗಿದ್ದರೂ ಖರ್ಗೆ ಅಧಿಕೃತ ಅಭ್ಯರ್ಥಿ, ತರೂರ್ ಪ್ರತಿಸ್ಪರ್ಧಿಯಾಗಿದ್ದು, ಬದಲಾವಣೆಗಾಗಿ ಸ್ಪರ್ಧಿಸಿರುವುದಾಗಿ ಹೇಳಿದ್ದಾರೆ. ಅಕ್ಟೋಬರ್ 16ರ ತನಕ ಉಭಯ ನಾಯಕರು ಬಿರುಸಿನ ಪ್ರಚಾರ ನಡೆಸಿದ್ದು, ಮತದಾನ ಪ್ರಕ್ರಿಯೆ, ಅಂತಿಮ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ.

English summary
Senior Congress leaders Mallikarjun Kharge and Shashi Tharoor battle it out for the AICC president post. All you need to know about Election and its history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X