Tata Car: ಶಿಘ್ರದಲ್ಲೇ ರಸ್ತೆಗಳಿಯಲಿದೆ ಲ್ಯಾಂಬೋರ್ಗಿನಿ ವಿನ್ಯಾಸದ ಟಾಟಾದ ಹೊಸ ಕಾರು-ಮಾಹಿತಿ
Tata Car: ಗ್ರಾಹಕರ ಬೇಡಿಕೆಗೆ ತಕ್ಕಂತೆ ಆಟೋಮೊಬೈಲ್ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಆಗುತ್ತಲೇ ಇವೆ. ಅದರಲ್ಲೂ ಇವಿ ವಾಹನಗಳು ಬಂದಾಗಿನಿಂದ ವಾಹನಗಳ ಮಾರಾಟದಲ್ಲಿ ಸ್ಪರ್ಧೆ ತುಸು ಹೆಚ್ಚಾಗಿದೆ. ಇದೀಗ ಟಾಟಾ ಮೋಟರ್ಸ್ ಗ್ರಾಹಕರ ಕೈಗೆಟಕುವ ದರದಲ್ಲಿ ಹೊಸ ಇವಿ ಕಾರನ್ನು ಮಾರುಕಟ್ಟೆಗೆ ತರಲು ಮುಂದಾಗಿದೆ. ಹಾಗಾದರೆ ಇದರ ವಿಶೇಷತೆ ಹಾಗೂ ಬೆಲೆಯ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಟಾಟಾ ಮೋಟಾರ್ಸ್ ಭಾರತದ ವಾಹನ ತಯಾರಿಕಾ ಬಹುದೊಡ್ಡ ಕಂಪನಿಯಾಗಿದೆ. ಇದರ ಪ್ರಧಾನ ಕಚೇರಿ ಮುಂಬೈನಲ್ಲಿದದ್ದು, ಇದು ಟಾಟಾ ಗ್ರೂಪ್‌ನ ಒಂದು ಭಾಗವಾಗಿದೆ. ಈ ಕಂಪನಿಯು ಕಾರು, ಟ್ರಕ್, ವ್ಯಾನ್ ಮತ್ತು ಬಸ್‌ಗಳನ್ನು ಉತ್ಪಾದನೆ ಮಾಡುತ್ತದೆ. ಟಾಟಾ ಮೋಟಾರ್ಸ್ ದೇಶದ ಜೆಮ್‌ಶೆಡ್‌ಪುರ, ಪಂತ್‌ನಗರ, ಲಕ್ನೋ, ಸನಂದ್, ಧಾರವಾಡ ಮತ್ತು ಪುಣೆಯಲ್ಲಿ ವಾಹನ ತಯಾರಿಕಾ ಘಟಕಗಳನ್ನು ಒಳಗೊಂಡಿದೆ.

ಅಷ್ಟೇ ಅಲ್ಲದೆ, ಈ ಕಂಪನಿಯು ಹೊರದೇಶಗಳಾದ ಅರ್ಜೆಂಟೈನಾ, ದಕ್ಷಿಣ ಆಫ್ರಿಕಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಥೈಲ್ಯಾಂಡ್‌ನಲ್ಲಿ ವಾಹನ ತಯಾರಿಕಾ ಮತ್ತು ವಾಹನ ಘಟಕಗಳನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.
ಇದೀಗ ಟಾಟಾ ಮೋಟಾರ್ಸ್ ಲಿಮಿಟೆಡ್ ಟಾಟಾ ಕರ್ವ್ ಇವಿ ಬಿಡುಗಡೆಗೊಳಿಸಲಿ ಮುಂದಾಗಿದ್ದು, ಇದು ಥೇಟ್ ಲ್ಯಾಂಬೋರ್ಗಿನಿ ಉರಸ್‌ನ ವಿನ್ಯಾಸವನ್ನು ಒಳಗೊಂದಿದ್ದು, ಈ ಹಿನ್ನೆಲೆ ಹೆಚ್ಚಿನ ಗ್ರಾಹಕರು ಇದು ಯಾವಾಗ ಮಾರುಕಟ್ಟೆಗೆ ಬರುತ್ತದೆ ಎಂದು ಖಾತರದಿಂದ ಕಾಯುತ್ತಿದ್ದಾರೆ. ಹಾಗಾದರೆ ಇದು ಯಾವಾಗ ಎಂಟ್ರಿ ಕೊಡಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಟಾಟಾ ಕರ್ವ್ ಇವಿ ಅನ್ನು 2024ರಲ್ಲೇ ಬಿಡುಗಡೆಗೊಳಿಸಲು ನಿರ್ಧರಿಸಲಾಗಿತ್ತು. ಟಾಟಾ ಮೋಟಾರ್ಸ್ ಮೊದಲು ತನ್ನ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದು, ನಂತರ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳನ್ನು ಬಿಡುವುದಾಗಿ ತಿಳಿಸಿತ್ತು.
ಈ ವರ್ಷ ಟಾಟಾ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲಿದ್ದು, ಇದಕ್ಕೆ ಟಾಟಾ ಕರ್ವಿ ಇವಿ ಎಂದು ಹೆಸರಿಡಲಾಗಿದೆ. ಇದು ಹೊಸ ವಿನ್ಯಾಸದಲ್ಲಿ ಬರಲಿದ್ದು, ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕಂಪನಿಯು 2024ರ ಮಧ್ಯದಲ್ಲಿ ಈ ಕಾರಿನ ಮಾರಾಟವನ್ನು ಪ್ರಾರಂಭಿಸಲು ಯೋಜಿಸಿತ್ತು. ಆದರೆ, ಇದು ಸಾಧ್ಯವಾಗಲಿಲ್ಲ. ಇದೀಗ ಈಗ ಇದೇ ವರ್ಷದ ಸೆಪ್ಟಂಬರ್‌ನಲ್ಲಿ ಅಥವಾ ಮುಂಬರುವ ವರ್ಷ ಮಾರುಕಟ್ಟೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.
ಇನ್ನು ಟಾಟಾ ಕರ್ವ್ ಇವಿ ಉತ್ಪಾದನೆಯು ಮುಂದಿನ ತಿಂಗಳು ಜೂನ್‌ನಿಂದ ಆರಂಭವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದ. ಇನ್ನು ಸೆಪ್ಟೆಂಬರ್ ಅಥವಾ ಮುಂದಿನ ವರ್ಷ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳನ್ನು ಬಿಡುಗಡೆ ಮಾಡಬಹುದು. ಈ ಕಾರು ನೆಕ್ಸಾನ್ ಅನ್ನು ಕೂಡ ಹೋಲುತ್ತದೆ ಹಾಗೂ ಇದರಲ್ಲಿ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಹಲವು ವಿಶೇಷ ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ.
ಟಾಟಾ ಕರ್ವ್ ವಿಶೇಷತೇ ಏನು?: ಕರ್ವ್ ಟಾಟಾ ನೆಕ್ಸಾನ್‌ಗಿಂತ 313 ಎಂಎಂ ಉದ್ದವಾಗಿದೆ. ಇದು 1.2 ಲೀಟರ್ ಸಾಮರ್ಥ್ಯದ ಮೂರು ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿದೆ. ಡೀಸೆಲ್ ರೂಪಾಂತರದಲ್ಲಿ, ನೆಕ್ಸಾನ್‌ನಂತೆ 1.5 ಲೀಟರ್ ಸಾಮರ್ಥ್ಯದ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿರುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದು ಸಂಪೂರ್ಣವಾಗಿ ಚಾರ್ಜ್ ಮಾಡಿದ ನಂತರ, 450-500 ಕಿಲೋ ಮೀಟರ್‌ವರೆಗೂ ಮೈಲೇಜ್ ಕೊಡಲಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications