ಎಲ್ಲಾ ದ್ವಿಚಕ್ರ ವಾಹನಗಳಿಗೂ ಸೆಡ್ಡು ಹೊಡೆಯಲಿದೆ ಅತೀ ಕಡಿಮೆ ಬೆಲೆಯ ಟಾಟಾದ ಎಲೆಕ್ಟ್ರಿಕ್ ಸ್ಕೂಟರ್
ಭಾರದತದ ದೈತ್ಯ ಕಂಪನಿಗೊಳಲ್ಲೊಂದಾದ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಟಾಟಾ ಹೊಸ ಮಾದರಿಯ ವಾಹನಗಳನ್ನು ಬಿಡುಗಡೆ ಮಾಡುತ್ತಲೇ ಇದ್ದು, ಈ ಮೂಲಕ ಗ್ರಾಹಕರನ್ನು ಸೆಳೆಯುವ ಕೆಲಸ ಮಾಡುತ್ತಿದೆ. ಇದೀಗ ಅತೀ ಕಡಿಮೆ ಬೆಲೆಯ, ಹೆಚ್ಚು ಮೈಲೇಜ್ ನೀಡುವ ಎಲೆಕ್ಟ್ರಿಕ್ ಸ್ಕೂಟಿಯನ್ನು ಬಿಡುಗಡೆ ಮಾಡಲು ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಮಾಹಿತಿ ಇಲ್ಲಿದೆ ತಿಳಿಯಿರಿ.
ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ 270 ಕಿಲೋ ಮೀಟರ್‌ಗಳವರೆಗೆ ಮೈಲೇಜ್ ನೀಡಲಿದೆ ಎನ್ನುವ ಬಗ್ಗೆ ಸುದ್ದಿಗಳು ಹರಿದಾಡುತ್ತಿದೆ. ಆದರೆ ಟಾಟಾದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ.

ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಡಿಜಿಟಲ್ ಡಿಸ್ಪ್ಲೇ, ಡಿಸ್ಕ್ ಬ್ರೇಕ್, ಯುಎಸ್‌ಬಿ ಚಾರ್ಜಿಂಗ್, ಸೆಕ್ಯೂರಿಟಿ ಅಲಾರಂ ಸೇರಿ ಇನ್ನು ಹಲವು ಸೌಲಭ್ಯಗಳು ಇರಲಿದ್ದು, 90 ಕಿಲೋ ಮೀಟರ್‌ಗಳ ಟಾಪ್ ಸ್ಪೀಡ್‌ನಲ್ಲಿ ಸಹ ಚಲಿಸುವಂತಹ ಸಾಮರ್ಥ್ಯವನ್ನು ಹೊಂದಿದೆ. ಈ ಮೂಲಕ ಇನ್ನಿತರ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಇದು ಪ್ರತಿಸ್ಪರ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇದು ಕೇವಲ ಎರಡೇ ಗಂಟೆಗಳಲ್ಲೇ ಫುಲ್ ಚಾರ್ಜ್ ಆಗಲಿದ್ದು, ಗ್ರಾಹಕರನ್ನು ತನ್ನೆಡೆಗೆ ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಟಾಟಾ ಸಂಸ್ಥೆಯ ಈ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷದ ಅಂತ್ಯದೊಳಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎಂದು ತಿಳಿದುಬಂದಿದ್ದು, ಮೊದಲ ಹಂತದಲ್ಲಿ ಭಾರತದ ಕೆಲವೊಂದು ನಗರ ಭಾಗದ ಪ್ರದೇಶಗಳಲ್ಲಿ ಮಾತ್ರ ಇದು ಬಿಡುಗಡೆ ಆಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಮೂಲಗಳ ಪ್ರಕಾರ ಇದರ ಎಕ್ಸ್ ಶೋರೂಂ ಬೆಲೆ 67,000 ರೂಪಾಯಿ ಆಗಿದ್ದು, 2,200 ರೂಪಾಯಿಗಳ ಪ್ರತಿ ತಿಂಗಳ ಇಎಂಐ ಕಂತಿನ ರೂಪದಲ್ಲಿ ಸಹ ಇದನ್ನು ಸಾಲ ರೂಪದಲ್ಲಿ ಖರೀದಿ ಮಾಡುವಂತಹ ಅವಕಾಶವಿದೆ ಅಂತೂ ತಿಳಿದುಬಂದಿದೆ. ಆದರೆ ಈ ಬಗ್ಗೆ ಟಾಟಾದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.











Click it and Unblock the Notifications